ಯುವ ಆಟಗಾರ ನಿಕಿನ್ ಜೋಸ್ ಹಾಗೂ ಕಳೆದ ಸಾಲಿನಲ್ಲಿ ಅಸ್ಸಾಂ ಪರ ಆಡಿದ್ದ ಆಲ್ರೌಂಡರ್ ಅಮಿತ್ ವರ್ಮಾಗೆ ಸ್ಥಾನ ನೀಡಲಾಗಿದೆ.
ಬೆಂಗಳೂರು(ಸೆ.03): ಇದೇ ಅಕ್ಟೋಬರ್ 6 ರಿಂದ ಆರಂಭವಾಗಲಿರುವ 2017-18ನೇ ಸಾಲಿನ ರಣಜಿ ಟ್ರೋಫಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ 35 ಆಟಗಾರರ ಸಂಭಾವ್ಯ ತಂಡವನ್ನು ಪ್ರಕಟಿಸಿದೆ.
ಯುವ ಆಟಗಾರ ನಿಕಿನ್ ಜೋಸ್ ಹಾಗೂ ಕಳೆದ ಸಾಲಿನಲ್ಲಿ ಅಸ್ಸಾಂ ಪರ ಆಡಿದ್ದ ಆಲ್ರೌಂಡರ್ ಅಮಿತ್ ವರ್ಮಾಗೆ ಸ್ಥಾನ ನೀಡಲಾಗಿದೆ. ‘ಎ’ ಗುಂಪಿನಲ್ಲಿ ಕರ್ನಾಟಕ ಸ್ಥಾನ ಪಡೆದಿದ್ದು, ಮೊದಲ ಪಂದ್ಯಕ್ಕೂ ಮುನ್ನ ಅಂತಿಮ 15 ಆಟಗಾರರ ಪಟ್ಟಿಯನ್ನು ಪ್ರಕಟ ಮಾಡಲಾಗುತ್ತದೆ.
ಸಂಭಾವ್ಯ ತಂಡ: ಕೆ.ಎಲ್. ರಾಹುಲ್, ಮಯಾಂಕ್ ಅಗರ್‌ವಾಲ್, ಆರ್.ಸಮರ್ಥ್, ಅಭಿಷೇಕ್ ರೆಡ್ಡಿ, ಪವನ್ ಕೆ.ಬಿ. ನಿಶ್ಚಲ್ ಡಿ., ನಿಕಿನ್ ಜೋಸ್, ಮನೀಶ್ ಪಾಂಡೆ, ಕರುಣ್ ನಾಯರ್, ಶಿಶಿರ್ ಭವಾನೆ, ಪವನ್ ದೇಶಪಾಂಡೆ, ಮಿರ್ ಕೌನೇನ್ ಅಬ್ಬಾಸ್, ಕುನಾಲ್ ಕಪೂರ್, ಸುನಿಲ್ ರಾಜು, ಅಮಿತ್ ವರ್ಮಾ, ಅನಿರುದ್ಧ ಜೋಶಿ, ಸಿ.ಎಂ.ಗೌತಮ್, ಶರತ್ ಶ್ರೀನಿವಾಸ್, ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಪ್ರವೀಣ್ ದುಬೆ, ಡೇವಿಡ್ ಮಥಿಯಸ್, ಸುಚಿತ್ ಜೆ., ಮಿತ್ರಕಾಂತ್ ಯಾದವ್, ಕೆ. ಗೌತಮ್,ಆರ್., ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಶ್ರೀನಾಥ್ ಅರವಿಂದ್, ಪ್ರಸಿದ್ಧ ಕೃಷ್ಣ, ಪ್ರದೀಪ್ ಟಿ., ರೋನಿತ್ ಮೋರೆ, ಪ್ರತೀಕ್ ಜೈನ್, ಶರತ್ ಎಚ್.ಎಸ್., ಅರ್ಜುನ್ ಹೊಯ್ಸಳ, ರಿತೇಶ್ ಭಟ್ಕಳ್.
