ಕೋಟಿಗಳಿಗೆ ಹರಾಜಾಗಿದ್ದ ಡೆಲ್ಲಿ ತಂಡ ಆಟಗಾರ ಐಪಿಎಲ್'ನಿಂದ ಔಟ್

Rabada ruled out of IPL with back injury
Highlights

ಈಗ ಪ್ರಮುಖ ವೇಗದ ಬೌಲರ್ ಕೆ.ರಬಡಾ ಬೆನ್ನು ನೋವಿನ ಸಮಸ್ಯೆಯಿಂದ ಐಪಿಎಲ್'ನಿಂದ ಹಿಂದೆ ಸರಿದಿದ್ದಾರೆ. ದಕ್ಷಿಣ ಆಫ್ರಿಕಾದ ಬೌಲರ್ ಇತ್ತೀಚಿಗಷ್ಟೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿದ್ದರು.

ಮುಂಬೈ(ಏ.05): ಐಪಿಎಲ್'ನಲ್ಲಿ ಡೆಲ್ಲಿ ಡೇರ್'ಡೇವಿಲ್ಸ್ ತಂಡಕ್ಕೆ ಮತ್ತೊಂದು ದೊಡ್ಡ ಆಘಾತವುಂಟಾಗಿದೆ. ಈಗಾಗಲೇ ಅಪಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಗದ ಬೌಲರ್ ಮೊಹಮದ್ ಶಮಿ ಟೀಂ'ನಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ.

ಈಗ ಪ್ರಮುಖ ವೇಗದ ಬೌಲರ್ ಕೆ.ರಬಡಾ ಬೆನ್ನು ನೋವಿನ ಸಮಸ್ಯೆಯಿಂದ ಐಪಿಎಲ್'ನಿಂದ ಹಿಂದೆ ಸರಿದಿದ್ದಾರೆ. ದಕ್ಷಿಣ ಆಫ್ರಿಕಾದ ಬೌಲರ್ ಇತ್ತೀಚಿಗಷ್ಟೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿದ್ದರು. ರಬಡಾ ಅವರನ್ನು ಡೆಲ್ಲಿ ತಂಡ 4.2 ಕೋಟಿಗೆ ರಟೈನ್ ಮಾಡಿಕೊಂಡಿತ್ತು. ಡೆಲ್ಲಿ ತಂಡಕ್ಕೆ ವೇಗದ ಬೌಲರ್ ಸಮಸ್ಯೆಯಿರುವುದರಿಂದ ಮತ್ತೊಬ್ಬ ಆಟಗಾರನನ್ನು ಖರೀದಿಸುವ ಸಾಧ್ಯತೆಯಿದೆ.

loader