ಸಿಂಧು ನಿಗದಿತ ಗಾತ್ರಕ್ಕಿಂತ ದೊಡ್ಡದಿದ್ದ ಹ್ಯಾಂಡ್‌'ಬ್ಯಾಗ್ ಅನ್ನು ವಿಮಾನದೊಳಕ್ಕೆ ಕೊಂಡೊಯ್ದಿದ್ದರು. ಅವರ ಬ್ಯಾಗ್‌'ನಲ್ಲಿ ಶಟಲ್ ರಾಕೆಟ್'ಗಳಿದ್ದವು. ಕ್ಯಾಬಿನ್ ಒಳಗೆ ಆ ಹ್ಯಾಂಡ್‌'ಬ್ಯಾಗ್ ಇಡಲು ಸಾಧ್ಯವಿಲ್ಲ, ಎಲ್ಲಾ ಪ್ರಯಾಣಿಕರಿಗೂ ಒಂದೇ ನಿಯಮ ಅನ್ವಯವಾಗುತ್ತದೆ ಎಂದು ಸಿಬ್ಬಂದಿ ಒರಟಾಗಿ ಹೇಳಿದ್ದು, ಈ ವೇಳೆ ಮಾತಿನ ಚಕಮಕಿ ನಡೆದಿದೆ.
ಮುಂಬೈ(ನ.05): ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಜತೆ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸಿಂಧು ಈ ವಿಷಯನ್ನು ಟ್ವಿಟರ್'ನಲ್ಲಿ ಬಹಿರಂಗಗೊಳಿಸಿದ್ದಾರೆ.
‘ನ.4ರಂದು ಇಂಡಿಗೋ ಸಂಸ್ಥೆಯ 6ಇ 608 ವಿಮಾನದ ಮೂಲಕ ಹೈದರಾಬಾದ್'ನಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದೆ. ಆ ಸಂದರ್ಭದಲ್ಲಿ ಏರ್'ಲೈನ್'ನ ಸಿಬ್ಬಂದಿ ಅಜಿತೇಶ್ ಎಂಬುವರು ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡರು. ಅತ್ಯಂತ ಒರಟಾಗಿ ವರ್ತಿಸಿದರು’ ಎಂದು ಸಿಂಧು ದೂರಿದ್ದಾರೆ. ‘ಪ್ರಯಾಣಿಕರೊಂದಿಗೆ ಗೌರವಯುತವಾಗಿ ನಡೆದು ಕೊಳ್ಳುವಂತೆ ಹೇಳಿದ ಗಗನಸಖಿಯೊಂದಿಗೂ ಅಜಿತೇಶ್ ಕೆಟ್ಟದಾಗಿ ವರ್ತಿಸಿದರು’ಎಂದು ಟ್ವೀಟ್ ಮಾಡಿದ್ದಾರೆ.
ಆಗಿದ್ದೇನು?: ಸಿಂಧು ನಿಗದಿತ ಗಾತ್ರಕ್ಕಿಂತ ದೊಡ್ಡದಿದ್ದ ಹ್ಯಾಂಡ್'ಬ್ಯಾಗ್ ಅನ್ನು ವಿಮಾನದೊಳಕ್ಕೆ ಕೊಂಡೊಯ್ದಿದ್ದರು. ಅವರ ಬ್ಯಾಗ್'ನಲ್ಲಿ ಶಟಲ್ ರಾಕೆಟ್'ಗಳಿದ್ದವು. ಕ್ಯಾಬಿನ್ ಒಳಗೆ ಆ ಹ್ಯಾಂಡ್'ಬ್ಯಾಗ್ ಇಡಲು ಸಾಧ್ಯವಿಲ್ಲ, ಎಲ್ಲಾ ಪ್ರಯಾಣಿಕರಿಗೂ ಒಂದೇ ನಿಯಮ ಅನ್ವಯವಾಗುತ್ತದೆ ಎಂದು ಸಿಬ್ಬಂದಿ ಒರಟಾಗಿ ಹೇಳಿದ್ದು, ಈ ವೇಳೆ ಮಾತಿನ ಚಕಮಕಿ ನಡೆದಿದೆ.
ಆರೋಪ ತಳ್ಳಿ ಹಾಕಿದ ಇಂಡಿಗೋ: ಇನ್ನು ಇಂಡಿಗೋ ಸಂಸ್ಥೆ, ಸಿಂಧು ಆರೋಪವನ್ನು ತಳ್ಳಿ ಹಾಕಿದೆ. ‘ಸಿಂಧು ನಿಗದಿತ ಗಾತ್ರಕ್ಕಿಂತ ದೊಡ್ಡ ಬ್ಯಾಗನ್ನು ತಂದಿದ್ದರು. ಅದನ್ನು ವಿಮಾನದ ಕ್ಯಾಬಿನ್'ನಲ್ಲಿ ಇರಿಸಲು ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಬೇರೆಡೆ ಅದನ್ನು ಜೋಪಾನವಾಗಿ ಇರಿಸಿ. ಪ್ರಯಾಣದ ನಂತರ ಅವರಿಗೆ ನೀಡಲಾಯಿತು. ಅವರೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ’ ಎಂದು ಇಂಡಿಗೋ ಸ್ಪಷ್ಟಪಡಿಸಿದೆ.
