ಅಬುಧಾಬಿ[ಜ.09]: ಅಭ್ಯಾಸದ ವೇಳೆ ಶಿಸ್ತು ನಿಯಮ ಉಲ್ಲಂಘನೆ ಮಾಡಿದ್ದ ಭಾರತ ಫುಟ್ಬಾಲ್‌ ತಂಡದ ಆಟಗಾರರರಿಂದ ದಂಡವಾಗಿ ಸಂಗ್ರಹಿಸಿದ್ದ 50,000 ಹಣವನ್ನು ಭಾರತೀಯ ಅಂಧರ ಫುಟ್ಬಾಲ್‌ ಫೆಡರೇಷನ್‌(ಐಬಿಎಫ್‌ಎಫ್‌)ಗೆ ನೀಡಲು ತಂಡ ನಿರ್ಧರಿಸಿದೆ. 

ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 4-1 ಜಯ

ಆಟಗಾರರು ಅಭ್ಯಾಸಕ್ಕೆ ತಡವಾಗಿ ಬರುವುದು, ಊಟದ ವೇಳೆ ಮೊಬೈಲ್‌ ತರುವುದು ಮತ್ತು ಅನುಮತಿಯಿಲ್ಲದ ಬಟ್ಟೆಗಳನ್ನು ಧರಿಸುವುದು ಇಂತಹ ನಿಯಮಗಳನ್ನು ಉಲ್ಲಂಘನೆ ಮಾಡಿದಾಗ ಆಟಗಾರರಿಂದ ಸಣ್ಣ ಪ್ರಮಾಣದಲ್ಲಿ ದಂಡ ಸಂಗ್ರಹಿಸಲಾಗುತ್ತಿತ್ತು. ಈ ರೀತಿಯಲ್ಲಿ ಸಂಗ್ರಹವಾದ ಹಣವನ್ನು ಭಾರತ ಫುಟ್ಬಾಲ್‌ ತಂಡ, ಫುಟ್ಬಾಲ್‌ಗಳನ್ನು ಖರೀದಿಸಲು ಐಬಿಎಫ್‌ಎಫ್‌ಗೆ ದಾನವಾಗಿ ನೀಡಲು ನಿರ್ಧರಿಸಿದೆ.

ಇದೀಗ ಸುನಿಲ್ ಚೆಟ್ರಿ ನೇತೃತ್ವದ ಭಾರತ ಫುಟ್ಬಾಲ್ ತಂಡ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.