ಹಾರ್ದಿಕ್ ಪಾಂಡ್ಯನನ್ನ ಬೆಳೆಸುತ್ತಿರುವುದು ನಾಯಕ ವಿರಾಟ್ ಕೊಹ್ಲಿ. 4ನೇ ಕ್ರಮಾಂಕದಲ್ಲಿ ಬಡ್ತಿ ಕೊಟ್ಟು ಆರ್ಭಟಿಸುವಂತೆ ಮಾಡ್ತಿರೋದು ಕೊಹ್ಲಿಯೇ. ಮೂರು ಮಾದರಿ ತಂಡದಲ್ಲೂ ಸ್ಥಾನ ಕೊಟ್ಟು ಆಡಿಸ್ತಿರೋದು ವಿರಾಟೇ. ಆದ್ರೆ ಈಗ ಅದೇ ಕೊಹ್ಲಿಗೆ ಪಾಂಡ್ಯ ಸೆಡ್ಡು ಹೊಡೆಯುತ್ತಿದ್ದಾರೆ. ಯಾಕೆ ಅಂತೀರಾ? ಇಲ್ಲಿದೆ ನೋಡಿ ವಿವರ.

ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ನಡ್ವೆ ಈಗ ಕೋಲ್ಡ್ ವಾರ್ ಶುರುವಾಗಿದೆ. ಇಬ್ಬರಲ್ಲಿ ಯಾರು ಗ್ರೇಟ್​ ಅನ್ನೋದೇ ಈ ವಾರ್​ಗೆ ಕಾರಣ. ಹೌದು, ​ವರ್ಲ್ಡ್​ ಕ್ರಿಕೆಟ್​ನಲ್ಲಿ ಈಗ ಇವರಿಬ್ಬರದ್ದೇ ಮಾತು. ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಬೆಳಕಿಗೆ ಬಂದ ಹಾರ್ದಿಕ್ ಪಾಂಡ್ಯ ಈಗ ನಾಯಕನಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ನಾಯಕನಿಗಿಂತ ನಾನೇ ಗ್ರೇಟ್ ಅಂತ ಮರೆಯುತ್ತಿದ್ದಾರೆ. ಇದೇ ಈಗ ವಿರಾಟ್​ ಕೊಹ್ಲಿಯನ್ನ ಸಿಟ್ಟಿಗೇರಿಸಿದೆ.

ನಾಯಕನಿಗೆ ಸೆಡ್ಡು ಹೊಡಿತಿದ್ದಾರೆ ಪಾಂಡ್ಯ..!

'ಈಗ ವಿಶ್ವ ಕ್ರಿಕೆಟ್​ನಲ್ಲಿ ಒಂದು ಚರ್ಚೆ ಶುರುವಾಗಿದೆ. ಈ ವರ್ಷ ಒಂಡೇ ಕ್ರಿಕೆಟ್​ನಲ್ಲಿ ಯಾರು ಗ್ರೇಟ್ ಅನ್ನೋದು. ವಿರಾಟ್ ಕೊಹ್ಲಿ ರನ್ ಮೇಲೆ ರನ್ ಗುಡ್ಡೆಹಾಕ್ತಿದ್ದಾರೆ. ಸೆಂಚುರಿ ಮೇಲೆ ಸೆಂಚುರಿ ಹೊಡಿತಿದ್ದಾರೆ. ಆದ್ರೂ ಬರೋಡ ಆಲ್​ರೌಂಡರ್ ಮಾತ್ರ ಕೊಹ್ಲಿಗೆ ಸೆಡ್ಡು ಹೊಡೆಯುವ ಪ್ರದರ್ಶನ ನೀಡ್ತಿದ್ದಾರೆ. ಆಲ್​ರೌಂಡ್ ಆಟದಿಂದ ಮಿಂಚುತ್ತಿದ್ದಾರೆ.

ಏಕದಿನ ಆಟಗಾರ ಲಿಸ್ಟ್​ನಲ್ಲಿ ಇವರಿಬ್ಬರೇ ಟಾಪ್

2017ರ ಐಸಿಸಿ ಏಕದಿನ ಕ್ರಿಕೆಟ್​ನ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಆಗ್ಲೇ ರೇಸ್ ಶುರುವಾಗಿದೆ. ಸಂಭವ್ಯ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅಗ್ರಸ್ಥಾನದಲ್ಲಿದ್ದಾರೆ. ಇವರಿಬ್ಬರಲ್ಲಿ ಒಬ್ಬರಿಗೆ ಪ್ರಶಸ್ತಿ ದಕ್ಕಲಿದೆ. ವಿರಾಟ್​ಗೆ ಸೆಡ್ಡು ಹೊಡೆದು ಪ್ರಶಸ್ತಿ ಬಾಚಿಕೊಳ್ಳಲು ಪಾಂಡ್ಯ ರೆಡಿಯಾಗಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಮಾಲ್​ ಮಾಡಿರುವ ಹಾರ್ದಿಕ್ ಪ್ರಶಸ್ತಿ ನನ್ನದೇ ಅಂತಿದ್ದಾರೆ.

ಹಾರ್ದಿಕ್ ಪಾಂಡ್ಯ ಈ ವರ್ಷ 22 ಏಕದಿನ ಪಂದ್ಯಗಳನ್ನಾಡಿದ್ದು 44.09ರ ಸರಾಸರಿಯಲ್ಲಿ 485 ರನ್ ಹೊಡೆದಿದ್ದಾರೆ. 123.09ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿ 4 ಅರ್ಧಶತಕವನ್ನೂ ದಾಖಲಿಸಿದ್ದಾರೆ. 28 ಸಿಕ್ಸ್​ಗಳನ್ನ ದಾಖಲಿಸಿದ್ದಾರೆ. 25 ವಿಕೆಟ್ ಸಹ ಪಡೆದಿದ್ದಾರೆ.

ಸಾವಿರ ರನ್ ಸರದಾರ ಕೊಹ್ಲಿ

ಈ ವರ್ಷವೂ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆಗ್ಲೇ ಒಂಡೇ ಕ್ರಿಕೆಟ್​ನಲ್ಲಿ ಈ ವರ್ಷ ಒಂದು ಸಾವಿರ ರನ್ ಗಡಿ ದಾಟಿದ್ದಾರೆ. ಈ ವರ್ಷ ಗರಿಷ್ಠ ರನ್ ಹೊಡೆದ ಬ್ಯಾಟ್ಸ್​​ಮನ್ ಎನಿಸಿಕೊಂಡಿದ್ದಾರೆ. ಸದ್ಯ ಅವರ ಫಾರ್ಮ್​ ನೋಡಿದ್ರೆ ಈ ವರ್ಷ ಅವರ ರನ್ ಒಂದುವರೆ ಸಾವಿರ ಗಡಿ ದಾಟಲಿದೆ.

ಈ ವರ್ಷ ವಿರಾಟ್ ಕೊಹ್ಲಿ 23 ಒಂಡೇ ಮ್ಯಾಚ್​ನಿಂದ 74.81ರ ಸರಾಸರಿಯಲ್ಲಿ 1197 ರನ್ ಬಾರಿಸಿದ್ದಾರೆ. 98.68ರ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿರುವ ಅವರು, 4 ಶತಕ, 7 ಅರ್ಧಶತಕಗಳನ್ನ ಸಿಡಿಸಿದ್ದಾರೆ.

ಪಾಂಡ್ಯ-ಕೊಹ್ಲಿ ಜೊತೆ ಇನ್ನೂ ಮೂವರು ರೇಸ್​ನಲ್ಲಿದ್ದಾರೆ. ಆದ್ರೆ ಈ ಇಬ್ಬರು ರೇಸ್​ನಲ್ಲಿ ಟಾಪ್​ನಲ್ಲಿದ್ದಾರೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರಿಗೆ ಬೆಸ್ಟ್ ಪ್ಲೇಯರ್ ಅವಾರ್ಡ್​ ದಕ್ಕಲಿದೆ. ವಿರಾಟ್ ಕೊಹ್ಲಿಗೆ ಸೆಡ್ಡು ಹೊಡೆದ ಹಾರ್ದಿಕ್ ಪಾಂಡ್ಯ ಪ್ರಶಸ್ತಿ ಗೆದ್ರೂ ಆಶ್ಚರ್ಯವಿಲ್ಲ.