ಟ್ರಿನಿಡಾಡ್(ಆ.14): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಗೆ ಕಂಟಕ ಎದುರಾಗಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು, 2ನೇ ಪಂದ್ಯಕ್ಕೆ ಮಳೆ ಅಡ್ಡಿ  ಪಡಿಸಿತ್ತು. ಇದೀಗ 3ನೇ ಹಾಗೂ ಅಂತಿಮ ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ಹೀಗಾಗಿ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ.

ಇದನ್ನೂ ಓದಿ: INDvWI 3ನೇ ಏಕದಿನ: ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್- 1 ಬದಲಾವಣೆ!

ದ್ವಿತೀಯ ಪಂದ್ಯ ಗೆದ್ದ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಹೀಗಾಗಿ ಅಂತಿಮ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳೋ ವಿಶ್ವಾಸದಲ್ಲಿತ್ತು. ಇತ್ತ ವಿಂಡೀಸ್, ಸರಣಿ ಸಮಬಲ ಮಾಡಲು ಸಜ್ಜಾಗಿತ್ತು. ಆದರೆ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ 1.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 8 ರನ್ ಸಿಡಿತ್ತು. ಅಷ್ಟರಲ್ಲೇ ಸುರಿದ ಮಳೆಯಿಂದ ಪಂದ್ಯ ತಾತ್ಕಾಲಿಕ ಸ್ಥಗಿತಕೊಂಡಿದೆ. ಸದ್ಯ ಮಳೆ ನಿಂತಿದ್ದು, ಶೀಘ್ರದಲ್ಲೇ ಪಂದ್ಯ ಆರಂಭಗೊಳ್ಳಲಿದೆ.