ರಾಹುಲ್ ದ್ರಾವಿಡ್‌ಗೆ ಅತ್ಯುನ್ನತ ಐಸಿಸಿ ಹಾಲ್ ಆಫ್ ಫೇಮ್ ಗೌರವ!

ಕನ್ನಡಿಗರ ಕನ್ನಡ ರಾಜ್ಯೋತ್ಸವ ಸಂಭ್ರಮ ಇಮ್ಮಡಿಯಾಗಿದೆ. ರಾಜ್ಯೋತ್ಸವದ ದಿನವೇ ಟೀಂ ಇಂಡಿಯಾ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್‌ಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

Rahul Dravid 5th Indian to be inducted in ICC Hall of Fame

ತಿರುವನಂತಪುರಂ(ನ.01): ಟೀಂ ಇಂಡಿಯಾ ಮಾಜಿ ನಾಯಕ, ಭಾರತ ಅಂಡರ್ -19 ಕೋಚ್ ರಾಹುಲ್ ದ್ರಾವಿಡ್‌ಗೆ ಐಸಿಸಿ ಅತ್ಯುನ್ನತ ಹಾಲ್ ಆಫ್ ಫೇಮ್ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 5ನೇ ಏಕದಿನ ಪಂದ್ಯಕ್ಕೂ ಮೊದಲು ದ್ರಾವಿಡ್‌ಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಪಂದ್ಯಕ್ಕೂ ಮುನ್ನ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರಶಸ್ತಿ ಪ್ರಧಾನ ಮಾಡಿದರು. ಕಳದೆ ಜುಲೈನಲ್ಲಿ ರಾಹುಲ್ ದ್ರಾವಿಡ್, ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್, ಇಂಗ್ಲೆಂಡ್ ಮಹಿಳಾ ವಿಕೆಟ್ ಕೀಪರ್ ಕ್ಲಾರಿ ಟೇಲರ್‌ಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ಘೋಷಿಸಿತ್ತು. ಇದೀಗ ಐಸಿಸಿಯ ಈ ಗೌರವ ಸ್ವೀಕರಿಸಿದ ಭಾರತ 5ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರವಾಯಿತು.

Rahul Dravid 5th Indian to be inducted in ICC Hall of Fame

2009ರಲ್ಲಿ ಕಪಿಎಲ್ ದೇವ್, ಸುನಿಲ್ ಗವಾಸ್ಕರ್ ಹಾಗೂ ಬಿಷನ್ ಸಿಂಗ್ ಬೇಡಿ, 2015ರಲ್ಲಿ ಅನಿಲ್ ಕುಂಬ್ಳೆ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ 2018ರಲ್ಲಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದೇ ರಾಹುಲ್ ದ್ರಾವಿಡ್ ಕೂಡ ಈ ಗೌರವಕ್ಕೆ ಪಾತ್ರವಾಗಿರೋದು ಕನ್ನಡಿಗರಿಗೆ ಹೆಮ್ಮೆ ತಂದಿದೆ.

Latest Videos
Follow Us:
Download App:
  • android
  • ios