Asianet Suvarna News Asianet Suvarna News

ಆಫ್ಘಾನ್ ನಾಯಕನ ’ಆ ಮಾತು’ ನೆನಪಿದೆಯಾ..?

ಟೆಸ್ಟ್ ಮ್ಯಾಚ್ ಆರಂಭಕ್ಕೂ ಮುನ್ನ ಆಫ್ಘಾನಿಸ್ತಾನ ತಂಡದ ನಾಯಕ ಅಸ್ಗರ್ ಸ್ಟಾನಿಕ್ಜೈ ಭಾರತ ತಂಡದ ಸ್ಪಿನ್ನರ್’ಗಳಿಗಿಂತ ಆಫ್ಘಾನ್ ಸ್ಪಿನ್ ಪಡೆ ಬಲಿಷ್ಠವಾಗಿದೆ ಎಂದು ಹೇಳಿದ್ದರು. 

R Ashwin trolled Asghar Stanikzai like a boss
  • Facebook
  • Twitter
  • Whatsapp

ಬೆಂಗಳೂರು[ಜೂ.16]: ಭಾರತ-ಆಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 262 ರನ್’ಗಳ ಭರ್ಜರಿ ಜಯ ದಾಖಲಿಸಿದೆ. ಮೊದಲ ಇನಿಂಗ್ಸ್’ನಲ್ಲಿ ಅಶ್ವಿನ್ 4 ವಿಕೆಟ್ ಕಬಳಿಸಿದರೆ, ಎರಡನೇ ಇನ್ನಿಂಗ್ಸ್’ನಲ್ಲಿ ಜಡೇಜಾ 4 ವಿಕೆಟ್ ಕಬಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಟೆಸ್ಟ್ ಮ್ಯಾಚ್ ಆರಂಭಕ್ಕೂ ಮುನ್ನ ಆಫ್ಘಾನಿಸ್ತಾನ ತಂಡದ ನಾಯಕ ಅಸ್ಗರ್ ಸ್ಟಾನಿಕ್ಜೈ ಭಾರತ ತಂಡದ ಸ್ಪಿನ್ನರ್’ಗಳಿಗಿಂತ ಆಫ್ಘಾನ್ ಸ್ಪಿನ್ ಪಡೆ ಬಲಿಷ್ಠವಾಗಿದೆ ಎಂದು ಹೇಳಿದ್ದರು. ಇದೀಗ ಪಂದ್ಯ ಮುಕ್ತಾಯವಾಗಿದ್ದು, ಭಾರತದ ಸ್ಪಿನ್ ಜೋಡಿಗಳಾದ ಅಶ್ವಿನ್ ಹಾಗೂ ಜಡೇಜಾ ಎರಡು ಇನ್ನಿಂಗ್ಸ್’ನಲ್ಲಿ ಕೇವಲ 94 ರನ್ ನೀಡಿ 11 ವಿಕೆಟ್ ಕಬಳಿಸಿದ್ದರೆ, ಆಫ್ಘಾನ್ ಸ್ಪಿನ್ ತ್ರಿವಳಿಗಳಾದ ರಶೀದ್ ಖಾನ್ ಮುಜೀಬ್ ಉರ್ ರೆಹಮಾನ್ ಹಾಗೂ ಮೊಹಮ್ಮದ್ ನಬೀ ಒಂದೇ ಇನ್ನಿಂಗ್ಸ್’ನಲ್ಲಿ 294 ರನ್ ನೀಡಿ ಕೇವಲ 4 ವಿಕೆಟ್’ಗಳನ್ನಷ್ಟೇ ಕಬಳಿಸಲು ಯಶಸ್ವಿಯಾಗಿದ್ದಾರೆ.

ಇನ್ನು ವಿಶೇಷವೆಂದರೆ ಐಪಿಎಲ್’ನಲ್ಲಿ ಮಿಂಚಿನ ಪ್ರದರ್ಶನ ತೋರಿದ್ದ ರಶೀದ್ ಖಾನ್ ಮೊದಲ ವಿಕೆಟ್ ಕಬಳಿಸಲು 123 ಎಸೆತಗಳನ್ನು ತೆಗೆದುಕೊಂಡರೆ, ಭಾರತದ ಸ್ಪಿನ್ ದುರ್ಬಲ ಎಂಬರ್ಥದಲ್ಲಿ ಮಾತನಾಡಿದ್ದ ಆಫ್ಘಾನ್ ನಾಯಕ ಸ್ಟಾನಿಕ್ಜೈ ಅವರನ್ನು ಕೇವಲ ಮೂರನೇ ಎಸೆತದಲ್ಲೇ ಕ್ಲೀನ್ ಬೌಲ್ಡ್ ಮಾಡಿ ಪೆವಿಲಿಯನ್ ಹಾದಿ ತೋರಿಸಿದ್ದರು. ಟೀಂ ಇಂಡಿಯಾ ಸ್ಪಿನ್ ಬೌಲರ್’ಗಳ ಬಗ್ಗೆ ಮಾತನಾಡುವಾಗ ಎಚ್ಚರವಿರಬೇಕು ಎಂಬ ಖಡಕ್ ಸಂದೇಶವನ್ನು ಅಶ್ವಿನ್-ಜಡೇಜಾ ಜೋಡಿ ಎದುರಾಳಿ ತಂಡಗಳಿಗೆ ರವಾನಿಸಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

Follow Us:
Download App:
  • android
  • ios