ಕಳೆದ ಎರಡು ಆವೃತ್ತಿಗಳಲ್ಲಿ ಅಂದರೆ 2015 ಮತ್ತು 2016 ರಲ್ಲಿ ಹುಬ್ಬಳ್ಳಿ ಟೈಗರ್ಸ್ ರನ್ನರ್ ಅಪ್ ಆಗಿತ್ತು.

ಬೆಂಗಳೂರು(ಆ.11): ಸೆಪ್ಟೆಂಬರ್ 1ರಿಂದ ಆರಂಭವಾಗಲಿರುವ 6ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಕರ್ನಾಟಕ ರಾಜ್ಯ ತಂಡದ ನಾಯಕರಾಗಿರುವ ಆರ್. ವಿನಯ್ ಕುಮಾರ್ ಅವರು ಮುನ್ನಡೆಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಎರಡು ಆವೃತ್ತಿಗಳಲ್ಲಿ ಅಂದರೆ 2015 ಮತ್ತು 2016 ರಲ್ಲಿ ಹುಬ್ಬಳ್ಳಿ ಟೈಗರ್ಸ್ ರನ್ನರ್ ಅಪ್ ಆಗಿತ್ತು. ಹೀಗಾಗಿ ಪ್ರಸಕ್ತ ಆವೃತ್ತಿಯಲ್ಲಿ ಉತ್ತಮ ಆಟಗಾರರೊಂದಿಗೆ ಕಣಕ್ಕಿಳಿದಿರುವ ಹುಬ್ಬಳ್ಳಿ ತಂಡ ಪ್ರಭಾವಿ ಪ್ರದರ್ಶನದ ಮೂಲಕ ಟ್ರೋಫಿ ಜಯಿಸುವ ವಿಶ್ವಾಸದಲ್ಲಿದೆ.

ಮಯಾಂಕ್ ಅಗರ್‌'ವಾಲ್, ಆಲ್ರೌಂಡರ್ ಪ್ರವೀಣ್ ದುಬೆ, ಡೇವಿಡ್ ಮಥಾಯಿಸ್ ಮತ್ತು ಅಭಿಷೇಕ್ ರೆಡ್ಡಿ ಅವರಂತಹ ಪ್ರಮುಖ ಆಟಗಾರರನ್ನು ಒಳಗೊಂಡಿರುವ ವಿನಯ್ ಪಡೆ ಪ್ರಶಸ್ತಿಯ ಕನವರಿಕೆಯಲ್ಲಿ ಕಣಕ್ಕಿಳಿಯಲಿದೆ.

ಸೆ. 2 ರಂದು ಹುಬ್ಬಳ್ಳಿ ತಂಡ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡಲಿದೆ.