Pro Kabaddi League: ಪ್ರದೀಪ್ ನರ್ವಾಲ್ ಅಬ್ಬರಕ್ಕೆ ನಲುಗಿದ ದಬಾಂಗ್ ಡೆಲ್ಲಿ

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಫಾರ್ಮ್‌ಗೆ ಮರಳಿದ ಪ್ರದೀಪ್ ನರ್ವಾಲ್
ದಬಾಂಗ್ ಡೆಲ್ಲಿ ಎದುರು 22 ಅಂಕ ಗಳಿಸಿ ಬೀಗಿದ ನರ್ವಾಲ್
ದಬಾಂಗ್ ಡೆಲ್ಲಿ ಎದುರು ಯುಪಿ ಯೋಧಾಗೆ ಭರ್ಜರಿ ಜಯಭೇರಿ

Pro Kabaddi League Pardeep Narwal rocks UP Yoddhas to victory against Dabang Delhi KC kvn

ಪುಣೆ(ನ.17): ಪ್ರೊ ಕಬಡ್ಡಿಯಲ್ಲಿ ಸಾರ್ವಕಾಲಿಕ ಅಧಿಕ ರೈಡಿಂಗ್‌ ಅಂಕಗಳನ್ನು ಪಡೆದಿರುವ ಪ್ರದೀಪ್‌ ನರ್ವಾಲ್‌ 9ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ತಮ್ಮ ಅಸಲಿ ಆಟ ಪ್ರದರ್ಶಿಸಿದ್ದಾರೆ. ಪ್ರದೀಪ್‌ರ ಸಾಹಸಕ್ಕೆ ಬೆಚ್ಚಿ ಬಿದ್ದ ದಬಾಂಗ್‌ ಡೆಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಯು.ಪಿ.ಯೋಧಾಸ್‌ಗೆ 31-50ರ ಅಂತರದಲ್ಲಿ ಶರಣಾಯಿತು.

ಪ್ರದೀಪ್‌ ಬರೋಬ್ಬರಿ 22 ರೈಡ್‌ ಅಂಕ ಕೊಳ್ಳೆ ಹೊಡೆದರು. ಪಂದ್ಯದ 15 ನಿಮಿಷಗಳೊಳಗೆ ಸೂಪರ್‌-10 ಪೂರೈಸಿದ ಪ್ರದೀಪ್‌, ಡೆಲ್ಲಿ 2 ಬಾರಿ ಆಲೌಟ್‌ ಆಗಲೂ ಕಾರಣರಾದರು. ಮೊದಲಾರ್ಧದಲ್ಲೇ ದೊಡ್ಡ ಮುನ್ನಡೆ ಪಡೆದ ಡೆಲ್ಲಿ, ದ್ವಿತೀಯಾರ್ಧದಲ್ಲಿ ತನ್ನ ಆಟಕ್ಕೆ ಮತ್ತಷ್ಟುವೇಗ ತುಂಬಿ ಗೆಲುವು ಸಾಧಿಸಿತು. ಡೆಲ್ಲಿಯ ‘ನವೀನ್‌ ಎಕ್ಸ್‌ಪ್ರೆಸ್‌’ ಖ್ಯಾತಿಯ ನವೀನ್‌ ಕುಮಾರ್‌ ಕೇವಲ 8 ರನ್‌ ಅಂಕ ಗಳಿಸಿದರು. ಬುಧವಾರದ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ಹಾಗೂ ತಮಿಳ್‌ ತಲೈವಾಸ್‌ 33-33 ಅಂಕಗಳಲ್ಲಿ ಟೈಗೆ ತೃಪ್ತಿಪಟ್ಟವು.

ಪುಣೆ ಚರಣ ಅಂತ್ಯ: ಬುಧವಾರ ಪುಣೆ ಚರಣ ಮುಕ್ತಾಯಗೊಂಡಿತು. ಶುಕ್ರವಾರದಿಂದ ಹೈದರಾಬಾದ್‌ ಚರಣ ಆರಂಭಗೊಳ್ಳಲಿದೆ.

ಐಟಿಟಿಎಫ್‌ ಅಥ್ಲೀಟ್ಸ್‌ ಸಂಸ್ಥೆಗೆ ಶರತ್‌ ಆಯ್ಕೆ

ನವದೆಹಲಿ: ಅಂತಾರಾಷ್ಟ್ರೀಯ ಟೇಬಲ್‌ ಟೆನಿಸ್‌ ಫೆಡರೇಷನ್‌(ಐಟಿಟಿಎಫ್‌)ನ ಅಥ್ಲೀಟ್‌ಗಳ ಸಮಿತಿಗೆ ಅಚಂತಾ ಶರತ್‌ ಕಮಲ್‌ ಆಯ್ಕೆಯಾಗಿದ್ದಾರೆ. ಈ ಸಮಿತಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಅಥ್ಲೀಟ್‌ಗಳ ಕ್ಷೇಮಾಭಿವೃದ್ಧಿ, ಕ್ರೀಡೆ ಹಾಗೂ ಕ್ರೀಡೆಯೇತರ ವೃತ್ತಿಬದುಕಿಗೆ ನೆರವು ನೀಡುವಿಕೆ ಸೇರಿ ಇತ್ಯಾದಿ ಕಾರ್ಯಗಳಲ್ಲಿ ಸಮಿತಿಯು ತೊಡಗಿಸಿಕೊಳ್ಳಲಿದೆ. 2022ರಿಂದ 2026ರ ವರೆಗೂ ಶರತ್‌ ಈ ಸಮತಿಯಲ್ಲಿ ಕಾರ‍್ಯನಿರ್ವಹಿಸಲಿದ್ದಾರೆ.

ಕನ್ನಡತಿ, ತಾರಾ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್‌ಗೆ ಒಲಿದ ಗೌರವ ಡಾಕ್ಟರೇಟ್

ವಿಶ್ವಕಪ್‌: ಬೆಲ್ಜಿಯಂ ತಂಡಕ್ಕೆ ಭಾರತೀಯ ಫಿಟ್ನೆಸ್‌ ಕೋಚ್‌!

ನವದೆಹಲಿ: ಫಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಆಡಲಿರುವ ವಿಶ್ವ ನಂ.2 ಬೆಲ್ಜಿಯಂ ತಂಡದ ಫಿಟ್ನೆಸ್‌ ಕೋಚ್‌ ಆಗಿ ಭಾರತದ ವಿನಯ್‌ ಮೆನನ್‌ ಕಾರ‍್ಯನಿರ್ವಹಿಸಲಿದ್ದಾರೆ. ಕೇರಳದ ಎರ್ನಾಕುಲಂ ಮೂಲದವರಾದ ವಿನಯ್‌, ಪುಣೆಯಲ್ಲಿ ಯೋಗಾ ತರಬೇತುದಾರರಾಗಿದ್ದರು. ಬಳಿಕ ದುಬೈಗೆ ಸ್ಥಳಾಂತರಗೊಂಡು ಫೈವ್‌ ಸ್ಟಾರ್‌ ರೆಸಾರ್ಟ್‌ವೊಂದರಲ್ಲಿ ಕೆಲಸ ಮಾಡಿದ್ದರು. ಆ ನಂತರ ಇಂಗ್ಲೆಂಡನ ಚೆಲ್ಸಿ ಫುಟ್ಬಾಲ್‌ ಕ್ಲಬ್‌ಗೆ ಸೇರ್ಪಡೆಗೊಂಡು ಹಲವು ವರ್ಷಗಳ ಕಾಲ ಕಾರ‍್ಯನಿರ್ವಹಿಸಿದ್ದರು. 48 ವರ್ಷದ ವಿನಯ್‌ ಬೆಲ್ಜಿಯಂ ತಂಡಕ್ಕೆ ಯೋಗಾ ಸೇರಿದಂತೆ ಹಲವು ಫಿಟ್ನೆಸ್‌ ತರಬೇತಿಗಳನ್ನು ನೀಡುತ್ತಿದ್ದಾರೆ.

Latest Videos
Follow Us:
Download App:
  • android
  • ios