ಧರ್ಮಶಾಲ(ಸೆ.15): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಉಭಯ ತಂಡಗಳು ಭರ್ಜರಿ ಅಭ್ಯಾಸ ನಡೆಸಿವೆ. ಆದರೆ ಮೊದಲ ಪಂದ್ಯ ಸಂಪೂರ್ಣವಾಗಿ ನಡೆಯುವುದು ಅನುಮಾನವಾಗಿದೆ. ಕಾರಣ ಧರ್ಮಶಾಲದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಪಂದ್ಯ ಆರಂಬ ವಿಳಂಬವಾಗಲಿದೆ. ಇಷ್ಟೇ ಅಲ್ಲ ಬಿಟ್ಟು ಬಿಡದೆ ಮಳೆ ಅಡ್ಡಿ ಪಡಿಸುತ್ತಿರುವುದರಿಂದ ಪಂದ್ಯಕ್ಕಾಗಿ ಮೈದಾನ ಸಜ್ಜುಗೊಳಿಸುವುದು ಅತೀ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ: ಮೊದಲ ಟಿ20 ಪಂದ್ಯಕ್ಕೆ ಸಂಭವನೀಯ ಟೀಂ ಇಂಡಿಯಾ; ಯಾರಿಗಿದೆ ಚಾನ್ಸ್?

ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಧರ್ಮಶಾಲದಲ್ಲಿ ಮಳೆಯಾಗುತ್ತಿರುವುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಧರ್ಮಶಾಲಾ ಕ್ರೀಡಾಂಗಣ ಉತ್ತಮ ಡ್ರೈನೇಜ್ ವ್ಯವಸ್ಥೆ ಹೊಂದಿದೆ. ಹೀಗಾಗಿ ಮೈದಾನವನ್ನು ಕಡಿಮೆ ಸಮಯದಲ್ಲಿ ತಯಾರಿ ಮಾಡುವ ಸಾಧ್ಯತೆಗಳಿವೆ ಎಂದಿದ್ದಾರೆ.

 

ಇದನ್ನೂ ಓದಿ: ಇಂದು ಇಂಡೋ-ಆಫ್ರಿಕಾ ಮೊದಲ ಟಿ20 ಕದನ

ವೆಸ್ಟ್ ಇಂಡೀಸ್ ಪ್ರವಾಸ ಯಶಸ್ವಿಯಾಗಿ ಮುಗಿಸಿರುವ ಭಾರತ, ಇಂದಿನಿಂದ(ಸೆ.15) ಸೌತ್ ಆಫ್ರಿಕಾ ವಿರುದ್ದ ಸರಣಿ ಆಡಲಿದೆ. ಹರಿಣಗಳ ವಿರುದ್ದ 3 ಟಿ20  ಹಾಗೂ 3 ಟೆಸ್ಟ್ ಪಂದ್ಯದ ಸರಣಿ ಆಡಲಿದೆ.