ಕ್ರೀಡೆಯಲ್ಲೂ ರಾಜಕೀಯ ಮಾಡಿದರಾ ಕ್ರೀಡಾ ಸಚಿವರು..? ಹೊಸ ವಿವಾದದಲ್ಲಿ ರಾಥೋಡ್..!

sports | Wednesday, April 11th, 2018
Suvarna Web Desk
Highlights

ಕೇಂದ್ರ ಕ್ರೀಡಾ ಇಲಾಖೆಯಿಂದ ದೇಶದ ವಿವಿಧ ಕ್ರೀಡಾ ಸಂಸ್ಥೆಗಳು ಇ-ಮೇಲ್‌'ವೊಂದನ್ನು ಸ್ವೀಕರಿಸಿದ್ದು, ‘ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯ ಕ್ರೀಡಾಪಟುಗಳು ಗೆದ್ದ ಪದಕಗಳೆಷ್ಟು ಎಂದು ತಿಳಿಸುವಂತೆ ಸೂಚಿಸಲಾಗಿದೆ’. ಕ್ರೀಡಾ ಇಲಾಖೆಯ ಈ ನಡೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

ನವದೆಹಲಿ(ಏ.11): ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಭಾರತೀಯ ಕ್ರೀಡಾಪಟುಗಳು ಎಷ್ಟು ಪದಕಗಳನ್ನು ಗಳಿಸಿದ್ದಾರೆ ಎನ್ನುವುದನ್ನು ಲೆಕ್ಕ ಹಾಕುವಂತೆ ತಮ್ಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕೇಂದ್ರ ಕ್ರೀಡಾ ಇಲಾಖೆಯಿಂದ ದೇಶದ ವಿವಿಧ ಕ್ರೀಡಾ ಸಂಸ್ಥೆಗಳು ಇ-ಮೇಲ್‌'ವೊಂದನ್ನು ಸ್ವೀಕರಿಸಿದ್ದು, ‘ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯ ಕ್ರೀಡಾಪಟುಗಳು ಗೆದ್ದ ಪದಕಗಳೆಷ್ಟು ಎಂದು ತಿಳಿಸುವಂತೆ ಸೂಚಿಸಲಾಗಿದೆ’. ಕ್ರೀಡಾ ಇಲಾಖೆಯ ಈ ನಡೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

ಕಾಂಗ್ರೆಸ್ ಮಾಜಿ ಸಚಿವ ಮನೀಶ್ ತಿವಾರಿ ‘ರಾಥೋಡ್ ತಾವು 2004ರಲ್ಲಿ ಒಲಿಂಪಿಕ್ಸ್ ಪದಕ ಗೆದ್ದಾಗ ಯಾವ ಪಕ್ಷಕ್ಕೆ ಸೇರಿದವರಾಗಿದ್ದರು ಎಂದು ಹೇಳಲಿ’ ಎಂದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕ್ರೀಡಾ ಇಲಾಖೆ ‘ಮೋದಿ ಸರ್ಕಾರ ಸದ್ಯದಲ್ಲೇ 4 ವರ್ಷ ಪೂರೈಸಲಿದ್ದು ಅದಕ್ಕಾಗಿ ಮಾಹಿತಿ ಕಲೆಹಾಕಲಾಗುತ್ತಿದೆ. ಜತೆಗೆ ಮುಂದಿನ ಚುನಾವಣೆಯ ಪ್ರಣಾಳಿಕೆ ಸಿದ್ಧಪಡಿಸಲು ಸಹ ಇದು ನೆರವಾಗಲಿದೆ’ ಎಂದಿದೆ.

Comments 0
Add Comment

    Shreeramulu and Tippeswamy supporters clash

    video | Friday, April 13th, 2018
    Suvarna Web Desk