ಹರಾಜಿಗೂ ಮುನ್ನ ಯಾವ ಆಟಗಾರರನ್ನೂ ಉಳಿಸಿಕೊಳ್ಳದಿದ್ದರೂ, ಹರಾಜಿನಲ್ಲಿ ತಂಡ ‘ರೈಟ್ ಟು ಮ್ಯಾಚ್’ ಕಾರ್ಡ್ ಬಳಕೆ ಮಾಡಿ ಸ್ಮಿತ್, ರಹಾನೆಯನ್ನು ಖರೀದಿಸಲು ಚಿಂತನೆ ನಡೆಸಿದೆ.

ನವದೆಹಲಿ(ಡಿ.31): 2 ವರ್ಷಗಳ ನಿಷೇಧದ ಬಳಿಕ ಐಪಿಎಲ್'ಗೆ ವಾಪಸಾಗುತ್ತಿರುವ ರಾಜಸ್ಥಾನ ರಾಯಲ್ಸ್, 11ನೇ ಆವೃತ್ತಿಗೆ ಸ್ಟೀವ್ ಸ್ಮಿತ್, ರಹಾನೆಯನ್ನು ಉಳಿಸಿಕೊಳ್ಳದಿರಲು ನಿರ್ಧರಿಸಿದೆ ಎನ್ನಲಾಗಿದೆ.

8ನೇ ಆವೃತ್ತಿಯಲ್ಲಿ ತನ್ನ ತಂಡದಲ್ಲಿದ್ದ ಆಟಗಾರರನ್ನು ಈ ಬಾರಿ ಉಳಿಸಿಕೊಳ್ಳುವ ಅವಕಾಶವಿದೆ. ಹರಾಜಿಗೂ ಮುನ್ನ ಯಾವ ಆಟಗಾರರನ್ನೂ ಉಳಿಸಿಕೊಳ್ಳದಿದ್ದರೂ, ಹರಾಜಿನಲ್ಲಿ ತಂಡ ‘ರೈಟ್ ಟು ಮ್ಯಾಚ್’ ಕಾರ್ಡ್ ಬಳಕೆ ಮಾಡಿ ಸ್ಮಿತ್, ರಹಾನೆಯನ್ನು ಖರೀದಿಸಲು ಚಿಂತನೆ ನಡೆಸಿದೆ.

ಹರಾಜಿಗೂ ಮುನ್ನ ಉಳಿಸಿಕೊಂಡರೆ, ಆಟಗಾರರಿಗೆ ಹೆಚ್ಚಿನ ಸಂಭಾವನೆ ನೀಡಬೇಕಾಗುತ್ತದೆ. ಆದರೆ ಹರಾಜಿನಲ್ಲಿ ಆಟಗಾರರು ಎಷ್ಟು ಮೊತ್ತಕ್ಕೆ ಬಿಕರಿಯಾಗುತ್ತಾರೆ ಎಂಬುದನ್ನು ನೋಡಿಕೊಂಡು, ತಂಡಕ್ಕೆ ಸೇರಿಸಿಕೊಳ್ಳುವ ಕುರಿತು ನಿರ್ಧರಿಸಲಾಗುತ್ತದೆ ಎನ್ನಲಾಗಿದೆ.