ನವದೆಹಲಿ(ಡಿ.13): ಮಣಿಪುರದ ಎಡಗೈ ವೇಗಿ ರೆಕ್ಸ್‌ ರಾಜಕುಮಾರ್‌ ಸಿಂಗ್‌, ಅನಂತಪುರದ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯವಾದ ಅಂಡರ್‌-19 ಕೂಚ್‌ ಬಿಹಾರ್‌ ಕ್ರಿಕೆಟ್‌ ಟೂರ್ನಿಯ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ, ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. 

 

 

ಇದರೊಂದಿಗೆ ರೆಕ್ಸ್‌, ಭಾರತದ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 2ನೇ ಇನಿಂಗ್ಸ್‌ನಲ್ಲಿ ಅರುಣಾಚಲ ಪ್ರದೇಶ ಕೇವಲ 36 ರನ್‌ಗಳಿಗೆ ಆಲೌಟ್‌ ಆಯಿತು. 9.5 ಓವರ್‌ ಬೌಲಿಂಗ್‌ ಮಾಡಿದ ರೆಕ್ಸ್‌ 6 ಮೇಡನ್‌ ಸಹಿತ ಕೇವಲ 11 ರನ್‌ಗಳನ್ನು ನೀಡಿ 10 ವಿಕೆಟ್‌ ಪಡೆದರು.