ಪ್ರಧಾನಿ ಮೋದಿ ಕೂಡ ಸಿಂಧು ಅವರಿಗೆ ಧನ್ಯವಾದ ತಿಳಿಸಿ ಭಾರತವು ಸಿಂಧು ಸಾಧನೆಯ ಬಗ್ಗೆ ಅಪಾರ ಹೆಮ್ಮೆ ಪಡುತ್ತದೆ'ಎಂದು ಟ್ವೀಟ್ ಮಾಡಿದ್ದರು.
ನವದೆಹಲಿ(ಸೆ.17): ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ತಮ್ಮ ಕೊರಿಯಾ ಒಪನ್ ಸೂಪರ್ ಸೀರಿಸ್'ನ ಫೈನಲ್ ಪಂದ್ಯದ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ ಅರ್ಪಿಸಿದ್ದಾರೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ಜಪಾನಿನ ನೋಜೊಮಿ ಒಕುಹರಾ ವಿರುದ್ಧ 22-20,11-21,21-18 ಸೆಟ್'ಗಳಿಂದ ಸೋಲಿಸಿದ್ದರು. ನನ್ನ ಈ ಗೆಲುವನ್ನು ನಮ್ಮ ದೇಶದ ಪ್ರಗತಿಗಾಗಿ ದುಡಿಯುತ್ತಿರುವ ಹಾಗೂ ನಿಸ್ವಾರ್ಥ ಸಾಧನೆ ಮಾಡುತ್ತಿರುವ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ಮೋದಿಯವರಿಗೆ ಅರ್ಪಿಸುತ್ತಿದ್ದೇನೆ' ಎಂದು ಟ್ವಿಟರ್'ನಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಕೂಡ ಸಿಂಧು ಅವರಿಗೆ ಧನ್ಯವಾದ ತಿಳಿಸಿ ಭಾರತವು ಸಿಂಧು ಸಾಧನೆಯ ಬಗ್ಗೆ ಅಪಾರ ಹೆಮ್ಮೆ ಪಡುತ್ತದೆ'ಎಂದು ಟ್ವೀಟ್ ಮಾಡಿದ್ದರು.