3ನೇ ಟೆಸ್ಟ್'ಗೆ ಮತ್ತೊಂದು ಆಘಾತ
ಕೊಲಂಬೊ(ಆ.08): 0-2 ಅಂತರದಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಈಗಾಗಲೇ ಭಾರತಕ್ಕೆ ಬಿಟ್ಟುಕೊಟ್ಟಿರುವ ಶ್ರೀಲಂಕಾಗೆ 3ನೇ ಟೆಸ್ಟ್‌ಗೂ ಮುನ್ನ ಮತ್ತೊಂದು ಆಘಾತ ಎದುರಾಗಿದೆ. ಪ್ರಮುಖ ಸ್ಪಿನ್ನರ್ ರಂಗನಾ ಹೆರಾತ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಪಲ್ಲೆಕಲ್ಲೆಯಲ್ಲಿ ಆ.12ರಿಂದ ಆರಂಭಗೊಳ್ಳಲಿರುವ 3ನೇ ಟೆಸ್ಟ್‌ನಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ.
ಚಾಂಡಿಮಲ್ ಅನುಪಸ್ಥಿತಿಯಲ್ಲಿ ಹೆರಾತ್ ಮೊದಲ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸಿದ್ದರು. ಸರಣಿಯಲ್ಲಿ ಹೆರಾತ್ 91 ಓವರ್ ಬೌಲ್ ಮಾಡಿದ್ದಾರೆ. ಈಗಾಗಲೇ ತಂಡದಿಂದ ಆಲ್ರೌಂಡರ್ ಅಸೆಲಾ ಗುಣರತ್ನೆ ಹಾಗೂ ವೇಗಿ ನುವಾನ್ ಪ್ರದೀಪ್ ಹೊರಬಿದ್ದಿದ್ದಾರೆ.
