ಪ್ರೊ ಕಬಡ್ಡಿಯಲ್ಲೂ ಬರಲಿದೆ ಟೈ ಬ್ರೇಕರ್..! ಹೇಗಿರಲಿದೆ ಟೈ ಬ್ರೇಕರ್?

ಕ್ರಿಕೆಟ್‌ನಲ್ಲಿ ಪಂದ್ಯ ಟೈ ಆದಾಗ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಿಸಲಾಗುತ್ತದೆ. ಫುಟ್ಬಾಲ್, ಹಾಕಿಯಲ್ಲಿ ಪೆನಾಲ್ಟಿ ಶೂಟೌಟ್ ಇದೆ. ಅದೇ ರೀತಿ ಪ್ರೊ ಕಬಡ್ಡಿಯಲ್ಲಿ ಪಂದ್ಯ ಟೈ ಆದರೆ, ಗೆಲುವು-ಸೋಲು ನಿರ್ಧರಿಸಲು ಟೈ ಬ್ರೇಕರ್‌ನ ಮೊರೆ ಹೋಗುವ ದಿನಗಳು ದೂರವಿಲ್ಲ.

Pro Kabaddi League likely to have Tie Braker Rules very soon kvn

- ಸ್ಪಂದನ್ ಕಣಿಯಾರ್, ಕನ್ನಡಪ್ರಭ

ಬೆಂಗಳೂರು(ಡಿ.25): ಅಪ್ಪಟ ಭಾರತೀಯ ಕ್ರೀಡೆ ಕಬಡ್ಡಿಯನ್ನು ಪ್ರೇಕ್ಷಕ ಸ್ನೇಹಿಯಾಗಿಸಿದ ಹಿರಿಮೆ ಪ್ರೊ ಕಬಡ್ಡಿ ಲೀಗ್‌ಗೆ ಸಲ್ಲುತ್ತದೆ. ಪ್ರತಿ ರೈಡ್‌ಗೆ 30 ಸೆಕೆಂಡ್ ಕಾಲ ಮಿತಿ, ಸೂಪರ್ ರೈಡ್, ಸೂಪರ್ ಟ್ಯಾಕಲ್ ಹೀಗೆ ಹಲವು ಹೊಸತನಗಳನ್ನು ಕಬಡ್ಡಿಗೆ ಪರಿಚಯಿಸಿದ ಪ್ರೊ ಕಬಡ್ಡಿಯಲ್ಲಿ ಟೈ ಬ್ರೇಕರ್ ನಿಯಮವನ್ನೂ ತರಲು ಆಯೋಜಕರು ನಿರ್ಧರಿಸಿದ್ದಾರೆ.

ಕ್ರಿಕೆಟ್‌ನಲ್ಲಿ ಪಂದ್ಯ ಟೈ ಆದಾಗ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಿಸಲಾಗುತ್ತದೆ. ಫುಟ್ಬಾಲ್, ಹಾಕಿಯಲ್ಲಿ ಪೆನಾಲ್ಟಿ ಶೂಟೌಟ್ ಇದೆ. ಅದೇ ರೀತಿ ಪ್ರೊ ಕಬಡ್ಡಿಯಲ್ಲಿ ಪಂದ್ಯ ಟೈ ಆದರೆ, ಗೆಲುವು-ಸೋಲು ನಿರ್ಧರಿಸಲು ಟೈ ಬ್ರೇಕರ್‌ನ ಮೊರೆ ಹೋಗುವ ದಿನಗಳು ದೂರವಿಲ್ಲ. 10ನೇ ಆವೃತ್ತಿ ಆರಂಭಕ್ಕೂ ಮುನ್ನ ಟೈ ಬ್ರೇಕರ್ ಅಳವಡಿಕೆಗೆ ಬೇಕಿರುವ ರೂಪುರೇಶೆ ಸಿದ್ಧಪಡಿಸುವ ಕೆಲಸ ಆಯೋಜಕರು ಮಾಡಿದ್ದರು. ಕೆಲ ಅಭ್ಯಾಸ ಪಂದ್ಯಗಳಲ್ಲಿ ನಿಯಮದ ಪ್ರಯೋಗವೂ ನಡೆದಿತ್ತು ಎನ್ನುವ ಮಾಹಿತಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ. ಆದರೆ ಪ್ರಸಾರಕರು ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ನಿಯಮ ಜಾರಿ ಮುಂದೂಡಲಾಯಿತು. 2024ರಲ್ಲಿ ಅಭಿಮಾನಿಗಳು ಟೈ ಬ್ರೇಕರ್ ನಿಯಮವನ್ನು ನೋಡಬಹುದು ಎಂದು ಲೀಗ್‌ನ ಆಯುಕ್ತ ಅನುಪಮ್ ಗೋಸ್ವಾಮಿ ತಿಳಿಸಿದ್ದಾರೆ.

ಚಿನ್ನದ ಫೋನ್​ ಕಳಕೊಂಡ ಊರ್ವಶಿಗೆ ವಜ್ರದ ಫೋನ್​ ಕೊಡಿಸೋ ಆಫರ್​ಗಳ ಸುರಿಮಳೆ! ನಟಿ ಹೇಳಿದ್ದೇನು ಕೇಳಿ...

ಟೈ ಬ್ರೇಕರ್‌ ಅಳವಡಿಕೆ ಏಕೆ?

ಒಂದು ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ 130ಕ್ಕೂ ಹೆಚ್ಚಿನ ಪಂದ್ಯಗಳು ನಡೆಯಲಿವೆ. ಈ ಹಿಂದಿನ 4-5 ಆವೃತ್ತಿಗಳನ್ನು ಗಮನಿಸಿದಾಗ ಪ್ರತಿ ಆವೃತ್ತಿಯಲ್ಲೂ ಏನಿಲ್ಲವೆಂದರೂ ಸರಾಸರಿ 8-10 ಪಂದ್ಯಗಳು ಟೈ ಆಗಿವೆ. ಪಂದ್ಯ ಟೈ ಆದಾಗ ಉಭಯ ತಂಡಕ್ಕೂ ತಲಾ 3 ಅಂಕ ಹಂಚಲಾಗುತ್ತದೆ. ಟೈನಿಂದಾಗಿ ಕೆಲ ತಂಡಗಳು ಪ್ಲೇ-ಆಫ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿದ್ದವು. ಅಂಕಪಟ್ಟಿಯಲ್ಲಿ ಕೆಲ ತಂಡಗಳಿಗೆ ಅರ್ಹ ಸ್ಥಾನ ಸಿಕ್ಕಿರಲಿಲ್ಲ. ಹೀಗಾಗಿ ಟೈ ಬ್ರೇಕರ್‌ಗೆ ತಂಡಗಳಿಂದಲೂ ಬೇಡಿಕೆ ಇತ್ತು

ಹೇಗಿರಲಿದೆ ಟೈ ಬ್ರೇಕರ್?

ಟೈ ಬ್ರೇಕರ್‌ನಲ್ಲಿ ಎರಡೂ ತಂಡಗಳಿಗೂ ತಲಾ 5 ರೈಡ್ ಗಳು ಸಿಗಲಿವೆ. ಬೋನಸ್ ಲೈನ್ ಬದಲು ಬಾಕ್ ಲೈನ್ ಅನ್ನೇ ಬೋನಸ್ ಲೈನ್ ಆಗಿ ಪರಿಗಣಿಸುವ ಸಾಧ್ಯತೆ ಇದೆ. 5 ರೈಡ್ ಮುಕ್ತಾಯಕ್ಕೆ ಹೆಚ್ಚು ಅಂಕ ಪಡೆಯುವ ತಂಡ ಗೆಲ್ಲಲಿದೆ. 5 ರೈಡ್ ಬಳಿಕವೂ ಯಾವ ತಂಡವೂ ಮುನ್ನಡೆ ಪಡೆಯದಿದ್ದರೆ, ಮುನ್ನಡೆ ಸಿಗುವ ವರೆಗೂ ಟೈ ಬ್ರೇಕರ್ ಮುಂದುವರಿಯಲಿದೆ. ಪಂದ್ಯ ಗೆಲ್ಲುವ ತಂಡಕ್ಕೆ 5 ಅಂಕ, ಮತ್ತೊಂದು ತಂಡಕ್ಕೆ 3 ಅಂಕ ಸಿಗಲಿದೆ. ಟೈ ಬ್ರೇಕರ್‌ನ ಅಂಕ ಒಟ್ಟಾರೆ ಅಂಕ ವ್ಯತ್ಯಾಸಕ್ಕೆ ಹಾಗೂ ಆಟಗಾರ ವೈಯಕ್ತಿಕವಾಗಿ ಗಳಿಸಿದ ಅಂಕ ಅವರ ಖಾತೆಗೆ ಸೇರ್ಪಡೆಗೊಳ್ಳುವುದಿಲ್ಲ.

ಚಿನ್ನದ ಫೋನ್​ ಕಳಕೊಂಡ ಊರ್ವಶಿಗೆ ವಜ್ರದ ಫೋನ್​ ಕೊಡಿಸೋ ಆಫರ್​ಗಳ ಸುರಿಮಳೆ! ನಟಿ ಹೇಳಿದ್ದೇನು ಕೇಳಿ...

ಪ್ರೊ ಕಬಡ್ಡಿ ಲೀಗ್‌ನಲ್ಲಿ ಹಲವು ಹೊಸ ನಿಯಮಗಳನ್ನು ಪರಿಚಯಿಸಿ ಕ್ರೀಡೆಯು ನಿರಂತರವಾಗಿ ಹೊಸ ಪ್ರೇಕ್ಷಕರನ್ನು ಪಡೆಯುವಂತೆ ಮಾಡಿದ್ದೇವೆ. ಟೈ ಬ್ರೇಕರ್ ನಿಯಮ ಸಹ ಆಟದ ರೋಚಕತೆಯನ್ನು ಹೆಚ್ಚಿಸಲಿದೆ ಎನ್ನುವ ಭರವಸೆ ಇದೆ -  ಅನುಪಮ್ ಗೋಸ್ವಾಮಿ, ಪ್ರೊ ಕಬಡ್ಡಿ ಆಯುಕ್ತ

ಗೆಲ್ಲಬಹುದಾದ ಪಂದ್ಯ ಟೈ ಆದಾಗ ಸಹಜವಾಗಿಯೇ ತಂಡಗಳಿಗೆ ಬೇಸರವಾಗಲಿದೆ. ತಂಡ ಮುಂದಿನ ಹಂತಕ್ಕೆ ಪ್ರವೇಶಿಸುವುದಕ್ಕೂ ಅಡ್ಡಿಯಾಗುವುದನ್ನು ನೋಡಿದ್ದೇವೆ. ಈ ನಿಟ್ಟಿನಲ್ಲಿ ಟೈ ಬ್ರೇಕರ್ ಜಾರಿಯಾಗುವುದು ಉತ್ತಮ - ಬಿ.ಸಿ.ರಮೇಶ್ ಪುಣೇರಿ ಪಲ್ಟನ್‌ ಕೋಚ್
 

Latest Videos
Follow Us:
Download App:
  • android
  • ios