ಬೆಂಗಳೂರು(ಮಾ.29): ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಗ್ಗರಿಸಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ತವರಿನಲ್ಲಿ ವಿರೋಚಿತ ಸೋಲಿನಿಂದ ಸತತ 2 ಪಂದ್ಯಗಳನ್ನು RCB ಕೈಚೆಲ್ಲಿದೆ. ಈ ಪಂದ್ಯ RCB ಸ್ಪಿನ್ನರ್ ಯಜುವೇಂದ್ರ ಚಹಾಲ್ ಪಾಲಿಗೆ ಸ್ಮರಣೀಯವಾಗಿತ್ತು.

ಇದನ್ನೂ ಓದಿ: ಕೊನೆ ಎಸೆತ ನೋ ಬಾಲ್: ಅಂಪೈರ್ ಮೇಲೆ ಕ್ರಿಕೆಟಿಗರು ಸಿಡಿಮಿಡಿ

ಚಹಾಲ್ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. ಆದರೆ ಒಂದು ಹಂತದಲ್ಲಿ ಚಹಾಲ್ ನಡುಗಿ ಹೋಗಿದ್ದರು. ಯುವರಾಜ್ ಸಿಂಗ್ ಅಬ್ಬರಿಸಲು ಆರಂಭಿಸಿದ್ದರು. ಈ ವೇಳೆ ಬೌಲಿಂಗ್ ಮಾಡಿದ ಚಹಾಲ್‌ಗೆ ಯುವಿ ಸತತ 3 ಸಿಕ್ಸರ್ ಸಿಡಿಸಿದರು. ಈ ವೇಳೆ ಚಹಾಲ್‌ಗೆ ಇಂಗ್ಲೆಂಡ್‌ ವೇಗಿ ಸ್ಟುವರ್ಟ್ ಬ್ರಾಡ್ ನೆನಪಾಗಿತ್ತು.

2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ಬೌಲಿಂಗ್ ಮಾಡಿದ ಸ್ಟುವರ್ಟ್ ಬ್ರಾಡ್‌‌ಗೆ ಹಿಗ್ಗಾ ಮುಗ್ಗಾ ಚಚ್ಚಿದ ಯುವಿ ಓವರ್‌ನ 6 ಎಸೆತಗಳನ್ನೂ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು.

ಇದನ್ನೂ ಓದಿ:ಮತ್ತೆ ಬ್ಯಾಟ್ ಹಿಡಿದು ಘರ್ಜಿಸಿದ ಸೌರವ್ ಗಂಗೂಲಿ!

ಮುಂಬೈ ವಿರುದ್ಧ ಚಹಾಲ್‌ಗೂ ಇದೇ ಅನುಭವ ಆಗಿತ್ತು. ಆದರೆ ಯುವಿ 3 ಸಿಕ್ಸರ್ ಸಿಡಿಸಿ, ನಾಲ್ಕನೇ ಸಿಕ್ಸರ್ ಸಿಡಿಸೋ ವೇಳೆ ಬೌಂಡರಿ ಲೈನ್ ಬಳಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಪಂದ್ಯದ ಬಳಿಕ ಯಜುವೇಂದ್ರ ಚಹಾಲ್ ಹೇಳಿಕೊಂಡಿದ್ದಾರೆ.