Asianet Suvarna News Asianet Suvarna News

ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ; ಬೆಂಗಳೂರಲ್ಲಿ ಪಂದ್ಯ ನೋಡಲು ರೆಡಿಯಾಗಿ..!

ಗುಜರಾತ್‌ ಜಯಂಟ್ಸ್‌ ಹಾಗೂ ತೆಲುಗು ಟೈಟನ್ಸ್‌ ತಂಡಗಳು ಮುಖಾಮುಖಿಯೊಂದಿಗೆ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿ ಆರಂಭವಾಗಲಿದೆ. ಪವನ್‌ ಶೆರಾವತ್‌, ಫಜೆಲ್‌ ಅತ್ರಾಚಲಿ, ಅಜಿಂಕ್ಯ ಪವಾರ್‌ ಮತ್ತು ನವೀನ್‌ ಕುಮಾರ್‌ ಅವರಂತಹ ಅಗ್ರಮಾನ್ಯ ಸ್ಟಾರ್‌ಗಳು ಆರಂಭಿಕ ವಾರಾಂತ್ಯದ ಹೈವೋಲ್ಟೇಜ್‌ ಪಂದ್ಯಗಳ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಲು ಸಜ್ಜಾಗಿದ್ದಾರೆ.

Pro Kabaddi League Season 10 Schedule Announced begins December 02 kvn
Author
First Published Oct 19, 2023, 6:49 PM IST

ಬೆಂಗಳೂರು(ಅ.19): ಬಹುನಿರೀಕ್ಷಿತ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ವೇಳಾಪಟ್ಟಿಯನ್ನು ಪ್ರಕಟಗೊಂಡಿದೆ. 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ 12 ತಂಡಗಳು ಪಾಲ್ಗೊಳ್ಳುತ್ತಿದ್ದು  12 ನಗರಗಳ ಕಾರವಾನ್‌ ಸ್ವರೂಪಕ್ಕೆ ಪಿಕೆಎಲ್ ಮರಳಿದೆ. ಡಿಸೆಂಬರ್‌ 2 ರಂದು ಅಹಮದಾಬಾದ್‌ನ ಅರೆನಾ ಬೈ ಟ್ರಾನ್ಸ್‌ ಸ್ಟೇಡಿಯಾ ಕ್ರೀಡಾಂಗಣದಲ್ಲಿ ಪಿಕೆಎಲ್ ಟೂರ್ನಿ ಪ್ರಾರಂಭವಾಗಲಿದ್ದು, ನಂತರ ಫ್ರಾಂಚೈಸಿಯ ತವರು ನಗರಗಳಿಗೆ ಸ್ಥಳಾಂತರಗೊಳ್ಳಲಿದೆ. ಲೀಗ್‌ ಹಂತವು 2023 ಡಿಸೆಂಬರ್‌ 2 ರಿಂದ 2024ರ ಫೆಬ್ರವರಿ 21 ರವರೆಗೆ ನಡೆಯಲಿದೆ. ಪ್ಲೇಆಫ್‌ಗಳ ವೇಳಾಪಟ್ಟಿಯನ್ನು ನಂತರದ ದಿನಾಂಕದಲ್ಲಿ ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. 

ಅಹಮದಾಬಾದ್‌ ಚರಣ 2023ರ ಡಿಸೆಂಬರ್‌ 2ರಿಂದ 7ರವರೆಗೆ ನಡೆಯಲಿದೆ. ನಂತರ, ಬೆಂಗಳೂರು (8-13 ಡಿಸೆಂಬರ್‌ 2023), ಪುಣೆ (15-20 ಡಿಸೆಂಬರ್‌ 2023), ಚೆನ್ನೈ (22-27 ಡಿಸೆಂಬರ್‌ 2023), ನೋಯ್ಡಾ (29 ಡಿಸೆಂಬರ್‌ 2023 - 3 ಜನವರಿ 2024), ಮುಂಬೈ (5-10 ಜನವರಿ 2024), ಜೈಪುರ (12-17 ಜನವರಿ 2024), ಹೈದರಾಬಾದ್‌ (19-24 ಜನವರಿ 2024), ಪಟನಾ (26-31 ಜನವರಿ 2024), ಡೆಲ್ಲಿ(2-7 ಫೆಬ್ರವರಿ 2024), ಕೋಲ್ಕೊತಾ (9-14 ಫೆಬ್ರವರಿ 2024) ಮತ್ತು ಪಂಚಕುಲ (16-21 ಫೆಬ್ರವರಿ 2024)ಗಳಲ್ಲಿ ಲೀಗ್ ಹಂತದ ಪ್ರೊ ಕಬಡ್ಡಿ ಪಂದ್ಯಗಳು ಜರುಗಲಿವೆ

ಪಂದ್ಯದ ಮಧ್ಯದಲ್ಲೇ ಮೈದಾನ ತೊರೆದ ಪಾಂಡ್ಯ..! ಹಾರ್ದಿಕ್‌ ಗಾಯದ ಬಗ್ಗೆ ಮಹತ್ವದ ಅಪ್‌ಡೇಟ್ ಕೊಟ್ಟ BCCI

ಗುಜರಾತ್‌ ಜಯಂಟ್ಸ್‌ ಹಾಗೂ ತೆಲುಗು ಟೈಟನ್ಸ್‌ ತಂಡಗಳು ಮುಖಾಮುಖಿಯೊಂದಿಗೆ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿ ಆರಂಭವಾಗಲಿದೆ. ಪವನ್‌ ಶೆರಾವತ್‌, ಫಜೆಲ್‌ ಅತ್ರಾಚಲಿ, ಅಜಿಂಕ್ಯ ಪವಾರ್‌ ಮತ್ತು ನವೀನ್‌ ಕುಮಾರ್‌ ಅವರಂತಹ ಅಗ್ರಮಾನ್ಯ ಸ್ಟಾರ್‌ಗಳು ಆರಂಭಿಕ ವಾರಾಂತ್ಯದ ಹೈವೋಲ್ಟೇಜ್‌ ಪಂದ್ಯಗಳ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಲು ಸಜ್ಜಾಗಿದ್ದಾರೆ.

ಪಿಕೆಎಲ್‌ 10ನೇ ಆವೃತ್ತಿಯ ವೇಳಾಪಟ್ಟಿಯ ಬಗ್ಗೆ ಮಾತನಾಡಿದ ಮಶಾಲ್‌ ಸ್ಪೋರ್ಟ್ಸ್ ಮತ್ತು ಪ್ರೊ ಕಬಡ್ಡಿ ಲೀಗ್‌ನ ಲೀಗ್‌ ಆಯುಕ್ತ ಅನುಪಮ್‌ ಗೋಸ್ವಾಮಿ, ‘‘ ಪ್ರೊ ಕಬಡ್ಡಿ 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲು ಮಶಾಲ್‌ ಸ್ಪೋರ್ಟ್ಸ್ ಸಂತೋಷವಾಗಿದೆ. ಹಿಂದಿನ ಆವೃತ್ತಿಗಳಂತೆ  ಈ ವೇಳಾಪಟ್ಟಿಯು ಪಿಕೆಎಲ್‌ ಅಭಿಮಾನಿಗಳ ನಡವಳಿಕೆ ಮತ್ತು ಭಾವನೆಗಳ ಬಗ್ಗೆ ಅನೇಕ ಪರಿಗಣನೆಗಳು ಮತ್ತು ನಿಖರವಾದ ಯೋಜನೆಯ ಫಲಿತಾಂಶವಾಗಿದೆ ಮತ್ತು ನಮ್ಮ ಲೀಗ್‌ನ ಹೆಗ್ಗುರುತು ಹತ್ತನೇ ಋುತುವಿನಾದ್ಯಂತ ಉತ್ತಮ-ಗುಣಮಟ್ಟದ ಮತ್ತು ಸಂಬಂಧಿತ ಸ್ಪರ್ಧೆಯ ಪೋಷಣೆಯಾಗಿದೆ,’’ ಎಂದು ತಿಳಿಸಿದರು.

PKL Auction: ಬೆಂಗಳೂರು ಬುಲ್ಸ್ ತಂಡಕ್ಕೆ ಸುರ್ಜೀತ್, ಅಭಿಷೇಕ್ ಸಿಂಗ್

ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯು ಸ್ಟಾರ್‌ ಸ್ಪೋರ್ಟ್ಸ್ ನೆಟ್ವರ್ಕ್‌ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿನೇರ ಪ್ರಸಾರವಾಗಲಿದೆ.

ಪ್ರೊ ಕಬಡ್ಡಿ ವೇಳಾಪಟ್ಟಿ

2 ಡಿಸೆಂಬರ್‌- 21 ಫೆಬ್ರವರಿ

ಬೆಂಗಳೂರು ಚರಣ: ಡಿಸೆಂಬರ್‌ 8-14

8 ಡಿಸೆಂಬರ್‌: ಬೆಂಗಳೂರು ಬುಲ್ಸ್‌-ದಬಾಂಗ್‌ ಡೆಲ್ಲಿ
    ಪುಣೇರಿ ಪಲ್ಟನ್‌-ಯು ಮುಂಬಾ

9 ಡಿಸೆಂಬರ್‌: ಬಂಗಳೂರು ಬುಲ್ಸ್‌-ಹರ್ಯಾಣ ಸ್ಟೀಲರ್ಸ್‌
    ಯುಪಿ ಯೋಧಾಸ್‌-ತೆಲುಗು ಟೈಟಾನ್ಸ್‌

10 ಡಿಸೆಂಬರ್‌: ಬೆಂಗಾಲ್‌ ವಾರಿಯರ್ಸ್‌-ತಮಿಳ್‌ ತಲೈವಾಸ್‌
    ದಬಾಂಗ್‌ ಡೆಲ್ಲಿ-ಹರ್ಯಾಣ ಸ್ಟೀಲರ್ಸ್‌

11 ಡಿಸೆಂಬರ್‌: ಜೈಪುರ ಪಿಂಕ್‌ ಪ್ಯಾಂಥರ್ಸ್‌-ಗುಜರಾತ್‌ ಟೈಟಾನ್ಸ್‌
    ಬೆಂಗಳೂರು ಬುಲ್ಸ್‌-ಯುಪಿ ಯೋಧಾಸ್‌

12 ಡಿಸೆಂಬರ್‌: ಬೆಂಗಾಲ್‌ ವಾರಿಯರ್ಸ್‌-ಪಾಟ್ನಾ ಪೈರೇಟ್ಸ್‌

13 ಡಿಸೆಂಬರ್‌: ತಮಿಳ್‌ ತಲೈವಾಸ್‌-ತೆಲುಗು ಟೈಟಾನ್ಸ್‌
    ಬೆಂಗಳೂರು ಬುಲ್ಸ್‌-ಜೈಪುರ ಪಿಂಕ್‌ ಪ್ಯಾಂಥರ್ಸ್‌

ಮೊದಲ ಪಂದ್ಯ: ರಾತ್ರಿ 8ಕ್ಕೆ, 2ನೇ ಪಂದ್ಯ: ರಾತ್ರಿ 9ಕ್ಕೆ

Follow Us:
Download App:
  • android
  • ios