ಬುಧವಾರ ಪ್ಯಾಂಥರ್ಸ್‌ನಿಂದ ಬುಲ್ಸ್‌ಗೆ ಕಠಿಣ ಸವಾಲು ಎದುರಾಯಿತು. ಪಂದ್ಯದ ಆರಂಭದಲ್ಲೇ ಮೇಲುಗೈ ಸಾಧಿಸಿದ ಜೈಪುರ 10ನೇ ನಿಮಿಷದಲ್ಲಿ ಬೆಂಗಳೂರನ್ನು ಆಲೌಟ್ ಮಾಡಿ 10-6ರ ಮುನ್ನಡೆ ಪಡೆಯಿತು. ಮೊದಲಾರ್ಧದ ಕೊನೆಯಲ್ಲಿ ವಿಕಾಸ್ ಖಂಡೋಲಾ ಅವರ ಆಕರ್ಷಕ ರೈಡ್ ಅಂಕವಾಗಿ ಪರಿವರ್ತನೆಗೊಳ್ಳಲಿಲ್ಲ. 20 ನಿಮಿಷಗಳ ಅಂತ್ಯಕ್ಕೆ ಬುಲ್ಸ್‌ 14-17ರ ಹಿನ್ನಡೆ ಅನುಭವಿಸಿತು.

ಬೆಂಗಳೂರು(ಡಿ.14): ಬೆಂಗಳೂರು ಬುಲ್ಸ್‌ ಸತತ 2 ಗೆಲುವುಗಳೊಂದಿಗೆ ತವರಿನ ಚರಣವನ್ನು ಮುಕ್ತಾಯಗೊಳಿಸಿದೆ. ಬುಧವಾರ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 32-30 ಅಂಕಗಳ ರೋಚಕ ಗೆಲುವು ಸಂಪಾದಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. ಮೊದಲ ಚರಣದಲ್ಲಿ 2 ಸೋಲು ಅನುಭವಿಸಿದ್ದ ಬುಲ್ಸ್‌, ತವರಿನ ಚರಣದ ಮೊದಲೆರಡು ಪಂದ್ಯಗಳಲ್ಲೂ ಸೋಲುಂಡಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬುಧವಾರ ಪ್ಯಾಂಥರ್ಸ್‌ನಿಂದ ಬುಲ್ಸ್‌ಗೆ ಕಠಿಣ ಸವಾಲು ಎದುರಾಯಿತು. ಪಂದ್ಯದ ಆರಂಭದಲ್ಲೇ ಮೇಲುಗೈ ಸಾಧಿಸಿದ ಜೈಪುರ 10ನೇ ನಿಮಿಷದಲ್ಲಿ ಬೆಂಗಳೂರನ್ನು ಆಲೌಟ್ ಮಾಡಿ 10-6ರ ಮುನ್ನಡೆ ಪಡೆಯಿತು. ಮೊದಲಾರ್ಧದ ಕೊನೆಯಲ್ಲಿ ವಿಕಾಸ್ ಖಂಡೋಲಾ ಅವರ ಆಕರ್ಷಕ ರೈಡ್ ಅಂಕವಾಗಿ ಪರಿವರ್ತನೆಗೊಳ್ಳಲಿಲ್ಲ. 20 ನಿಮಿಷಗಳ ಅಂತ್ಯಕ್ಕೆ ಬುಲ್ಸ್‌ 14-17ರ ಹಿನ್ನಡೆ ಅನುಭವಿಸಿತು.

Scroll to load tweet…

KCC ಕ್ರಿಕೆಟ್ ಟೂರ್ನಿಗೂ ಮುನ್ನ ಕಿಚ್ಚ ಸುದೀಪ್‌ಗೆ ಖಡಕ್ ವಾರ್ನಿಂಗ್ ಕೊಟ್ಟ ರಾಬಿನ್ ಉತ್ತಪ್ಪ..!

ದ್ವಿತೀಯಾರ್ಧವನ್ನು ಸಕಾರಾತ್ಮಕವಾಗಿ ಆರಂಭಿಸಿದ ಬುಲ್ಸ್‌, 27ನೇ ನಿಮಿಷದಲ್ಲಿ ಜೈಪುರವನ್ನು ಆಲೌಟ್ ಮಾಡಿ ಅಂತರವನ್ನು 20-21ಕ್ಕೆ ಇಳಿಸಿಕೊಂಡಿತು. ಬಳಿಕ 28ನೇ ನಿಮಿಷದಲ್ಲಿ ಮೊದಲ ಬಾರಿಗೆ ಬುಲ್ಸ್‌ ಮುನ್ನಡೆ ಕಂಡಿತು. ಅಲ್ಲಿಂದಾಚೆಗೆ ಅಂಕಗಳಿಕೆಯಲ್ಲಿ ಬೆಂಗಳೂರು ಹಿಂದೆ ಬೀಳಲಿಲ್ಲ. ಪಂದ್ಯದ ಕೊನೆಯ ರೈಡ್‌ನಲ್ಲಿ ಜೈಪುರಕ್ಕೆ ಅಂಕ ಪಡೆಯಲು ಬಿಡದ ಬುಲ್ಸ್‌ 2 ಅಂಕಗಳ ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡುಸಂಭ್ರಮಿಸಿತು.

ಟೈಟಾನ್ಸ್‌ಗೆ 4ನೇ ಸೋಲು:

ಬುಧವಾರ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ 36-38ರಲ್ಲಿ ತಮಿಳ್ ತಲೈವಾಸ್ ವಿರುದ್ಧ ಸೋಲುಂಡಿತು. ಟೈಟಾನ್ಸ್‌ಗೆ ಇದು ಸತತ 4ನೇ ಸೋಲು. ತಂಡ ಇನ್ನಷ್ಟೇ ಜಯದ ಖಾತೆತೆರೆಯಬೇಕಿದೆ.

Scroll to load tweet…

ಬಿಎಫ್‌ಸಿಗೆ ಮತ್ತೆ ಸೋಲು

ಚೆನ್ನೈ: 10ನೇ ಆವೃತ್ತಿಯ ಐಎಸ್‌ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) 5ನೇ ಸೋಲು ಕಂಡಿದೆ. ಬುಧವಾರ ಚೆನ್ನೈಯಿನ್ ಎಫ್‌ಸಿ ವಿರುದ್ಧ 0-2 ಗೋಲುಗಳಿಂದ ಪರಾಭವಗೊಂಡಿತು. ತಂಡ 10 ಪಂದ್ಯ ಗಳಲ್ಲಿ ಕೇವಲ 1 ಜಯದೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲೇಉಳಿದಿದೆ.