ರಿಯೋ ಒಲಿಂಪಿಕ್ಸ್’ನಲ್ಲಿ ರಜತ ಪದಕ ಗಳಿಸಿ ದೇಶದ ಕೀರ್ತಿ ಹೆಚ್ಚಿಸಿದ್ದ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಜಾಹೀರಾತುಗಳ ವಿಚಾರದಲ್ಲಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಧೋನಿಯನ್ನೇ ಹಿಂದಿಕ್ಕಿದ್ದಾರೆ. ಈ ಸಾಲಿನಲ್ಲಿ ಈಕೆಗಿನ್ನು ಸವಾಲಾಗಿರುವುದು ಟೀಂ ಇಂಡಿಯಾದ ಹಾಲಿ ಆಟಗಾರ ವಿರಾಟ್ ಕೊಹ್ಲಿ ಮಾತ್ರ.

ಸ್ಪೋರ್ಟ್ ಮ್ಯಾನೇಜಗ್’ಮೆಂಟ್’ನ ಫರ್ಮ್ ಪ್ರಕಾರ ಪಿ ವಿ ಸಿಂಧು ಪ್ರಸ್ತುತ ದಿನವೊಂದಕ್ಕೆ 1 ರಿಂದ 1.25 ಕೋಟಿ ಗಳಿಸುತ್ತಿದ್ದಾರಂತೆ. ಇನ್ನು ನಂ. 1 ಸ್ಥಾನದಲ್ಲಿರುವ ಕೊಹ್ಲಿ ಒಂದು ದಿನದಲ್ಲಿ 2 ಕೋಟಿ ಗಳಿಸುತ್ತಿದ್ದಾರೆ. ಹೀಗೆ ಈ ಸಾಲಿನಲ್ಲಿ ಧೋನಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ನಾಲ್ಕನೇ ಸ್ಥಾನವನ್ನು ಸೈನಾ ಅಲಂಕರಿಸಿದರೆ, ಐದನೇ ಸ್ಥಾನದಲ್ಲಿ ಸಾನಿಯಾ ಮಿರ್ಜಾ ಇದ್ದಾರೆ.
ದಿನಗಳೆದಂತೆ ಹೆಚ್ಚುತ್ತಿದೆ ಬೇಡಿಕೆ
ರಿಯೋ ಒಲಿಂಪಿಕ್ಸ್’ನಲ್ಲಿ ರಜತ ಪದಕ ಗೆದ್ದ ಬಳಿಕ ಸಿಂಧು ಬೇಡಿಕೆ ಗಣನೀಯವಾಗಿ ಹೆಚ್ಚಿದ್ದು, ಸುಮಾರು 15 ರಿಂದ 20 ಲಕ್ಷ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಕಳೆದ ಕೆಲ ತಿಂಗಳುಗಳಿಂದ ಸಿಂಧು ಸುಮಾರು 30 ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಹಸ್ತಾಕ್ಷರ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಇತ್ತೀಚೆಗಷ್ಟೇ ಅವರು ಹಸ್ತಾಕ್ಷರ ಮಾಡಿದ ಪ್ಪಂದದಲ್ಲಿ 50 ಕೋಟಿ ನೀಡುವ ಭರವಸೆ ಸಿಕ್ಕಿದ್ದು, ಇದು 3 ವರ್ಷದ ಪ್ಪಂದ ದು ತಿಳಿದು ಬಂದಿದೆ