ಭಾರತ ತಂಡವು ಜುಲೈ 26ರಿಂದ ಗಾಲೆಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ಆನಂತರ ಗಾಲೆ ಮತ್ತು ಪಲ್ಲೆಕೆಲೆಯಲ್ಲಿ ಮತ್ತೆರಡು ಟೆಸ್ಟ್ ಪಂದ್ಯವನ್ನಾಡಲಿದೆ.

ಕೊಲಂಬೊ(ಜು.21): ಭಾರತದ ವಿರುದ್ಧ ಇದೇ ತಿಂಗಳು ಕೊನೆಯಲ್ಲಿ ಆರಂಭವಾಗಲಿರುವ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಶ್ರೀಲಂಕಾ ತಂಡವನ್ನು ಹಿರಿಯ ಎಡಗೈ ಸ್ಪಿನ್ನರ್ ರಂಗನಾ ಹೆರಾತ್ ಮುನ್ನಡೆಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶ್ರೀಲಂಕಾ ಟೆಸ್ಟ್ ತಂಡದ ನೂತನ ನಾಯಕ ದಿನೇಶ್ ಚಾಂಡಿಮಲ್ ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಚಾಂಡೀಮಲ್ ನ್ಯೂಮೋನಿಯಾದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಚಾಂಡೀಮಲ್ ಅನುಪಸ್ಥಿತಿಯಲ್ಲಿ ಶ್ರೀಲಂಕಾ ತಂಡವನ್ನು ರಂಗನಾ ಹೆರಾತ್ ಮುನ್ನಡೆಸಲಿದ್ದಾರೆ.

ಜಿಂಬಾಬ್ವೆ ವಿರುದ್ಧ 3-2 ರಿಂದ ಏಕದಿನ ಸರಣಿ ಸೋತ ಬಳಿಕ ಆ್ಯಂಜೆಲೋ ಮ್ಯಾಥ್ಯೂಸ್ ಬದಲು ಟೆಸ್ಟ್‌'ಗೆ ಚಾಂಡಿಮಲ್ ಮತ್ತು ಸಿಮಿತ ಓವರ್‌'ಗಳಿಗೆ ಉಪುಲ್ ತರಂಗ ಅವರನ್ನು ಶ್ರೀಲಂಕಾ ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು.

ಭಾರತ ತಂಡವು ಜುಲೈ 26ರಿಂದ ಗಾಲೆಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ಆನಂತರ ಗಾಲೆ ಮತ್ತು ಪಲ್ಲೆಕೆಲೆಯಲ್ಲಿ ಮತ್ತೆರಡು ಟೆಸ್ಟ್ ಪಂದ್ಯವನ್ನಾಡಲಿದೆ.