ವಿಶ್ವ ಚಾಂಪಿಯನ್ಸ್'ಶಿಪ್'ನಲ್ಲಿ ಜಪಾನ್ ಆಟಗಾರ್ತಿ ನಜೊಮಿ ಒಕುಹಾರ ವಿರುದ್ದ ಫೈನಲ್'ನಲ್ಲಿ ನಿರಾಸೆ ಅನುಭವಿಸಿದ್ದ ಸಿಂಧು, ಕೊರಿಯಾ ಓಪನ್'ನಲ್ಲಿ ಜಪಾನ್ ಆಟಗಾರ್ತಿಯನ್ನು ಬಗ್ಗುಬಡಿದ ಸಿಂಧು 29 ಲಕ್ಷ ರುಪಾಯಿ ಮೊತ್ತದ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದರು.
ಜಪಾನ್(ಸೆ.18): ನಿನ್ನೆಯಷ್ಟೇ ಕೊರಿಯಾ ಓಪನ್ ಚಾಂಪಿಯನ್ ಪಿ.ವಿ. ಸಿಂಧು ಇದೀಗ ಮತ್ತೊಂದು ಸೂಪರ್ ಸೀರಿಸ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
ಹೌದು ಜಪಾನ್ ಓಪನ್ ಸೂಪರ್ ಸೀರಿಸ್ ಮಂಗಳವಾರದಿಂದ ಆರಂಭವಾಗಲಿದ್ದು, ಪ್ರಸಕ್ತ ಋತುವಿನ ಮೂರನೇ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದಾರೆ ಸಿಂಧು. ಸಿಂಧು ಮಾತ್ರವಲ್ಲದೇ ಭಾರತದ ಮತ್ತೋರ್ವ ಭರವಸೆಯ ಆಟಗಾರ್ತಿಯಾದ ಸೈನಾ ನೆಹ್ವಾಲ್ ಕೂಡಾ ಕಣಕ್ಕಿಳಿಯುತ್ತಿದ್ದು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ವಿಶ್ವ ಚಾಂಪಿಯನ್ಸ್'ಶಿಪ್'ನಲ್ಲಿ ಜಪಾನ್ ಆಟಗಾರ್ತಿ ನಜೊಮಿ ಒಕುಹಾರ ವಿರುದ್ದ ಫೈನಲ್'ನಲ್ಲಿ ನಿರಾಸೆ ಅನುಭವಿಸಿದ್ದ ಸಿಂಧು, ಕೊರಿಯಾ ಓಪನ್'ನಲ್ಲಿ ಜಪಾನ್ ಆಟಗಾರ್ತಿಯನ್ನು ಬಗ್ಗುಬಡಿದ ಸಿಂಧು 29 ಲಕ್ಷ ರುಪಾಯಿ ಮೊತ್ತದ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದರು.
ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕೆ. ಶ್ರೀಕಾಂತ್, ಹೆಚ್.ಎಸ್ ಪ್ರಣಯ್, ಬಿ. ಸಾಯಿ ಪ್ರಣೀತ್ ಕೂಡಾ ಜಪಾನ್ ಓಪನ್'ನಲ್ಲಿ ಪಾಲ್ಗೊಳ್ಳುತ್ತಿದ್ದು ಪ್ರಭಾವಿ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ.