ದ್ವಿತಿಯಾರ್ಧದ ಆರಂಭದಿಂದಲೇ ಪುಣೆ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. ಉತ್ತರಾರ್ಧದ 5 ನಿಮಿಷ ಮುಕ್ತಾಯವಾಗುವಷ್ಟರಲ್ಲೇ ಪುಣೇರಿ ಪಲ್ಟಾನ್ 28-25 ಅಂಕಗಳ ಮುನ್ನಡೆ ಸಾಧಿಸಿತು.

ಮುಂಬೈ(ಅ.23): ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ ಪುಣೇರಿ ಪಲ್ಟಾನ್ 40-38 ಅಂಕಗಳಿಂದ ಜಯಭೇರಿ ಬಾರಿಸುವ ಮೂಲಕ ಕ್ವಾಲಿಫೈಯರ್ ಹಂತಕ್ಕೆ ಲಗ್ಗೆಯಿಟ್ಟರೆ, ಯುಪಿ ಯೋಧ ಟೂರ್ನಿಯಿಂದ ಹೊರಬಿದ್ದಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲಾರ್ಧದಲ್ಲಿ ಉಭಯ ತಂಡಗಳು ಸಮಬಲ ಹೋರಾಟ ನಡೆಸಿದವು. ಯುಪಿ ಪರ ನಿತಿನ್ ತೋಮರ್ ಉತ್ತಮ ದಾಳಿ ಸಂಘಟಿಸಿದರೆ, ಪುಣೆ ಪರ ಸಂಘಟಿತ ಪ್ರದರ್ಶನ ಮೂಡಿಬಂತು. ಮೊದಲಾರ್ಧ ಮುಕ್ತಾಯದ ವೇಳೆಗೆ ಉಭಯ ತಂಡಗಳು 18-18 ಅಂಕಗಳ ಸಮಬಲ ಸಾಧಿಸಿದ್ದವು.

ದ್ವಿತಿಯಾರ್ಧದ ಆರಂಭದಿಂದಲೇ ಪುಣೆ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. ಉತ್ತರಾರ್ಧದ 5 ನಿಮಿಷ ಮುಕ್ತಾಯವಾಗುವಷ್ಟರಲ್ಲೇ ಪುಣೇರಿ ಪಲ್ಟಾನ್ 28-25 ಅಂಕಗಳ ಮುನ್ನಡೆ ಸಾಧಿಸಿತು. ಆದರೆ ಪಂದ್ಯ ಮುಕ್ತಾಯಕ್ಕೆ ಕೊನೆಯ 10 ನಿಮಿಷಗಳಿದ್ದಾಗ ಪಂದ್ಯದಲ್ಲಿ ಮತ್ತೆ ಕಮ್ ಬ್ಯಾಕ್ ಮಾಡಿದ ಯೋಧಾ ಪಡೆ ಕೊನೆಯ 1 ನಿಮಿಷಗಳಿದ್ದಾಗ ಕೇವಲ 1 ಅಂಕಗಳ ಹಿನ್ನಡೆ ಅನುಭವಿಸಿತ್ತು. ಕೊನೆಯ ರೈಡ್'ನಲ್ಲಿ ಮಹೇಶ್ ಗೌಡಾ ಅವರನ್ನು ಟ್ಯಾಕಲ್ ಮಾಡಿದ ಪಲ್ಟಾನ್ ಗೆಲುವಿನ ನಗೆ ಬೀರಿತು.