ದಕ್ಷಿಣ ಆಫ್ರಿಕಾ ತಂಡದ ಯಶಸ್ವಿ ನಾಯಕ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಸ್ಮಿತ್, ಪ್ರಸ್ತುತ ಐಪಿಎಲ್ ಚಾಂಪಿಯನ್ಸ್ ಟ್ರೋಫಿಯಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲಂಡನ್(ಜೂ.09): ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಕೈಚೆಲ್ಲಿರುವ ಎಬಿ ಡಿವಿಲಿಯರ್ಸ್ ಪಡೆ ಸೆಮೀಸ್ ತಲುಪಲು ಭಾರತದ ವಿರುದ್ಧ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿಲುಕಿದೆ. ಹೀಗಾಗಿ ಇಂದು ದಕ್ಷಿಣ ಆಫ್ರಿಕಾ ತಂಡ ನೆಟ್ಸ್'ನಲ್ಲಿ ಸಾಕಷ್ಟು ಬೆವರು ಹರಿಸಿತು.

ಈ ವೇಳೆ ಹರಿಣಗಳ ಪಡೆಯ ಮಾಜಿ ನಾಯಕ ಗ್ರೇಮ್ ಸ್ಮಿತ್ ಆಟಗಾರರು ಅಭ್ಯಾಸ ನಡೆಸುವಲ್ಲಿಗೆ ಬಂದು ಸಾಕಷ್ಟು ಉಪಯುಕ್ತ ಸಲಹೆಗಳನ್ನು ನೀಡಿದರು.

ದಕ್ಷಿಣ ಆಫ್ರಿಕಾ ತಂಡದ ಯಶಸ್ವಿ ನಾಯಕ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಸ್ಮಿತ್, ಪ್ರಸ್ತುತ ಐಪಿಎಲ್ ಚಾಂಪಿಯನ್ಸ್ ಟ್ರೋಫಿಯಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಮಿತ್ ತಮ್ಮ ವೈಯುಕ್ತಿಕ ಕೆಲಸಗಳನ್ನೆಲ್ಲಾ ಬದಿಗೊತ್ತಿ ಎಬಿ ಡಿವಿಲಿಯರ್ಸ್ ಪಡೆಗೆ ಭಾರತ ವಿರುದ್ಧದ ಪಂದ್ಯಕ್ಕೆ ತಂತ್ರಗಾರಿಕೆ ಹೇಳಿಕೊಟ್ಟಿದ್ದಾರೆ.

ಈ ಮೊದಲು ಶ್ರೀಲಂಕಾ- ಭಾರತ ನಡುವಿನ ಪಂದ್ಯಕ್ಕೂ ಲಂಕಾ ಆಟಗಾರರು ಅಭ್ಯಾಸ ನಡೆಸುತ್ತಿದ್ದ ವೇಳೆ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಇದೇ ರೀತಿ ಆಟಗಾರರಿಗೆ ಹುರಿದುಂಬಿಸಿ, ಅವರೊಂದಿಗೆ ನೆಟ್ಸ್‌'ನಲ್ಲಿ ಕಾಲ ಕಳೆದಿದ್ದರು.