ಮೋಡಕವಿದ ವಾತಾವರಣವಿರುತ್ತದೆ ಎನ್ನುವ ಕಾರಣ ಧರ್ಮಶಾಲಾ, ಮೊಹಲಿಯಲ್ಲಿ ನಡೆಯಲಿರುವ ಪಂದ್ಯಗಳನ್ನು ನಿಗದಿತ ಸಮಯಕ್ಕಿಂತ 2 ತಾಸು ಮೊದಲೇ ಆರಂಭಿಸಲು ಬಿಸಿಸಿಐ ಮೊದಲೇ ನಿರ್ಧರಿಸಿತ್ತು.

ಶಿಮ್ಲಾ(ಡಿ.09): ಭಾರತ- ಶ್ರೀಲಂಕಾ ನಡುವೆ ಧರ್ಮಶಾಲಾದಲ್ಲಿ ಭಾನುವಾರ ನಿಗದಿಯಾಗಿರುವ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆಯಿದೆ. ಭಾನುವಾರ ಧರ್ಮಶಾಲಾದಲ್ಲಿ ವ್ಯಾಪಕ ಮಳೆ ಆಗಲಿದ್ದು, ಮಂಜು ಮುಸುಕಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ಮುನ್ಸೂಚನೆ ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ, ‘ಮಳೆಬಿದ್ದರೆ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸಜ್ಜಾಗಿದ್ದೇವೆ. ಮೈದಾನವನ್ನು ಸ್ವಚ್ಛಗೊಳಿಸಲು ನಮ್ಮ ಬಳಿ 3 ಸೂಪರ್ ಸೋಕರ್‌'ಗಳಿವೆ’ ಎಂದಿದ್ದಾರೆ.

ಮೋಡಕವಿದ ವಾತಾವರಣವಿರುತ್ತದೆ ಎನ್ನುವ ಕಾರಣ ಧರ್ಮಶಾಲಾ, ಮೊಹಲಿಯಲ್ಲಿ ನಡೆಯಲಿರುವ ಪಂದ್ಯಗಳನ್ನು ನಿಗದಿತ ಸಮಯಕ್ಕಿಂತ 2 ತಾಸು ಮೊದಲೇ ಆರಂಭಿಸಲು ಬಿಸಿಸಿಐ ಮೊದಲೇ ನಿರ್ಧರಿಸಿತ್ತು.