ಪಾಕಿಸ್ತಾನದ ಮಾಜಿ ಬ್ಯಾಟ್ಸ್'ಮನ್ ರಮೀಜ್ ರಾಜಾಗೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ನೀಡುತ್ತಿರುವ 'ಎ' ಗ್ರೇಡ್ ಕಾಂಟ್ರಾಕ್ಟ್ ಕುರಿತಾಗಿ ಮಾತೆತ್ತಿ ಸದ್ಯ ವಿವಾದಕ್ಕೀಡಾಗಿದ್ದಾರೆ. ಧೋನಿ ಕುರಿತಾಗಿ ಮಾತೆತ್ತಿದ ಪಾಕ್ ಮಾಜಿ ಕ್ರಿಕಟಿಗನಿಗೆ ಭಾರತೀಯ ಅಭಿಮಾನಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ಭರ್ಜರಿಯಾಗಿ ಟೀಕಿಸಿದ್ದಾರೆ
ಇಸ್ಲಮಾಬಾದ್(ಜು.06): ಪಾಕಿಸ್ತಾನದ ಮಾಜಿ ಬ್ಯಾಟ್ಸ್'ಮನ್ ರಮೀಜ್ ರಾಜಾಗೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ನೀಡುತ್ತಿರುವ 'ಎ' ಗ್ರೇಡ್ ಕಾಂಟ್ರಾಕ್ಟ್ ಕುರಿತಾಗಿ ಮಾತೆತ್ತಿ ಸದ್ಯ ವಿವಾದಕ್ಕೀಡಾಗಿದ್ದಾರೆ. ಧೋನಿ ಕುರಿತಾಗಿ ಮಾತೆತ್ತಿದ ಪಾಕ್ ಮಾಜಿ ಕ್ರಿಕಟಿಗನಿಗೆ ಭಾರತೀಯ ಅಭಿಮಾನಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ಭರ್ಜರಿಯಾಗಿ ಟೀಕಿಸಿದ್ದಾರೆ
ವಾಸ್ತವವಾಗಿ ಪಾಕ್ ಆಟಗಾರ 'ಅಂತರಾಷ್ಟ್ರೀಯ ಕ್ರಿಕೆಟ್ ಪರಿಷತ್(ICC) ಗೆ ವರ್ಷವೊಂದರಲ್ಲಿ ಎರಡು ತಿಂಗಳು ಕೇವಲ ಟೆಸ್ಟ್ ಪಂದ್ಯಗಳಿಗಾಗಿಯೇ ಮೀಸಲಿಡಬೇಕು. ಇದರಿಂದಾಗಿ ಕ್ರಿಕೆಟ್'ನ ಈ ದೀರ್ಘ ಫಾರ್ಮೆಟ್'ನ್ನು ಉಳಿಸಿಕೊಂಡಂತಾಗುತ್ತದೆ' ಎಂದು ಆಗ್ರಹಿಸಿದ್ದರು. MCC ವರ್ಲ್ಡ್ ಕ್ರಿಕೆಟ್ ಸಮಿತಿಯ ಸದಸ್ಯರಾಗಿರುವ ರಮೀಜ್ ರಾಜಾ 'ಇಂಗ್ಲೆಂಡ್'ನಂತಹ ದೇಶಗಳಲ್ಲಿ ಇಂದಿಗೂ ಕೇವಲ ಟೆಸ್ಟ್ ಪಂದ್ಯಗಳನ್ನು ವೀಕ್ಷಿಸಲು ಜನರು ಹಿಂಡೇ ತಲುಪುತ್ತದೆ. ಆದರೆ ಏಷ್ಯಾ ಭಾಗದ ರಾಷ್ಟ್ರಗಳಲ್ಲಿ IPL ನಂತಹ ದೇಶೀಯ ಟಿ 20 ಪಂದ್ಯಗಳಿಂದಾಗಿ ಜನರಲ್ಲಿ ಟೆಸ್ಟ್ ಮೇಲಿನ ಅಭಿರುಚಿ ಕುಂಟಿತವಾಗುತ್ತಿದೆ' ಎಂದಿದ್ದರು.
ಇಷ್ಟೇ ಅಲ್ಲದೆ 'ಟೆಸ್ಟ್ ಪಂದ್ಯಗಳ ಮೇಲಿನ ಜನರ ಅಭಿರುಚಿ ಕುಂಟಿತಗೊಳ್ಳುವಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಗೂ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಂತಹ ರಾಷ್ಟ್ರೀಯ ಕ್ರೀಡಾ ನಿಯಂತ್ರಣ ಸಂಸ್ಥೆಗಳ ಪಾಲೂ ಇದರಲ್ಲಿದೆ' ಎಂಬುವುದನ್ನು ಅವರು ಉಲ್ಲೇಖಿಸಿದ್ದರು. ತಮ್ಮ ಈ ಮಾತು ಸಾಬೀತುಪಡಿಸುವ ಸಲುವಾಗಿ ಟೀಂ ಇಂಡಿಯಾದ ಮಾಜಿ ನಾಯಕ ಧೋನಿಗೆ BCCI ನೀಡುತ್ತಿರುವ 'ಎ' ಗ್ರೇಡ್ ವೇತನದ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿದ ರಮೀಜ್ 'ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನೂ ನೀವು ಗೌರವಿಸಬೇಕಾಗುತ್ತದೆ. ಅದನ್ನೂ ಸಮನಾಗಿ ಸ್ವೀಕರಿಸಬೇಕಾಗುತ್ತದೆ. ಹೀಗೆ ಮಾಡುವುದು ಕ್ರಿಕೆಟ್ ಬೋರ್ಡ್'ಗಳ ವತಿಯಿಂದ ಆಗಬೇಕು. ಅದರಲ್ಲೂ ಏಷ್ಯಾದ ರಾಷ್ಟ್ರಗಳಲ್ಲಿರುವ ಕ್ರಿಕೆಟ್ ಮಂಡಳಿಗಳು ಇಂತಹ ಕೆಲಸವನ್ನಾರಂಭಿಸಬೇಕು. ಉದಾಹರಣೆಗೆ ಎಮ್'ಎಸ್ ಧೋನಿ ಟೆಸ್ಟ್ ಕ್ರಿಕೆಟ್ ಪಂದ್ಯದಿಂದ ನಿವೃತ್ತರಾಗಿದ್ದಾರೆ. ಹೀಗಿದ್ದಾರೂ BCCI ಮಾತ್ರ ಅವರಿಗಿನ್ನೂ 'ಎ' ಗ್ರೇಡ್ ಕಾಂಟ್ರಾಕ್ಟ್ ನೀಡುತ್ತಿದೆ. ಶಾಹಿದ್ ಅಫ್ರಿದಿಯ ವಿಚಾರದಲ್ಲೂ ಹೀಗೇ ಆಗಿದೆ. ಅಫ್ರಿದಿ ಕೂಡಾ ನಿವೃತ್ತಿ ಪಡೆದಿದ್ದಾರೆ ಆದರೆ ಅವರಿನ್ನೂ 'ಎ' ಗ್ರೇಡ್'ನ ವೇತನ ಪಡೆಯುತ್ತಿದ್ದಾರೆ' ಎಂದಿದ್ದರು.
ಆದರೆ ಪಾಕ್ ಆಟಗಾರನ ಈ ಮಾತು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮುನಿಸಿಗೆ ಕಾರಣವಾಗಿದೆ. ಇದೇ ಕಾರಣದಿಂದ ರಮೀಜ್'ನನ್ನು ಸಾಮಾಜಿಕ ಜಾಲಾತಾಣಳಲ್ಲಿ ಟ್ರೋಲ್ ಮಾಡಲಾರಂಭಿಸಿದ್ದಾರೆ. ಕೆಲ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅವರಿಗೆ ಸಲಹೆ ನೀಡಿದರೆ ಮತ್ತೆ ಕೆಲವರು ಅವರು ನೀಡುವ ಕಮೆಂಟ್ರಿಯನ್ನು ಪ್ರಸ್ತಾಪಿಸಿ ಕಾಲೆಳೆದಿದ್ದಾರೆ. ಇನ್ನೂ ಕೆಲವರು ಧೋನಿಯನ್ನು ಗೌರವಿಸಲು ಹೇಳಿದ್ದಾರೆ.
ಏಷ್ಯಾ ಭಾಗದಲ್ಲಿ ಟೆಸ್ಟ್ ಪಂದ್ಯ ಬಹಳಷ್ಟು ಒತ್ತಡದಲ್ಲಿದೆ. ಆದರೆ ಇದಕ್ಕಾಗಿ ಒಂದು ಯೋಜನೆ ರೂಪಿಸಿ ಟೆಸ್ಟ್ ಮ್ಯಾಚ್ ಚಾಂಪಿಯನ್ಶಿಪ್ ಆಯೋಜಿಸಿದರೆ ಎಲ್ಲವೂ ಅರಿಯಾಗುತ್ತದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲವಾದಲ್ಲಿ ಹೆಚ್ಚಿನ ಪ್ರಮಾಣದ ಹಣ ಕೇವಲ ಟಿ 20 ಲೀಗ್'ಗಳ ಮೇಲೆ ವ್ಯಯಿಸಬೇಕಾಗುತ್ತದೆ. ಇದರಿಂದ ಟೆಸ್ಟ್ ಪಂದ್ಯಗಳಿಗೆ ನಷ್ಟವಾಗುವುದರಲ್ಲಿ ಅನುಮಾನವಿಲ್ಲ ಎಂಬುವುದು ರಮೀಜ್ ಅಭಿಪ್ರಯಾವಾಗಿದೆ.
