ಮಳೆ ನಿಂತ ಬಳಿಕ ಪಂದ್ಯವನ್ನು ತಲಾ 46 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ನಾಯಕ ಕೇನ್ ವಿಲಿಯಮ್ಸ್'ಯನ್  97 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ನೊಂದಿಗೆ 100 ರನ್,  ರೋಂಚಿ 43 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ನೊಂದಿಗೆ 65 ಹಾಗೂ ರಾಸ್ ಟೇಲರ್ 58 ಎಸತೆಗಳಲ್ಲಿ 6 ಬೌಂಡರಿಗಳೊಂದಿಗೆ 46 ರನ್ ಗಳಿಸುವುದರೊಂದಿಗೆ ಕೀವಿಸ್ ತಂಡವು 45 ಓವರ್‌ಗಳಲ್ಲಿ 291/10 ರನ್ ಗಳಿಸಿತು. 52/6 ವಿಕೇಟ್ ಗಳಿಸಿದ ಜೋಶ್ ಹೇಜಲ್‌ವುಡ್ ಆಸ್ಟ್ರೇಲಿಯಾ ಪರ ಯಶಸ್ವಿ ಬೌಲರ್ ಎನಿಸಿದರು.

ಬರ್ಮಿಂಗ್ಹ್ಯಾಮ್(ಜೂ.02): ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಮಳೆಯೇ ಹೆಚ್ಚು ಆಟವಾಡಿದ ಕಾರಣ ನ್ಯೂಜಿಲೆಂಡ್-ಆಸ್ಟ್ರೇಲಿಯಾ ತಂಡಗಳಿಗೆ ತಲಾ 1 ಅಂಕ ನೀಡಲಾಯಿತು.

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಶತಕಕದೊಂದಿಗೆ ತಂಡ ಉತ್ತಮ ಮೊತ್ತ ಗಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್‌ಗೆ ಲ್ಯೂಕ್ ರೊಂಚಿ ಹಾಗೂ ಮಾರ್ಟಿನ್ ಗಪ್ಟಿಲ್ ಉತ್ತಮ ಆರಂಭ ಒದಗಿಸಿದರು. ಆದರೆ 9.3 ಓವರ್‌ಗಳ ಆಟ ನಡೆದಿದ್ದಾಗ ಮಳೆ ಶುರುವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಆಟ ಸ್ಥಗಿತಗೊಂಡಿತ್ತು.

ಮಳೆ ನಿಂತ ಬಳಿಕ ಪಂದ್ಯವನ್ನು ತಲಾ 46 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ನಾಯಕ ಕೇನ್ ವಿಲಿಯಮ್ಸ್'ಯನ್ 97 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ನೊಂದಿಗೆ 100 ರನ್, ರೋಂಚಿ 43 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ನೊಂದಿಗೆ 65 ಹಾಗೂ ರಾಸ್ ಟೇಲರ್ 58 ಎಸತೆಗಳಲ್ಲಿ 6 ಬೌಂಡರಿಗಳೊಂದಿಗೆ 46 ರನ್ ಗಳಿಸುವುದರೊಂದಿಗೆ ಕೀವಿಸ್ ತಂಡವು ಒಟ್ಟಾರೆ 45 ಓವರ್‌ಗಳಲ್ಲಿ 291/10 ರನ್ ಗಳಿಸಿತು. 52/6 ವಿಕೇಟ್ ಗಳಿಸಿದ ಜೋಶ್ ಹೇಜಲ್‌ವುಡ್ ಆಸ್ಟ್ರೇಲಿಯಾ ಪರ ಯಶಸ್ವಿ ಬೌಲರ್ ಎನಿಸಿದರು.

33 ಓವರ್'ಗಳಲ್ಲಿ 235 ರನ್ ಗುರಿ : ಮತ್ತೆ ಮಳೆ ಬಂದ ಕಾರಣ ಆಸ್ಟ್ರೇಲಿಯಾಗೆ 33 ಓವರ್‌ಗಳಲ್ಲಿ 235 ರನ್‌ಗಳ ಗುರಿ ನೀಡಲಾಯಿತು. ತಂಡ 53 ರನ್'ಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಪುನಃ ವರಣ ಕಾಟ ಶುರುವಾಗಿ ನಿಲ್ಲಿಸದ ಕಾರಣ ಪಂದ್ಯ ರದ್ದುಗೊಳಿಸಲಾಯಿತು.

ಸಂಕ್ಷಿಪ್ತ ಸ್ಕೋರ್

ನ್ಯೂಜಿಲೆಂಡ್ 45 ಓವರ್‌ಗಳಲ್ಲಿ 291/10 (46 ಓವರ್)

(ರೊಂಚಿ 65(43),ವಿಲಿಯಮ್ಸನ್ 100(97), ರಾಸ್ ಟೇಲರ್ 46(58) )

ಹೇಜಲ್‌ವುಡ್ 52/6,

ಆಸ್ಟ್ರೇಲಿಯಾ 9 ಓವರ್‌ಗಳಲ್ಲಿ 53/3

(ಡೇವಿಡ್ ವಾರ್ನರ್ 18(16),ಮೋಸೆಸ್ ಹೆನ್ರಿಕ್ಸ್ 18(14) )

ಫಲಿತಾಂಶ: ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗೆ ತಲಾ 1 ಅಂಕ