ನ್ಯೂಯಾರ್ಕ್(ಸೆ.05): ಹದಿನಾಲ್ಕು ಗ್ರ್ಯಾಂಡ್ ಸ್ಲಾಮ್ ವಿಜೇತ ಸ್ಪೇನ್ನ ರಫೆಲ್ ನಡಾಲ್ ಅವರು ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಟೂರ್ನಮೆಂಟ್'ನಲ್ಲಿ ಸೋಲನುಭವಿಸಿದ್ದಾರೆ.

ಯುಎಸ್ ಓಪನ್ ಪುರುಷರ ಸಿಂಗಲ್ಸ್ ಫ್ರೀ ಕ್ವಾರ್ಟರ್ ಫೈನಲ್ ನಲ್ಲಿ ರಫೆಲ್ ನಡಾಲ್, ಫ್ರಾನ್ಸ್'ನ ಯುವ ಆಟಗಾರ ಲುಕಸ್ ಪೌವಿಲ್ಲೇ ಅವರ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಭಾನುವಾರ ನಾಲ್ಕು ಗಂಟೆಗಳ ಕಾಲ ನಡೆದ ಹಣಾಹಣಿಯಲ್ಲಿ ಲುಕಸ್ ಪೌವಿಲ್ಲೇ ಅವರು ಎರಡು ಬಾರಿ ಯುಎಸ್ ಓಪನ್ ಜಯಿಸಿದ ನಡಾರನ್ನು 6-1, 2-6,6-4, 3-6, 7-6(6)ಅಂತರದಲ್ಲಿ ಮಣಿಸಿದರು.

2004ರ ಬಳಿಕ ನಡಾಲ್ ಮೊದಲ ಬಾರಿ ಯುಎಸ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ ತಲುಪುವಲ್ಲಿ ಎಡವಿದ್ದಾರೆ.