Asianet Suvarna News Asianet Suvarna News

ಆಸ್ಟ್ರೇಲಿಯನ್ ಓಪನ್: ಪ್ರೀ-ಕ್ವಾರ್ಟರ್'ಗೆ ಸಿಂಧು ಸೈನಾ ಶ್ರೀಕಾಂತ್

ಕಳೆದ ವಾರವಷ್ಟೇ ಇಂಡೋನೇಷ್ಯಾ ಓಪನ್ ಗೆದ್ದ ಶ್ರೀಕಾಂತ್, ಮೊದಲ ಸುತ್ತಿನಲ್ಲಿ ಚೈನೀಸ್ ತೈಪೆಯ ಕಾನ್ ಚಾವೊ ಯು ವಿರುದ್ಧ 21-13, 21-16 ನೇರ ಗೇಮ್‌'ಗಳಲ್ಲಿ ಗೆಲುವು ಸಾಧಿಸಿದರು.

PV Sindhu Saina Nehwal lead Indian advance at Australian Open
  • Facebook
  • Twitter
  • Whatsapp

ಸಿಡ್ನಿ(ಜೂ.21): ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಅಗ್ರ ಶಟ್ಲರ್'ಗಳು ಭರ್ಜರಿ ಶುಭಾರಂಭ ಮಾಡಿದ್ದಾರೆ.

ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್ ಸೇರಿದಂತೆ, ಪಿ.ವಿ.ಸಿಂಧು, ಕಿದಾಂಬಿ ಶ್ರೀಕಾಂತ್ ಹಾಗೂ ಬಿ.ಸಾಯಿ ಪ್ರಣೀತ್ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಕಳೆದ ವಾರವಷ್ಟೇ ಇಂಡೋನೇಷ್ಯಾ ಓಪನ್ ಗೆದ್ದ ಶ್ರೀಕಾಂತ್, ಮೊದಲ ಸುತ್ತಿನಲ್ಲಿ ಚೈನೀಸ್ ತೈಪೆಯ ಕಾನ್ ಚಾವೊ ಯು ವಿರುದ್ಧ 21-13, 21-16 ನೇರ ಗೇಮ್‌'ಗಳಲ್ಲಿ ಗೆಲುವು ಸಾಧಿಸಿದರೆ, ಸಾಯಿ ಪ್ರಣೀತ್ ಇಂಡೋನೇಷ್ಯಾದ ಟಾಮಿ ಸುಗಿಯಾರ್ಟೊ ವಿರುದ್ಧ 10-21, 21-12, 21-10 ಗೇಮ್‌'ಗಳಲ್ಲಿ ಪ್ರಯಾಸದ ಜಯ ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಶ್ರೀಕಾಂತ್ ಅಗ್ರ ಶ್ರೇಯಾಂಕಿತ ಸೊನ್ ವಾನ್ ಹೊ ವಿರುದ್ಧ ಸೆಣಸಲಿದ್ದಾರೆ.

ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್, 4ನೇ ಶ್ರೇಯಾಂಕಿತೆ ಸುಂಗ್ ಜಿ ಹ್ಯುನ್ ವಿರುದ್ಧ 21-10, 21-16 ಗೇಮ್‌'ಗಳ ಸುಲಭ ಗೆಲುವು ದಾಖಲಿಸಿದರು. ಇನ್ನು ಪಿ.ವಿ.ಸಿಂಧು ಇಂಡೋನೇಷ್ಯಾ ಓಪನ್ ಚಾಂಪಿಯನ್ ಸಯಾಕ ಸಟೊ ವಿರುದ್ಧ 21-17, 14-21, 21-18 ಗೇಮ್‌'ಗಳಲ್ಲಿ ಗೆದ್ದರು. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ, ಪುರುಷರ ಡಬಲ್ಸ್‌'ನಲ್ಲಿ ಸಾತ್ವಿಕ್‌ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ 2ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಆದರೆ ಎಚ್.ಎಸ್.ಪ್ರಣಯ್, ಪಿ.ಕಶ್ಯಪ್ ಸೇರಿದಂತೆ ಪುರುಷರ ಸಿಂಗಲ್ಸ್‌'ನಲ್ಲಿ ನಾಲ್ಕು ಆಟಗಾರರು ಮೊದಲ ಸುತ್ತಿನಲ್ಲೇ ಸೋಲು ಕಂಡು ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.

Follow Us:
Download App:
  • android
  • ios