‘‘ಯಾಸಿರ್ ಸಾಧನೆ ಸೂರ್ತಿದಾಯಕ. ಅವರು ಯಾವಾಗಲೂ ಅದೃಷ್ಟದ ಬಗ್ಗೆ ಮಾತನಾಡುತ್ತಾರೆ. ಹೊಸ ಸಾಧನೆಯತ್ತ ಅವರನ್ನು ಕೊಂಡೊಯ್ದಿರುವ ಅದೃಷ್ಟ ಅವರೊಂದಿಗೆ ಚಿರವಾಗಿರಲಿ’’ ಎಂದು ಅಶ್ವಿನ್ ಹೇಳಿದ್ದಾರೆ.

ನವದೆಹಲಿ(ಅ.17): ಅಂತಾರಾಷ್ಟ್ರೀಯ ಟೆಸ್ಟ್ ರಂಗದಲ್ಲಿ ತಾವು ಆಡಿರುವ 17 ಪಂದ್ಯಗಳಿಂದ 100 ವಿಕೆಟ್ ಗಳಿಸುವ ಮೂಲಕ ವೇಗವಾಗಿ ನೂರು ವಿಕೆಟ್ ಗಳಿಸಿದ ವಿಶ್ವದ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ 2ನೇ ಸ್ಥಾನ ಗಳಿಸಿರುವ ಪಾಕಿಸ್ತಾನದ ಲೆಗ್‌ಸ್ಪಿನ್ನರ್ ಯಾಸಿರ್ ಶಾ ಅವರನ್ನು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶ್ಲಾಘಿಸಿದ್ದಾರೆ.

‘‘ಯಾಸಿರ್ ಸಾಧನೆ ಸೂರ್ತಿದಾಯಕ. ಅವರು ಯಾವಾಗಲೂ ಅದೃಷ್ಟದ ಬಗ್ಗೆ ಮಾತನಾಡುತ್ತಾರೆ. ಹೊಸ ಸಾಧನೆಯತ್ತ ಅವರನ್ನು ಕೊಂಡೊಯ್ದಿರುವ ಅದೃಷ್ಟ ಅವರೊಂದಿಗೆ ಚಿರವಾಗಿರಲಿ’’ ಎಂದು ಅಶ್ವಿನ್ ಹೇಳಿದ್ದಾರೆ.

ದುಬೈನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಮೊದಲ ಇನಿಂಗ್ಸ್ ವೇಳೆ 5 ವಿಕೆಟ್ ಪಡೆದಿದ್ದ ಯಾಸಿರ್ ಐತಿಹಾಸಿಕ ಸಾಧನೆ ಮಾಡಿದ ಹೆಗ್ಗಳಿಕೆಗೆ ಭಾಜನರಾದರು.