ಒಂದೇ ವರ್ಷದಲ್ಲಿ ಇಂಡೋನೇಷ್ಯಾ ಓಪನ್, ಆಸ್ಟ್ರೇಲಿಯನ್ ಓಪನ್, ಡೆನ್ಮಾರ್ಕ್ ಓಪನ್ ಹಾಗೂ ಫ್ರೆಂಚ್ ಓಪನ್ ಸೂಪರ್ ಸೀರಿಸ್ ಪ್ರಶಸ್ತಿ ಬಾಚಿಕೊಂಡಿದ್ದ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದರು.

ದುಬೈ(ಡಿ.13): ದುಬೈ ಸೂಪರ್ ಸೀರೀಸ್ ಫೈನಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ರೋಚಕ ಜಯ ಸಾಧಿಸಿದರೆ, ಭರ್ಜರಿ ಫಾರ್ಮ್'ನಲ್ಲಿದ್ದ ಕಿದಾಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ನಂ.1 ಶ್ರೇಯಾಂಕಿತ ಡೆನ್ಮಾರ್ಕ್‌'ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ಶ್ರೀಕಾಂತ್ 21-13, 21-17 ನೇರ ಅಂಕಗಳಲ್ಲಿ ಸೋಲುಂಡರು. ಒಂದೇ ವರ್ಷದಲ್ಲಿ ಇಂಡೋನೇಷ್ಯಾ ಓಪನ್, ಆಸ್ಟ್ರೇಲಿಯನ್ ಓಪನ್, ಡೆನ್ಮಾರ್ಕ್ ಓಪನ್ ಹಾಗೂ ಫ್ರೆಂಚ್ ಓಪನ್ ಸೂಪರ್ ಸೀರಿಸ್ ಪ್ರಶಸ್ತಿ ಬಾಚಿಕೊಂಡಿದ್ದ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದರು.

ಇನ್ನು ವಿಶ್ವದ 3ನೇ ಶ್ರೇಯಾಂಕಿತೆ ಸಿಂಧು, ಚೀನಾದ ಹೀ ಬಿಂಗ್‌'ಜಿಯೊ ವಿರುದ್ಧ 21-11, 16-21, 21-18 ಅಂಕಗಳಿಂದ ರೋಚಕ ಜಯ ದಾಖಲಿಸಿದರು. 63 ನಿಮಿಷ ನಡೆದ ರೋಚಕ ಕಾದಾಟದಲ್ಲಿ ಕೊನೆಗೂ ಸಿಂಧು ಗೆಲುವಿನ ನಗೆ ಬೀರಿದರು.