ಐಪಿಎಲ್ 11ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸಲಿರುವ ಆಟಗಾರ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಶುರುವಾಗಿದೆ. ಈ ಕುತೂಹಲವನ್ನು ತಂಡ ಮತ್ತಷ್ಟು ಹೆಚ್ಚಿಸಿದೆ.

ಮೊಹಾಲಿ: ಐಪಿಎಲ್ 11ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸಲಿರುವ ಆಟಗಾರ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಶುರುವಾಗಿದೆ. ಈ ಕುತೂಹಲವನ್ನು ತಂಡ ಮತ್ತಷ್ಟು ಹೆಚ್ಚಿಸಿದೆ.

ನಾಯಕತ್ವದ ರೇಸ್‌ನಲ್ಲಿ ಐವರು ಆಟಗಾರರು ಇದ್ದಾರೆ ಎಂದು ತಂಡ ತನ್ನ ಅಧಿಕೃತ ಟ್ವೀಟರ್ ಖಾತೆ ಮೂಲಕ ತಿಳಿಸಿದೆ.

ಯುವರಾಜ್ ಸಿಂಗ್, ಕ್ರಿಸ್ ಗೇಲ್, ಆರ್.ಅಶ್ವಿನ್, ಅಕ್ಷರ್ ಪಟೇಲ್ ಹಾಗೂ ಆರೋನ್ ಫಿಂಚ್‌ರ ಭಾವಚಿತ್ರಗಳನ್ನು ಪೋಸ್ಟ್ ಮಾಡಿ, ಯಾರು ನಾಯರಾಗಬಲ್ಲರು ಎಂದು ಅಭಿಮಾನಿಗಳನ್ನು ಪ್ರಶ್ನಿಸಿದೆ. ಸದ್ಯದಲ್ಲೇ ತಂಡ ನಾಯಕನ ಹೆಸರು ಪ್ರಕಟಿಸುವುದಾಗಿ ಹೇಳಿದೆ.