ಆಗಸ್ಟ್ 12ರಿಂದ 16ರವರೆಗೆ ನಡೆಯಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್'ನಲ್ಲಿ ಹೆರಾತ್ ಕಾಣಿಸಿಕೊಳ್ಳುತ್ತಿಲ್ಲ.  

ಕೊಲಂಬೊ(ಆ.08): ಈಗಾಗಲೇ ಭಾರತದ ವಿರುದ್ಧ 0-2 ಅಂತರದಲ್ಲಿ ಸರಣಿ ಕೈಚೆಲ್ಲಿರುವ ಶ್ರೀಲಂಕಾಗೆ ಇದೀಗ ಮತ್ತೊಂದು ಶಾಕ್ ಎದುರಾಗದೆ.

ಶ್ರೀಲಂಕಾ ತಂಡದ ಪ್ರಮುಖ ಸ್ಪಿನ್ನರ್ ರಂಗನಾ ಹೆರಾತ್ ಬೆನ್ನು ನೋವಿಗೆ ಒಳಗಾಗಿದ್ದು, ಪಲ್ಲೆಕಲ್ಲೆ ಟೆಸ್ಟ್'ನಿಂದ ಹೊರಬಿದ್ದಿದ್ದಾರೆ. ಆಗಸ್ಟ್ 12ರಿಂದ 16ರವರೆಗೆ ನಡೆಯಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್'ನಲ್ಲಿ ಹೆರಾತ್ ಕಾಣಿಸಿಕೊಳ್ಳುತ್ತಿಲ್ಲ.
ದಿನೇಶ್ ಚಾಂಡಿಮಲ್ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಹೆರಾತ್ ಮುನ್ನಡೆಸಿದ್ದರು.

ಈಗಾಗಲೇ ಗಾಯದ ಸಮಸ್ಯೆಯಿಂದಾಗಿ ಲಂಕಾ ತಂಡದಿಂದ ಆಲ್ರೌಂಡರ್ ಅಸೆಲಾ ಗುಣರತ್ನೆ ಹಾಗೂ ನುವಾನ್ ಪ್ರದೀಪ್ ಹೊರಬಿದ್ದಿದ್ದು ಲಂಕಾ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.