ಸೈನಾ ನೆಹ್ವಾಲ್ ತನ್ನ ಬಾಲ್ಯದ ಕೋಚ್ ಪುಲ್ಲೇಲಾ ಗೋಪಿಚಂದ್ ಅವರನ್ನು ತೊರೆದು 2014ರ ಸೆಪ್ಟೆಂಬರ್'ನಿಂದ ವಿಮಲ್ ಕುಮಾರ್ ಅವರ ಬಳಿ ತರಬೇತಿ ಪಡೆಯಲಾರಂಭಿಸಿದರು. ಇದೇ ವೇಳೆ ಗೋಪಿಚಂದ್ ಗರಡಿಯಲ್ಲಿ ಪಳಗಿದ ಸಿಂಧು 2016ರ ರಿಯೊ ಕೂಟದಲ್ಲಿ ಬೆಳ್ಳಿ ಪದಕ ಹಾಗೂ 2017ರಲ್ಲಿ ವಿಶ್ವಚಾಂಪಿಯನ್ಸ್ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದೇವರ್ಷದ ಸೆಪ್ಟೆಂಬರ್'ನಲ್ಲಿ ಸೈನಾ ಮತ್ತೆ ಗೋಪಿಚಂದ್ ಅಕಾಡಮಿಗೆ ಹಿಂತಿರುಗಿದ್ದಾರೆ.
ಹೈದರಾಬಾದ್(ಡಿ.31): ನಾನು, ಸೈನಾ ನೆಹ್ವಾಲ್ ಕೇವಲ ‘ಹಾಯ್.. ಬಾಯ್’ ಸ್ನೇಹಿತರಷ್ಟೇ, ನಮ್ಮಿಬ್ಬರ ನಡುವೆ ಹೆಚ್ಚಿನ ಒಡನಾಟವಿಲ್ಲ ಎಂದು ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಹೇಳಿದ್ದಾರೆ.
‘ಆಡುವಾಗ ನಾನೇ ಗೆಲ್ಲಬೇಕೆಂಬ ಹಠ ಸದಾ ಇದ್ದೇ ಇರುತ್ತದೆ. ಅದನ್ನು ಹೊರತು ಪಡಿಸಿ ನಮ್ಮ ನಡುವೆ ವೈಯಕ್ತಿಯವಾಗಿ ಯಾವುದೇ ದ್ವೇಷವಿಲ್ಲ’ ಎಂದು ಸಿಂಧು ಸ್ಪಷ್ಟಪಡಿಸಿದ್ದಾರೆ.