Asianet Suvarna News Asianet Suvarna News

ಪ್ರೊ ಕಬ​ಡ್ಡಿಗೆ ಕಂಠೀ​ರವ ಕ್ರೀಡಾಂಗ​ಣ ಸಿಕ್ಕಿ​ದ್ದೇಗೆ?

ಉದ್ಯಾನ ನಗರಿಯಲ್ಲಿ 2 ವರ್ಷಗಳ ಬಳಿಕ ಪ್ರೊ ಕಬಡ್ಡಿ ಪಂದ್ಯ​ಗಳು ನಡೆ​ಯು​ತ್ತಿವೆ. ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿ​ಯನ್‌ ಬೆಂಗ​ಳೂರು ಬುಲ್ಸ್‌ ತನ್ನ ತವ​ರಿನ ಚರ​ಣವನ್ನು ಆಡು​ತ್ತಿದ್ದು, ಅಭಿ​ಮಾ​ನಿ​ಗ​ಳಿಗೆ ಭರ​ಪೂರ ಮನ​ರಂಜನೆ ಸಿಗು​ತ್ತಿದೆ. ಈ ಹಿಂದೆ 2 ವರ್ಷ ಬುಲ್ಸ್‌ಗೆ ಕಂಠೀ​ರವ ಕ್ರೀಡಾಂಗಣ ಸಿಕ್ಕಿ​ರ​ಲಿಲ್ಲ ಏಕೆ?. ಈ ಬಾರಿ ಕ್ರೀಡಾಂಗಣ ಸಿಗಲು ಏನು ಕಾರಣ?, ಕ್ರೀಡಾಂಗಣ ಪಡೆ​ಯಲು ಬುಲ್ಸ್‌ ಪಾವ​ತಿ​ಸಿ​ರುವ ಶುಲ್ಕ ಎಷ್ಟು?. ಈ ಎಲ್ಲಾ ವಿವರಗಳು ಇದೇ ಮೊದಲ ಬಾರಿಗೆ ಬಹಿ​ರಂಗಗೊಂಡಿದ್ದು, ಆ ವಿವರಗಳು ‘ಸುವರ್ಣನ್ಯೂಸ್.ಕಾಂ’ಗೆ ಲಭ್ಯ​ವಾ​ಗಿದೆ.

Pro kabaddi paid huge amount to sri kanteerava stadium for organize game
Author
Bengaluru, First Published Sep 6, 2019, 9:48 AM IST
  • Facebook
  • Twitter
  • Whatsapp

ಬೆಂಗಳೂರು(ಸೆ.06):  ಕಳೆದ 2 ಆವೃ​ತ್ತಿ​ಗ​ಳಲ್ಲಿ ಬುಲ್ಸ್‌ ತಂಡ ತನ್ನ ತವ​ರಿನ ಚರಣವನ್ನು ಬೇರೆ ಸ್ಥಳ​ಗ​ಳಲ್ಲಿ ಆಡಿತ್ತು. 5ನೇ ಆವೃ​ತ್ತಿ​ಯಲ್ಲಿ ನಾಗ್ಪುರ, 6ನೇ ಆವೃ​ತ್ತಿ​ಯಲ್ಲಿ ಪುಣೆಯಲ್ಲಿ ಪಂದ್ಯ​ಗ​ಳನ್ನು ನಡೆ​ಸ​ಲಾ​ಗಿತ್ತು. ಕಳೆದ 2 ವರ್ಷ ಬೆಂಗ​ಳೂ​ರಿಗೆ ಆತಿಥ್ಯ ಕೈತ​ಪ್ಪಲು ತಂಡ ಮಾಡಿದ್ದ ಎಡ​ವಟ್ಟೇ ಕಾರಣ ಎನ್ನ​ಲಾ​ಗಿದೆ. ಕ್ರೀಡಾ ಇಲಾಖೆ ಅಧಿ​ಕಾ​ರಿ​ಗಳು ಈ ಸಂಬಂಧ ಮಾಹಿತಿ ನೀಡಿದ್ದಾರೆ. ‘ಕ​ಳೆದ 2 ಆವೃ​ತ್ತಿ​ಗಳಲ್ಲಿ ಕ್ರೀಡಾಂಗಣ ನೀಡುವುದಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಆದರೆ ತಂಡ ಸರಿಯಾದ ಕ್ರಮದಲ್ಲಿ ಹಾಗೂ ನಿಗ​ದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಿರಲಿಲ್ಲ. ಆದರೆ ಈ ಬಾರಿ 2 ತಿಂಗಳು ಮುಂಚಿತವಾಗಿಯೇ ಅರ್ಜಿ ಸಲ್ಲಿಸಿ, ಪಂದ್ಯ​ಗಳ ಆಯೋ​ಜನೆ ಮಾಡಲು ಕೋರ​ಲಾ​ಗಿತ್ತು. ಕಬಡ್ಡಿ ಪಂದ್ಯ​ಗಳು ನಿಗ​ದಿ​ಯಾ​ಗಿದ್ದ ದಿನ​ಗ​ಳಂದು ಒಳಾಂಗಣ ಕ್ರೀಡಾಂಗಣದಲ್ಲಿ ಮತ್ತ್ಯಾ​ವುದೇ ಕ್ರೀಡೆಗಳು ಆಯೋ​ಜನೆಗೊಳ್ಳದ ಕಾರಣ, ಕ್ರೀಡಾಂಗಣವನ್ನು ಬಿಟ್ಟು​ಕೊ​ಡ​ಲಾ​ಗಿದೆ’ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಕಂಠೀರವದಲ್ಲಿ ಫುಟ್ಬಾಲ್: ಉಗ್ರ ಹೋರಾಟಕ್ಕೆ KAA ನಿರ್ಧಾರ

ಪಂದ್ಯ ಆಯೋ​ಜನೆ ಬಲು ದುಬಾ​ರಿ!
ಕಂಠೀ​ರವ ಒಳಾಂಗಣ ಕ್ರೀಡಾಂಗಣವನ್ನು ಬಾಡಿಗೆ ಪಡೆ​ಯ​ಬೇ​ಕಿ​ದ್ದರೆ ಕ್ರೀಡಾ ಇಲಾಖೆಗೆ ಲಕ್ಷಾಂತರ ರುಪಾಯಿ ಶುಲ್ಕ ಪಾವ​ತಿ​ಸ​ಬೇಕು. ವಿವಿಧ ವಿಭಾಗಗಳಲ್ಲಿ ಶುಲ್ಕ ಪಡೆಯಲಾ​ಗು​ತ್ತದೆ. ಪಂದ್ಯಗಳು ಆರಂಭಗೊಳ್ಳುವ ಮುನ್ನ ಕ್ರೀಡಾಂಗಣವನ್ನು ಸಿದ್ಧಗೊಳಿ​ಸ​ಲಾ​ಗು​ತ್ತದೆ. ಅದಕ್ಕೆ ಪ್ರತ್ಯೇಕ ಶುಲ್ಕ ಇರ​ಲಿದೆ. ಪಂದ್ಯ​ಗಳು ನಡೆ​ಯುವ ದಿನ​ಗ​ಳಂದು ಪ್ರತಿ ದಿನಕ್ಕೆ .5 ಲಕ್ಷ ಬಾಡಿಗೆ ಪಾವ​ತಿ​ಸ​ಬೇಕು. ಪಂದ್ಯ​ಗಳು ಮುಕ್ತಾ​ಯ​ಗೊಂಡ ಬಳಿಕ, ಕ್ರೀಡಾಂಗಣ ತೆರವು ಮಾಡಲು ಸಹ ಶುಲ್ಕ ಕಟ್ಟ​ಬೇ​ಕಿದೆ. ಪಾರ್ಕಿಂಗ್‌, ಸ್ವಚ್ಛತಾ ಕಾರ್ಯಕ್ಕೆಂದು ಬುಲ್ಸ್‌ 2.35 ಲಕ್ಷ ನೀಡಿದೆ.

ಇದನ್ನೂ ಓದಿ: ಕನ್ನಡಪ್ರಭ ಇಂಪಾಕ್ಟ್: ಕಂಠೀರವಕ್ಕೆ ಆರ್ ಅಶೋಕ್ ಭೇಟಿ-ಅಧಿಕಾರಿಗಳಿಗೆ ಕ್ಲಾಸ್!

ಪಂದ್ಯ​ಗ​ಳನ್ನು ಪ್ರಸಾರ ಮಾಡುವ ಕೊಠಡಿ, ಮಾಧ್ಯಮ ಹಾಗೂ ಸುದ್ದಿ​ಗೋಷ್ಠಿ ನಡೆ​ಸಲು ಕೊಠಡಿ, ಅಭ್ಯಾಸ ನಡೆ​ಸಲು ಸ್ಥಳ, ಉಗ್ರಾಣ, ಕಚೇರಿ, ಡ್ರೆಸ್ಸಿಂಗ್‌ ಕೊಠಡಿ, ರೆಫ್ರಿ​ಗಳ ಕೊಠಡಿ, ವೈದ್ಯ​ಕೀಯ ಕೊಠಡಿ, ಉದ್ದೀ​ಪನಾ ಪರೀಕ್ಷಾ ಕೊಠಡಿ, ಟಿಕೆಟ್‌ ಮಾರಾಟ ಸ್ಥಳ ಹೀಗೆ ಪ್ರತಿ​ಯೊಂದಕ್ಕೂ ಪ್ರತ್ಯೇ​ಕ​ವಾಗಿ ಶುಲ್ಕ ಪಾವ​ತಿಸಿ ಪಡೆ​ಯ​ಲಾ​ಗಿದೆ.

ಇನ್ನು ಜಿಎಸ್‌ಟಿ ರೂಪದಲ್ಲಿ 9.29 ಲಕ್ಷ ಪಾವ​ತಿ​ಸಿ​ರುವ ಬುಲ್ಸ್‌ ತಂಡ, 5 ಲಕ್ಷ ಭದ್ರತಾ ಠೇವಣಿ ಇರಿ​ಸಿದೆ. ಒಟ್ಟು 65.94 ಲಕ್ಷ ಖರ್ಚು ಮಾಡಿದೆ. ಇದ​ಲ್ಲದೇ, ಒಳಾಂಗಣ ಕ್ರೀಡಾಂಗಣದ ಮರದ ನೆಲಹಾಸಿನ ಸುರಕ್ಷತೆಗಾಗಿ ಕ್ರೀಡಾಕೂಟದ ಅವಧಿಗೆ ವಿಮಾ ಕಂಪನಿಗೆ ಅಗತ್ಯ ಪ್ರೀಮಿಯಂ ನೀಡಿ, 2 ಕೋಟಿಗಳ ವಿಮಾ ಮೊತ್ತದ ಪಾಲಿಸಿ ಬಾಂಡನ್ನು ಪಡೆ​ಯ​ಲಾ​ಗಿದೆ.

ಐಐ​ಪಿಕೆಎಲ್‌ಗೆ ಸಿಕ್ಕಿತ್ತು ಶೇ. 50% ರಿಯಾಯಿತಿ!
ಪ್ರೊ ಕಬಡ್ಡಿಗೂ ಮುನ್ನ ಈ ವರ್ಷ ಮೇ 29ರಿಂದ ಜೂ.4ರ ವರೆಗೂ ನೂ ಕಬಡ್ಡಿ ಫೆಡ​ರೇ​ಷನ್‌(ಎನ್‌ಕೆಎಫ್‌) ಆಯೋ​ಜಿ​ಸಿದ್ದ ಇಂಡೋ ಇಂಟರ್‌ ನ್ಯಾಷ​ನಲ್‌ ಪ್ರೀಮಿ​ಯರ್‌ ಕಬಡ್ಡಿ ಲೀಗ್‌ (ಐ​ಐ​ಪಿಕೆಎಲ್‌)ಗೆ ಕಂಠೀ​ರವ ಕ್ರೀಡಾಂಗಣವನ್ನು ನೀಡ​ಲಾ​ಗಿತ್ತು. ಇದ​ರಿಂದ ಪ್ರೊ ಕಬಡ್ಡಿ ಆಯೋ​ಜ​ಕ​ರಿಗೂ ಈ ವರ್ಷ ಕ್ರೀಡಾಂಗಣ ದೊರೆ​ಯುವ ವಿಶ್ವಾಸ ಸಿಕ್ಕಿತ್ತು. ಐಐ​ಪಿಕೆಎಲ್‌ ಆಯೋ​ಜ​ಕ​ರಿಗೆ ಕ್ರೀಡಾ ಇಲಾಖೆಯಿಂದ ಶೇ.50ರಷ್ಟುರಿಯಾ​ಯಿ​ತಿ ಸಿಕ್ಕಿತ್ತು. ಆಯೋ​ಜ​ಕರು ಅಂದಿನ ಮುಖ್ಯ​ಮಂತ್ರಿ​ಗ​ಳಿಗೆ ಆಪ್ತ​ರಾ​ಗಿದ್ದ ಕಾರಣ, ರಿಯಾ​ಯಿತಿ ಸಿಕ್ಕಿತ್ತು ಎಂದು ಹೇಳ​ಲಾ​ಗಿದೆ. ಪಂದ್ಯ​ಗಳು ಆರಂಭ​ಗೊ​ಳ್ಳುವ ಮೊದಲು 3 ದಿನ ಹಾಗೂ 4 ದಿನ ಪಂದ್ಯ​ಗಳ ಆಯೋ​ಜ​ನೆಗೆ ಒಟ್ಟು 24.5 ಲಕ್ಷ ಶುಲ್ಕ ಪಾವ​ತಿ​ಸ​ಬೇ​ಕಿತ್ತು. ಶೇ.50ರಷ್ಟುರಿಯಾ​ಯಿತಿ ಬಳಿಕ ಎನ್‌ಕೆಎಫ್‌ 12.25 ಲಕ್ಷಕ್ಕೆ ಕ್ರೀಡಾಂಗಣವನ್ನು ಬಾಡಿಗೆಗೆ ಪಡೆ​ದು​ಕೊಂಡಿತ್ತು ಎನ್ನುವ ವಿವರ ಮೂಲ​ಗ​ಳಿಂದ ತಿಳಿ​ದು​ಬಂದಿದೆ.

ವರದಿ: ಧನಂಜಯ ಎಸ್‌.ಹ​ಕಾರಿ

Follow Us:
Download App:
  • android
  • ios