ಇಂದು ನಡೆದ ಸೆಮೀಸ್‌'ನಲ್ಲಿ ಸೈನಾ, ಅನುರಾ ಪ್ರಭುದೇಸಾಯಿ ವಿರುದ್ಧ 21-11, 21-10 ಗೇಮ್‌'ಗಳಲ್ಲಿ ಗೆದ್ದರೆ, ವಿಶ್ವ ನಂ.2 ಹಾಗೂ ಅಗ್ರಶ್ರೇಯಾಂಕಿತೆ ಸಿಂಧು, ರುತ್ವಿಕಾ ಶಿವಾನಿ ವಿರುದ್ಧ 17-21, 21-15, 21-11 ಗೇಮ್‌'ಗಳಲ್ಲಿ ಜಯಗಳಿಸಿದರು.

ನಾಗ್ಪುರ(ನ.07): ಅನುಭವಿ ಶಟ್ಲರ್'ಗಳಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ. ಸಿಂಧು ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಅಂತಿಮ ಘಟ್ಟ ತಲುಪಿದ್ದು, ಮಹಿಳಾ ಸಿಂಗಲ್ಸ್ ಫೈನಲ್‌'ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ. ಇದೇ ವೇಳೆ ಪುರುಷರ ಫೈನಲ್ಸ್‌'ನಲ್ಲಿ ವಿಶ್ವ ನಂ.2 ಕಿದಾಂಬಿ ಶ್ರೀಕಾಂತ್ ಹಾಗೂ ಎಚ್.ಎಸ್.ಪ್ರಣಯ್ ಮುಖಾಮುಖಿಯಾಗಲಿದ್ದಾರೆ.

ಇಂದು ನಡೆದ ಸೆಮೀಸ್‌'ನಲ್ಲಿ ಸೈನಾ, ಅನುರಾ ಪ್ರಭುದೇಸಾಯಿ ವಿರುದ್ಧ 21-11, 21-10 ಗೇಮ್‌'ಗಳಲ್ಲಿ ಗೆದ್ದರೆ, ವಿಶ್ವ ನಂ.2 ಹಾಗೂ ಅಗ್ರಶ್ರೇಯಾಂಕಿತೆ ಸಿಂಧು, ರುತ್ವಿಕಾ ಶಿವಾನಿ ವಿರುದ್ಧ 17-21, 21-15, 21-11 ಗೇಮ್‌'ಗಳಲ್ಲಿ ಜಯಗಳಿಸಿದರು.

ಇನ್ನು ಪುರುಷರ ಸಿಂಗಲ್ಸ್ ಸೆಮೀಸ್‌'ನಲ್ಲಿ ಶ್ರೀಕಾಂತ್, ಯುವ ಆಟಗಾರ ಲಕ್ಷ್ಯಾ ಸೆನ್ ವಿರುದ್ಧ 21-16, 21-18ರಲ್ಲಿ ಗೆದ್ದರೆ, ಪ್ರಣಯ್ 21-14, 21-17ರಲ್ಲಿ ಶುಭಂಕರ್ ಡೇ ವಿರುದ್ಧ ಜಯ ಸಾಧಿಸಿದರು.