ಚಳಿಗಾಲದ ಒಲಂಪಿಕ್ಸ್’ಗೆ 1 ಲಕ್ಷ ಕಾಂಡೋಮ್

First Published 2, Feb 2018, 10:55 AM IST
Pyeongchang Sets Winter Olympic record  for Condoms
Highlights

2018ರ ಚಳಿಗಾಲದ ಒಲಿಂಪಿಕ್ಸ್ ಆರಂಭಕ್ಕೆ ಇನ್ನೆರಡು ವಾರ ಬಾಕಿ ಇದ್ದು, ದಾಖಲೆ ಪ್ರಮಾಣದಲ್ಲಿ ಕ್ರೀಡಾಪಟುಗಳಿಗೆ ಕಾಂಡೊಮ್ ಹಂಚಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ.

ಸೋಲ್: 2018ರ ಚಳಿಗಾಲದ ಒಲಿಂಪಿಕ್ಸ್ ಆರಂಭಕ್ಕೆ ಇನ್ನೆರಡು ವಾರ ಬಾಕಿ ಇದ್ದು, ದಾಖಲೆ ಪ್ರಮಾಣದಲ್ಲಿ ಕ್ರೀಡಾಪಟುಗಳಿಗೆ ಕಾಂಡೊಮ್ ಹಂಚಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ.

ಎಚ್‌ಐವಿ ಸೋಂಕು ತಡೆಗಟ್ಟಲು ಈ ಕ್ರಮಕ್ಕೆ ಮುಂದಾಗಿರುವ ಆಯೋಜಕರು ಈ ವರ್ಷ 1,10,000 ಕಾಂಡೊಮ್‌ಗಳನ್ನು ಹಂಚುವುದಾಗಿ ಘೋಷಿಸಿದ್ದಾರೆ.

ಕಳೆದ ಆವೃತ್ತಿಗಿಂತ 10000 ಹೆಚ್ಚು ಕಾಂಡೊಮ್‌ಗಳನ್ನು ವಿತರಿಸಲಾಗುತ್ತಿದೆ. ಕೂಟದಲ್ಲಿ 2925 ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿದ್ದು, ಒಬ್ಬ ಅಥ್ಲೀಟ್‌ಗೆ 37 ಕಾಂಡೊಮ್‌ಗಳು ದೊರೆಯಲಿವೆ. ಕ್ರೀಡಾಕೂಟಕ್ಕೆ ಆತಿಥ್ಯ ವಹಿಸು ವ ಪೈಯೋಂಗ್ ಚಾಂಗ್, ಗ್ಯಾಂಗ್‌ ನ್ಯುಯಂಗ್‌ನ ಕ್ರೀಡಾ ಗ್ರಾಮದ ಟಾಯ್ಲೆಟ್‌ಗಳಲ್ಲಿ ಕಾಂಡೊಮ್‌ಗಳನ್ನು ಇರಿಸಲಾಗಿದೆ.

loader