ಜೈಪುರ ತಂಡವೊಂದನ್ನು ಹೊರತುಪಡಿಸಿ ಎಲ್ಲಾ ಏಳು ತಂಡಗಳು ತಲಾ ಒಬ್ಬ ಆಟಗಾರನನ್ನು ಈ ಆವೃತ್ತಿಗೆ ಉಳಿಸಿಕೊಂಡಿವೆ. ಇಂದು ಹಾಗೂ ನಾಳೆ ನಡೆಯುವ ಹರಾಜನಲ್ಲಿ ಆಟಗಾರರನ್ನು 3 ವಿವಿಧ ಗುಂಪುಗಳಾಗಿ ವಿಗಂಡಿಸಲಾಗಿದೆ.

ನವದೆಹಲಿ(ಮೇ.22): 5ನೇ ಆವೃತ್ತಿಯ ಪ್ರೊ-ಕಬಡ್ಡಿಗೆ ಇಂದು ಆಟಗಾರರ ಹರಾಜು ನಡೆಯಲಿದ್ದು, ನಾಲ್ಕು ಹೊಸ ತಂಡಗಳು ಸೇರಿ ಒಟ್ಟು 12 ತಂಡಗಳು ಆಟಗಾರರನ್ನು ಖರೀದಿಸಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಮಾರು 350ಕ್ಕೂ ಹೆಚ್ಚು ದೇಶಿ ಹಾಗೂ ವಿದೇಶಿ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳುತ್ತಿ​ದ್ದಾರೆ. ಜೈಪುರ ತಂಡವೊಂದನ್ನು ಹೊರತುಪಡಿಸಿ ಎಲ್ಲಾ ಏಳು ತಂಡಗಳು ತಲಾ ಒಬ್ಬ ಆಟಗಾರನನ್ನು ಈ ಆವೃತ್ತಿಗೆ ಉಳಿಸಿಕೊಂಡಿವೆ. ಇಂದು ಹಾಗೂ ನಾಳೆ ನಡೆಯುವ ಹರಾಜನಲ್ಲಿ ಆಟಗಾರರನ್ನು 3 ವಿವಿಧ ಗುಂಪುಗಳಾಗಿ ವಿಗಂಡಿಸಲಾಗಿದೆ.

‘ಎ' ಗುಂಪಿನಲ್ಲಿ ಈ ಮೊದಲಿನ ಆವೃತ್ತಿಗಳಲ್ಲಿ ಆಡಿದ್ದ ಪ್ರತಿಷ್ಠಿತ ಆಟಗಾರರಿದ್ದರೆ, ‘ಬಿ' ಗುಂಪಿನಲ್ಲಿ ಉಳಿದ ಭಾರತೀಯ ಹಾಗೂ ವಿದೇಶಿ ಆಟಗಾರರಿದ್ದಾರೆ. ‘ಸಿ' ಗುಂಪಿನಲ್ಲಿ ನೂತನ ಯುವ ಆಟಗಾರರಿದ್ದಾರೆ. ಪ್ರತಿ ತಂಡ 18-25 ಆಟಗಾರರನ್ನು ಖರೀದಿಸಬಹು​ದಾಗಿದೆ. ಇದರಲ್ಲಿ ಒಬ್ಬ ಪ್ರತಿಷ್ಠಿತ ಆಟಗಾರನನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಜತೆಗೆ ಮೂವರು ನೂತನ ಯುವ ಆಟಗಾರರು ಹಾಗೂ ಕನಿಷ್ಠ 2, ಗರಿಷ್ಠ 4 ವಿದೇಶಿ ಆಟಗಾರರನ್ನು ಖರೀದಿ​ಸಬಹುದಾಗಿದೆ. 

‘ಎ' ಗುಂಪಿನಲ್ಲಿರುವ ಆಟಗಾರರ ಮೂಲಬೆಲೆ ರೂ.35 ಲಕ್ಷಗಳಾದರೆ, ‘ಬಿ' ಗುಂಪಿನಲ್ಲಿರುವವರಿಗೆ ರೂ.20 ಲಕ್ಷ ಹಾಗೂ ‘ಸಿ' ಗುಂಪಿನಲ್ಲಿರುವ ಆಟಗಾರರಿಗೆ ರೂ.12 ಲಕ್ಷವಾಗಿದೆ. ಇನ್ನು ಯುವ ಆಟಗಾ​ರರಿಗೆ ರೂ.6 ಲಕ್ಷ ಸಂಭಾವನೆ ನಿಗದಿ ಪಡಿಸಲಾಗಿದೆ. ಪ್ರತಿ ತಂಡ ಗರಿಷ್ಠ ರೂ.4 ಕೋಟಿ ಖರ್ಚು ಮಾಡಬಹುದಾಗಿದೆ.