ಹೈದರಬಾದ್(ಮಾ.29): ಸನ್ ರೈಸರ್ಸ್ ಹೈದರಾಬಾದ್ ವಿರುದ್ದದ ಐಪಿಎಲ್ 8 ಲೀಗ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಅಬ್ಬರಿಸಿದೆ. ಸಂಜು ಸಾಮ್ಸನ್ ಭರ್ಜರಿ ಶತಕ ಹಾಗೂ ನಾಯಕ ಅಜಿಂಕ್ಯ ರಹಾನೆ ಸಿಡಿಸಿದ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ 2 ವಿಕೆಟ್ ನಷ್ಟಕ್ಕೆ 198 ರನ್ ಸಿಡಿಸಿದೆ. ಈ ಮೂಲಕ SRH ಗೆಲುವಿಗೆ 199  ರನ್ ಟಾರ್ಗೆಟ್ ನೀಡಿದೆ.

ಇದನ್ನೂ ಓದಿ: ಕೊನೆ ಎಸೆತ ನೋ ಬಾಲ್: ಅಂಪೈರ್ ಮೇಲೆ ಕ್ರಿಕೆಟಿಗರು ಸಿಡಿಮಿಡಿ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ ಆರಂಭದಲ್ಲೇ ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು.  ಬಳಿಕ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ರಾಜಸ್ಥಾನ ವಿಕೆಟ್ ಉಳಿಕೊಂಡು ಅಬ್ಬರಿಸಲು ಆರಂಭಿಸಿತು. ನಾಯಕ ಅಜಿಂಕ್ಯ ರಹಾನೆ ಹಾಗೂ ಸಂಜು ಸಾಮ್ಸನ್ ಜವಾಬ್ದಾರಿಯುತ ಬ್ಯಾಟಿಂಗ್ ರಾಜಸ್ಥಾನ ತಂಡಕ್ಕೆ ನೆರವಾಯಿತು.

ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದ ರಹಾನೆ, ಹೈದರಾಬಾದ್ ವಿರುದ್ಧ 70 ರನ್ ಸಿಡಿಸಿದರು. ಇತ್ತ ಅಬ್ಬರಿಸಿದ ಸಂಜು ಸಾಮ್ಸನ್, ಹೈದರಾಬಾದ್ ಬೌಲರ್‌ಗಳ ಬೆವರಿಳಿಸಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ ಸಂಜು ಸಾಮ್ಸನ್ ಐಪಿಎಲ್ ಟೂರ್ನಿಯಲ್ಲಿ 2ನೇ ಶತಕ ಸಿಡಿಸಿದರು. ಇಷ್ಟೇ ಅಲ್ಲ 12ನೇ ಆವೃತ್ತಿಯಲ್ಲಿ ಮೊದಲ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. 

ಇದನ್ನೂ ಓದಿ: ಯುವಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದಾಗ ಚಹಾಲ್‌ಗೆ ನೆನಾಪಾಗಿದ್ದು ಇವರು!

ಸಾಮ್ಸನ್ ಅಜೇಯ 102 ರನ್ ಸಿಡಿಸಿದರೆ, ಬೆನ್ ಸ್ಟೋಕ್ಸ್ ಅಜೇಯ 16 ರನ್ ಭಾರಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 2 ವಿಕೆಟ್ ನಷ್ಟಕ್ಕೆ 198 ರನ್ ಸಿಡಿಸಿತು. ಇದೀಗ ಸನ್ ರೈಸರ್ಸ್ ಹೈದರಾಬಾದ್ ಗೆಲುವಿಗಾಗಿ ಬೃಹತ್ ಟಾರ್ಗೆಟ್ ಚೇಸ್ ಮಾಡಬೇಕಿದೆ.