ನವದೆಹಲಿ(ಏ. 02): ಭಾರತದ ನಂಬರ್ ಒನ್ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು ಇಂಡಿಯಾ ಓಪನ್ ಸೂಪರ್ ಸೀರೀಸ್ ಚಾಂಪಿಯನ್ ಆಗಿದ್ದಾರೆ. ಇಂದು ನಡೆದ ಮಹಿಳಾ ಸಿಂಗಲ್ಸ್ ಫೈನಲ್'ನಲ್ಲಿ ಸ್ಪೇನ್'ನ ಕರೋಲಿನಾ ಮರಿನ್ ಅವರನ್ನು ಸಿಂಧು 21-19, 21-14 ನೇರ ಗೇಮ್'ಗಳಿಂದ ಮಣಿಸಿದ್ದಾರೆ. ಮೊದಲ ಗೇಮ್ ತೀವ್ರ ಹಣಾಹಣಿಯಿಂದ ಕೂಡಿದ್ದರೆ, ಎರಡನೇ ಗೇಮ್'ನಲ್ಲಿ ಸಿಂಧು ಸುಲಭವಾಗಿ ಎದುರಾಳಿಯ ಮೇಲೆ ಮೇಲುಗೈ ಸಾಧಿಸಿದರು.

ಸ್ಪೇನ್ ದೇಶದ ವಿಶ್ವ 2ನೇ ಕ್ರಮಾಂಕದ ಕರೋಲಿನಾ ಮರಿನ್ ಅವರು ರಿಯೋ ಒಲಿಂಪಿಕ್ಸ್'ನಲ್ಲಿ ಪಿವಿ ಸಿಂಧು ಅವರನ್ನು ಸೋಲಿಸಿ ಭಾರತದ ಚಿನ್ನದ ಪದಕದ ಆಸೆಗೆ ತಣ್ಣೀರೆರಚಿದ್ದರು. ಸಿಂಧು ಆ ಸೋಲಿಗೆ ಈಗ ಸೇಡು ತೀರಿಸಿಕೊಂಡಿದ್ದಾರೆ.