ಪ್ರೊ ಕಬಡ್ಡಿ ಲೀಗ್ ಹರಾಜಿನ ವೇಳಾಪಟ್ಟಿ ಪ್ರಕಟ; ಫ್ರಾಂಚೈಸಿಯ ಒಟ್ಟು ಮೊತ್ತ ಹೆಚ್ಚಳ..!
2023 ರ ಸೆಪ್ಟೆಂಬರ್ 8-9ರಂದು 10ನೇ ಆವೃತ್ತಿಯ ಆಟಗಾರರ ಹರಾಜು ದಿನಾಂಕಗಳು
500+ ಆಟಗಾರರು ಈ ವರ್ಷ ಹರಾಜು ಗುಂಪಿಗೆ ಪ್ರವೇಶ
ಆಟಗಾರರ ಪರ್ಸ್ (ಫ್ರಾಂಚೈಸಿಯ ಒಟ್ಟು ಮೊತ್ತ) 4.4 ಕೋಟಿ ರೂ.ಗಳಿಂದ 5 ಕೋಟಿ ರೂ.ಗೆ ಏರಿದೆ.
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್, 2023 ರ ಎರಡು ಫೈನಲಿಸ್ಟ್ ತಂಡಗಳ 24 ಆಟಗಾರರನ್ನು ಹರಾಜು ಗುಂಪಿನಲ್ಲಿ ಸೇರ್ಪಡೆ
ಮುಂಬೈ(ಜು.03): ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ನ ಹೆಜ್ಜೆ ಗುರುತಾದ 10ನೇ ಆವೃತ್ತಿ ಆಟಗಾರರ ಹರಾಜು ಪ್ರಕ್ರಿಯೆ 2023 ರ ಸೆಪ್ಟೆಂಬರ್ 8 ರಿಂದ 9 ರವರೆಗೆ ಮುಂಬೈನಲ್ಲಿ ನಡೆಯಲಿದೆ ಎಂದು ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ನ ಸಂಘಟಕರಾದ ಮಶಾಲ್ ಸ್ಪೋರ್ಟ್ಸ್ ಘೋಷಿಸಿದೆ. ಮೂರು ಆವೃತ್ತಿಗಳ ನಂತರ ಪ್ರತಿ ಫ್ರಾಂಚೈಸಿಗೆ ಲಭ್ಯವಿರುವ ಒಟ್ಟು ವೇತನ 4.4 ಕೋಟಿ ರೂಪಾಯಿಗಳನ್ನು 5 ಕೋಟಿ ರೂಪಾಯಿಗೆ ಏರಿಸಲಾಗಿದೆ.
ದೇಶೀಯ ಮತ್ತು ವಿದೇಶಿ ಆಟಗಾರರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ: ವರ್ಗ ಎ, ಬಿ, ಸಿ ಮತ್ತು ಡಿ. ಪ್ರತಿ ವಿಭಾಗದಲ್ಲಿ ಆಟಗಾರರನ್ನು 'ಆಲ್ ರೌಂಡರ್ಸ್', 'ಡಿಫೆಂಡರ್ಸ್' ಮತ್ತು 'ರೈಡರ್ಸ್' ಎಂದು ವಿಂಗಡಿಸಲಾಗುವುದು. ಪ್ರವರ್ಗ ಎ- 30 ಲಕ್ಷ ರೂ., ಬಿ ವರ್ಗಕ್ಕೆ 20 ಲಕ್ಷ ರೂ., ವರ್ಗ ಸಿಗೆ 13 ಲಕ್ಷ ರೂ., ಡಿ ವರ್ಗಕ್ಕೆ 9 ಲಕ್ಷ ರೂ. ಹೊಂದಿರುತ್ತಾರೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2023 ರ ಎರಡು ಫೈನಲಿಸ್ಟ್ ತಂಡಗಳ 24 ಆಟಗಾರರು ಸೇರಿದಂತೆ 10ನೇ ಆವೃತ್ತಿಯಲ್ಲಿ ಪ್ಲೇಯರ್ ಗುಂಪಿನ 500ಕ್ಕೂ ಹೆಚ್ಚು ಆಟಗಾರರನ್ನು ಒಳಗೊಂಡಿರುತ್ತದೆ.
ಈಜು: ರಾಜ್ಯದ ಲಿನೈಶಾ, ನೀನಾ ರಾಷ್ಟ್ರೀಯ ದಾಖಲೆ..!
ಪ್ರೊ ಕಬಡ್ಡಿ ಲೀಗ್‌ನ ಮಶಾಲ್ ಸ್ಪೋರ್ಟ್ಸ್ ಮತ್ತು ಲೀಗ್ ಕಮಿಷನರ್ ಅನುಪಮ್ ಗೋಸ್ವಾಮಿ ಮಾತನಾಡಿ, "ಹತ್ತನೇ ಆವೃತ್ತಿಯು ಭಾರತದ ಯಾವುದೇ ಸಮಕಾಲೀನ ಕ್ರೀಡಾ ಲೀಗ್ ಗಳಲ್ಲಿಯೇ ಪ್ರಮುಖ ಮೈಲುಗಲ್ಲಾಗಿದೆ. ಪಿಕೆಎಲ್ 10ನೇ ಆವೃತ್ತಿಯ ಆಟಗಾರರ ಹರಾಜು ಕೂಡ ಪಿಕೆಎಲ್ ಇತಿಹಾಸದಲ್ಲಿ ಒಂದು ಹೆಗ್ಗುರುತಾಗಲಿದೆ. ಸೀಸನ್ 10ರ ಆಟಗಾರರ ಪಾಲಿಸಿ ಅಡಿಯಲ್ಲಿ ಉಳಿಸಿಕೊಳ್ಳುವಿಕೆ ಮತ್ತು ನಾಮನಿರ್ದೇಶನಗಳ ಜೊತೆಗೆ, ನಮ್ಮ 12 ಫ್ರಾಂಚೈಸಿಗಳು ತಮ್ಮ ತಂಡಗಳಿಗೆ ವಿಶ್ವದ ಅತ್ಯುತ್ತಮ ಕಬಡ್ಡಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ಆಟಗಾರರ ಹರಾಜನ್ನು ಬಳಸಿಕೊಳ್ಳಲಿವೆ, " ಎಂದರು.
ಲೀಗ್ ನಿಯಮಗಳ ಪ್ರಕಾರ ಪಿಕೆಎಲ್ ತಂಡಗಳು 9ನೇ ಆವೃತ್ತಿಯ ತಂಡಗಳಿಂದ ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ಹೊಂದಿವೆ. ಫ್ರಾಂಚೈಸಿಗಳಿಗೆ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ಫ್ರಾಂಚೈಸಿಗಳಿಂದ ಉಳಿಸಿಕೊಳ್ಳದ ಆಟಗಾರರು ಮತ್ತು 500ಕ್ಕೂ ಹೆಚ್ಚು ಆಟಗಾರರ ಗುಂಪಿನ ಸದಸ್ಯರು ಮುಂಬೈನಲ್ಲಿ ಎರಡು ದಿನಗಳ ಹರಾಜು ಪ್ರಕ್ರಿಯೆಯಲ್ಲಿ ಹರಾಜಿಗೆ ಒಳಗಾಗಲಿದ್ದಾರೆ.
Wimbledon: 24ನೇ ಗ್ರ್ಯಾನ್‌ಸ್ಲಾಂ ಮೇಲೆ ಜೋಕೋವಿಚ್ ಕಣ್ಣು!
ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ (ಎಕೆಎಫ್ಐ) ಆಶ್ರಯದಲ್ಲಿ ಮಶಾಲ್ ಸ್ಪೋರ್ಟ್ಸ್ ಮತ್ತು ಡಿಸ್ನಿ ಸ್ಟಾರ್ ಪಿಕೆಎಲ್ ಅನ್ನು ಭಾರತದ ಅತ್ಯಂತ ಯಶಸ್ವಿ ಕ್ರೀಡಾ ಲೀಗ್ ಗಳಲ್ಲಿ ಒಂದನ್ನಾಗಿ ನಿರ್ಮಿಸಿವೆ. ಈ ಸ್ಪರ್ಧೆಯು ಭಾರತದ ಎಲ್ಲಾ ಕ್ರೀಡಾ ಲೀಗ್ ಗಳಲ್ಲಿ ಹೆಚ್ಚಿನ ಸಂಖ್ಯೆಯ ಪಂದ್ಯಗಳನ್ನು ಒಳಗೊಂಡಿದೆ. ಪ್ರೊ ಕಬಡ್ಡಿ ಲೀಗ್ ಭಾರತದ ಸ್ಥಳೀಯ ಕ್ರೀಡೆಯಾದ ಕಬಡ್ಡಿ ಮತ್ತು ಅದರ ಕ್ರೀಡಾಪಟುಗಳ ಚಿತ್ರಣವನ್ನು ರಾಷ್ಟ್ರೀಯವಾಗಿ ಮತ್ತು ವಿಶ್ವದಾದ್ಯಂತ ಪರಿವರ್ತಿಸಿದೆ.