ಆಸ್ಟ್ರೇಲಿಯಾ ಎ ವಿರುದ್ದದ ಸರಣಿಯಲ್ಲಿ ಭಾರತ ಬಿ ತಂಡ ಐತಿಹಾಸಿಕ ಗೆಲುವು ಸಾಧಿಸಿದೆ. ಕನ್ನಡಿಗ ಮನೀಶ್ ಪಾಂಡೆ ಹಾಗೂ ಮಯಾಂಕ್ ಅಗರ್ವಾಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಹೇಗಿತ್ತು? ಇಲ್ಲಿದೆ ಹೈಲೈಟ್ಸ್.

ಬೆಂಗಳೂರು(ಆ.29): ಆಸ್ಟ್ರೇಲಿಯಾ ಎ ವಿರುದ್ಧದ ಚತುಷ್ಕೋನ ಸರಣಿಯಲ್ಲಿ ಭಾರತ ಬಿ ತಂಡ 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ತಂಡದ ಪ್ರಾಬಲ್ಯ ಮುಂದುವರಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ಎ ತಂಡ 47.5 ಓವರ್‌ಗಳಲ್ಲಿ 225 ರನ್‌ಗೆ ಆಲೌಟ್ ಆಯಿತು. ಡಾರ್ಕಿ ಶಾರ್ಟ್ 72, ಅಲೆಕ್ಸ್ ಕ್ಯಾರೆ 53 ರನ್ ಕಾಣಿಕೆ ನೀಡಿದರು. ಭಾರತ ಬಿ ತಂಡದ ಪರ ಕನ್ನಡಿಗ ಶ್ರೇಯಸ್ ಗೋಪಾಲ್ 3 ವಿಕೆಟ್ ಪಡೆದು ಮಿಂಚಿದರು.

226 ರನ್ ಗುರಿ ಬೆನ್ನಟ್ಟಿದ ಭಾರತ ಬಿ ತಂಡಕ್ಕೆ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಹಾಗೂ ಮನೀಶ್ ಪಾಂಡೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಮಯಾಂಕ್ 69 ರನ್ ಸಿಡಿಸಿದರೆ, ಶುಭನಮ್ ಗಿಲ್ ಅಜೇಯ 66 ರನ್ ಸಿಡಿಸಿದರು. ಮನೀಶ್ ಪಾಂಡೆ ಅಜೇಯ 73 ರನ್ ಸಿಡಿಸೋ ಮೂಲಕ ಭಾರಕ 36.3 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.