ಭಾರತ ಮಹಿಳಾ ಕ್ರಿಕೆಟ್ ತಂಡದ ನೂತನ ಕೋಚ್ ಯಾರು?

Ramesh Powar named as interim coach for Women’s Cricket team
Highlights

ಟೀಂ ಇಂಡಿಯಾ ಮಹಿಳಾ ತಂಡಕ್ಕೆ ಬಿಸಿಸಿಐ ನೂತನ ಕೋಚ್ ಆಯ್ಕೆ ಮಾಡಿದೆ. ಆದರೆ ಹಂಗಾಮಿ ಕೋಚ್ ಆಗಿ ಆಯ್ಕೆ ಮಾಡಿರೋ ಬಿಸಿಸಿಐ ಶೀಘ್ರದಲ್ಲೇ ಸಂಪೂರ್ಣ ಅವಧಿ ಕೋಚ್ ಆಯ್ಕೆ ಮಾಡೋದಾಗಿ ಹೇಳಿದೆ. ಹಾಗಾದರೆ ಭಾರತ ಮಹಿಳಾ ತಂಡದ ನೂತನ ಕೋಚ್ ವಿವರ ಇಲ್ಲಿದೆ.

ಮುಂಬೈ(ಜು.16): ಟೀಂ ಇಂಡಿಯಾ ಮಹಿಳಾ ತಂಡದ ಕೋಚ್ ತುಷಾರ್ ಆರೋಥೆ ದಿಢೀರ್ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬಿಸಿಸಿಐ ಹಂಗಾಮಿ ಕೋಚ್ ಆಯ್ಕೆ ಮಾಡಿದೆ. ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ರಮೇಶ್ ಪವಾರ್ ಭಾರತ ಮಹಿಳಾ ತಂಡದ ಹಂಗಾಮಿ ಕೋಚ್ ಆಗಿ ಬಿಸಿಸಿಐ ಅಯ್ಕೆ ಮಾಡಿದೆ.

ಭಾರತೀಯ ಮಹಿಳಾ ಕ್ರಿಕೆಟಿಗರ ಜೊತೆಗಿನ ಜಟಾಪಟಿ ಬಳಿಕ ಕೋಚ್ ತುಷಾರ್ ಅರೋಥೆ ರಾಜಿನಾಮೆ ನೀಡಿದ್ದರು. ಹೀಗಾಗಿ ಬಿಸಿಸಿಐ ಹಂಗಾಮಿ ಕೋಚ್ ಆಯ್ಕೆ ಮಾಡಿದೆ. ಸಂಪೂರ್ಣ ಅವಧಿಯ ಕೋಚ್‌ಗಾಗಿ ಬಿಸಿಸಿಐ ಈಗಾಗಲೆೇ ಅರ್ಜಿ ಆಹ್ವಾನಿಸಿದೆ.

ನೂತನ ಕೋಚ್ ರಮೇಶ್ ಪವಾರ್ ಜುಲೈ 25ರಿಂದ ಮಹಿಳಾ ತಂಡದ ಜೊತೆ ಜವಾಬ್ದಾರಿ ಆರಂಭಿಸಲಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಆಯೋಜಿಸಿರುವ ತರಭೇತಿಯಲ್ಲಿ ಪವಾರ್ ಅಧೀಕೃತವಾಗಿ ಕೋಚ್ ಆಗಿ ಕಾರ್ಯರಂಭ ಮಾಡಲಿದ್ದಾರೆ.

ಇದನ್ನು ಓದಿ: ಜಟಾಪಟಿ ಬಳಿಕ ಟೀಂ ಇಂಡಿಯಾ ಮಹಿಳಾ ತಂಡದ ಕೋಚ್ ರಾಜಿನಾಮೆ

ಭಾರತದ ಪರ 2 ಟೆಸ್ಟ್ ಪಂದ್ಯದಿಂದ 6 ವಿಕೆಟ್ ಕಬಳಿಸಿರುವ ರಮೇಶ್ ಪವಾರ್, 31 ಏಕದಿನದಲ್ಲಿ 34 ವಿಕೆಟ್ ಉರುಳಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳಾ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಪ್ರತಿನಿಧಿಸಿದ್ದಾರೆ.
 

loader