Asianet Suvarna News Asianet Suvarna News

ಕೌಂಟಿ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಲು ರೆಡಿಯಾದ ಅಶ್ವಿನ್

ನಾಟಿಂಗ್'ಹ್ಯಾಮ್'ಶೈರ್ ಪರ ಪೂಜಾರ, ಯಾರ್ಕ್'ಶೈರ್ ಪರ ಇಶಾಂತ್ ಶರ್ಮಾ ಆಡಲಿದ್ದಾರೆ. ಸೆಪ್ಟೆಂಬರ್ 5ರಂದು ನಾಟಿಂಗ್'ಹ್ಯಾಮ್ ಶೈರ್ ಮತ್ತು ವರ್ಸಸ್ಟ್'ಶೈರ್ ನಡುವೆ ಪಂದ್ಯ ನಡೆಯಲಿದೆ

R Ashwin participation in county confirmed to play for Worcestershire

ನವದೆಹಲಿ(ಆ.15): ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ಭಾರತ ತಂಡದ ಅನುಭವಿ ಆಫ್'ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್'ನ ಕೌಂಟಿ ಕ್ರಿಕೆಟ್ ಆಡಲು ಮುಂದಾಗಿದ್ದಾರೆ.

ಹೌದು, ಇದೇ ಮೊದಲ ಬಾರಿಗೆ ಇಂಗ್ಲೆಂಡ್'ನ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಅಶ್ವಿನ್ ವರ್ಸಸ್ಟ್'ಶೈರ್ ತಂಡದ ಪರ ಆಡಲಿದ್ದಾರೆ.

ಅಶ್ವಿನ್ ಸೇರಿದಂತೆ ನಾಲ್ವರು ಭಾರತೀಯ ಆಟಗಾರರು ಕೌಂಟಿ ಕ್ರಿಕೆಟ್ ಆಡಲಿದ್ದಾರೆ. ಈಗಾಗಲೇ ಪೂಜಾರ, ಇಶಾಂತ್ ಶರ್ಮಾ ಕೌಂಟಿ ಕ್ರಿಕೆಟ್'ನಲ್ಲಿ ಆಡಿದ್ದಾರೆ. ಇನ್ನು ಎಡಗೈ ಆಲ್ರೌಂಡರ್ ರವೀಂದ್ರ ಕೂಡ ಈ ಬಾರಿ ಕೌಂಟಿಯಲ್ಲಿ ಆಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ನಾಟಿಂಗ್'ಹ್ಯಾಮ್'ಶೈರ್ ಪರ ಪೂಜಾರ, ಯಾರ್ಕ್'ಶೈರ್ ಪರ ಇಶಾಂತ್ ಶರ್ಮಾ ಆಡಲಿದ್ದಾರೆ. ಸೆಪ್ಟೆಂಬರ್ 5ರಂದು ನಾಟಿಂಗ್'ಹ್ಯಾಮ್ ಶೈರ್ ಮತ್ತು ವರ್ಸಸ್ಟ್'ಶೈರ್ ನಡುವೆ ಪಂದ್ಯ ನಡೆಯಲಿದೆ

Follow Us:
Download App:
  • android
  • ios