ರಾಹುಲ್ ದ್ರಾವಿಡ್ ಸಹಾಯದಿಂದ ಚಿನ್ನಕ್ಕೆ ಮುತ್ತಿಕ್ಕಿದ ಸ್ಪಪ್ನ ಬರ್ಮನ್
ಟೀಂ ಇಂಡಿಯಾ ಮಾಜಿ ನಾಯಕ, ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಪ್ರಚಾರ ಬಯಸುವವರಲ್ಲ. ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಸ್ವಪ್ನ ಬರ್ಮನ್ ಸೇರಿದಂತೆ 19 ಕ್ರೀಡಾಪಟುಗಳಿಗೆ ದ್ರಾವಿಡ್ ಆರ್ಥಿಕ ನೆರವು ನೀಡಿದ್ದಾರೆ. ಈ ಕುರಿತು ರೋಚಕ ಸ್ಟೋರಿ ಇಲ್ಲಿದೆ.
ಜಲ್ಪೈಗುರಿ(ಸೆ.02): ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಹೆಪ್ಟಥ್ಲಾನ್ ವಿಭಾಗದಲ್ಲಿ ಭಾರತದ ಸ್ವಪ್ನ ಬರ್ಮನ್ ಚಿನ್ನದ ಪದಕಕ್ಕೆ ಮುತ್ತಿಕ್ಕಿ ಐತಿಹಾಸಿಕ ಸಾಧನೆ ಮಾಡಿದ್ದರು. ಕಡು ಬಡತನದಲ್ಲಿ ಬೆಳೆದ ಸ್ಪಪ್ನ ಬರ್ಮನ್ ಸಾಧನೆ ಎಲ್ಲರಿಗೂ ಸ್ಪೂರ್ತಿಯಾಗಿದೆ. ಸ್ಪಪ್ನ ಬರ್ಮನ್ ಅವರ ಜಲ್ಪೈಗುರಿಯಿಂದ ಜಕರ್ತಾವರೆಗಿನ ಪಯಣ ಅತ್ಯಂತ ರೋಚಕ. 12 ಕಾಲಿನ ಬೆರಳು ಹೊಂದಿರುವ ಸ್ಪಪ್ನ ಗಾಯದ ನಡುವೆಯೂ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಪಪ್ನ ಬರ್ಮನ್ ತಂದೆ ರಿಕ್ಷಾ ಚಾಲಕ. ಆದರೆ 2013ರಿಂದ ಅನಾರೋಗ್ಯಕ್ಕೆ ತುತ್ತಾದ ಸ್ಪಪ್ನ ತಂದೆ ಹಾಸಿಗೆ ಹಿಡಿದಿದ್ದಾರೆ. ತಾಯಿ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಾ ಒಂದು ಹೊತ್ತಿನ ಊಟಕ್ಕೂ ಪರದಾಡಿದ ಕುಟುಂಬ. ಇನ್ನು ಅತ್ಯುತ್ತಮ ಟ್ರೈನಿಂಗ್, ಕ್ರೀಡಾಪಟುಗಳಿಗೆ ಸಿಗೋ ಆಹಾರ ಹಾಗೂ ಇತರ ವ್ಯವಸ್ಥೆ ಸ್ಪಪ್ನಾಗೆ ಕನಸಿನ ಮಾತಾಗಿತ್ತು.
ಕಿತ್ತು ತಿನ್ನೋ ಬಡತನದಿಂದ ಕ್ರೀಡೆಯನ್ನ ತೊರೆಯಲು ಸ್ಪಪ್ನ ನಿರ್ಧರಿಸಿದ್ದರು. ತಾಯಿ ಜೊತೆಗೆ ಎಸ್ಟೇಟ್‌ನಲ್ಲಿ ಕೆಲಸಕ್ಕೆ ಸೇರಿ ಕುಟುಂಬ ನಿರ್ವಹಣೆಗೆ ಸ್ವಪ್ನ ಮುಂದಾಗಿದ್ದರು. ಆದರೆ ಇದೇ ವೇಳೆ ಟೀಂ ಇಂಡಿಯಾ ಮಾಜಿ ನಾಯಕ, ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಸಹಾಕಾರ ಇದೀಗ ಭಾರತಕ್ಕೆ ಚಿನ್ನದ ಪದಕ ತಂದುಕೊಡುವಲ್ಲಿ ಸಹಕಾರಿಯಾಗಿದೆ.