ಟ್ರಿನಿಡಾಡ್(ಆ.14): ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಇದೀಗ 3ನೇ ಹಾಗೂ ಅಂತಿಮ ಪಂದ್ಯಕ್ಕೆ ಸಜ್ಜಾಗಿದೆ. ಸರಣಿ ಸಮಬಲದ ವಿಶ್ವಾಸದಲ್ಲಿರುವ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಕುಲ್ದೀಪ್ ಯಾದವ್ ಬದಲು ಯಜುವೇಂದ್ರ ಚಹಾಲ್ ತಂಡ ಸೇರಿಕೊಂಡಿದ್ದಾರೆ.

ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದಾಗಿದೆ. 2ನೇ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಆದರೆ ದಿಟ್ಟ ಹೋರಾಟ ನೀಡಿದ ಟೀಂ ಇಂಡಿಯಾ ಡಕ್ವರ್ತ್ ನಿಯಮದ ಪ್ರಕಾರ 59 ರನ್ ಗೆಲುವು ಸಾಧಿಸಿತು. ಇದೀಗ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ವಿಂಡೀಸ್ ತಂಡಕ್ಕೆ ಸರಣಿ ಸಮಬಲ ಮಾಡಿಕೊಳ್ಳೋ ತವಕದಲ್ಲಿದ್ದರೆ, ಭಾರತ ಸರಣಿ ಗೆಲುವಿಗೆ ಹೊಂಚು ಹಾಕಿದೆ.