ಕಾನ್ಪುರ(ಸೆ.23): ಇಲ್ಲಿ ನಡೆಯುತ್ತಿರುವ ಭಾರತದ ಐತಿಹಾಸಿಕ ಟೆಸ್ಟ್ನ 2ನೇ ದಿನದಾಟಕ್ಕೆ ವರುಣ ಅಡ್ಡಿ ಪಡಿಸಿದ್ದಾನೆ. ಇಷ್ಟಾಗಿಯೂ ದಿನದಾಟದ ಗೌರವ ಸಂಪಾದಿಸುವಲ್ಲಿ ಕಿವೀಸ್ ಯಶಸ್ವಿಯಾಗಿದೆ. 2ನೇ ದಿನದಾಟದ ಆರಂಭದಲ್ಲಿ ಟೀಮ್ ಇಂಡಿಯಾ ಆಲೌಟ್ ಆಗುವ ಮೂಲ್ಕ 318ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು.

ಇನ್ನು ಕಿವೀಸ್ ಉತ್ತಮ ಆರಂಭದೊಂದಿಗೆ ಭಾರತೀಯ ಬೌಲರ್ಗಳಿಗೆ ಸವಾಲ್ ಆಗಿದ್ದಾರೆ. ನ್ಯೂಜಿಲೆಂಡ್ 1 ವಿಕೆಟ್ ನಷ್ಟಕ್ಕೆ 152ರನ್ ಮಾಡಿದ್ದಾಗ ಮಳೆ ಪಂದ್ಯಕ್ಕೆ ಅಡ್ಡಿ ಪಡಿಸಿತ್ತು. ಇನ್ನು ಲಾಥಮ್ ಹಾಗೂ ವಿಲಿಯಮ್ಸನ್ ತಲಾ ಅರ್ಧಶತಕ ದಾಖಲಿಸಿದ್ದು, 3ನೇ ದಿನಕ್ಕೆ ಆಟ ಆರಂಭಿಸಲಿದ್ದಾರೆ.

ನ್ಯೂಜಿಲ್ಯಾಂಡ್ ಸ್ಕೋರ್ 47 ಓವರ್'ಗಳಲ್ಲಿ 152/1

ಕೇನ್ ವಿಲಿಯಮ್ಸ್'ನ್ : 65 (115 ಎಸೆತ, 7 ಬೌಂಡರಿ)

ಟಾಮ್ ಲಾಥಮ್​​ : 56 (137 ಎಸೆತ, 5 ಬೌಂಡರಿ)

ಬೌಲಿಂಗ್: ಉಮೇಶ್ ಯಾದವ್ : 22/1