Pro Kabaddi League ಪಾಟ್ನಾ ಪೈರೇಟ್ಸ್ ಮಣಿಸಿದ ಜೈಪುರ್, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ
ಪ್ರೊ ಕಬಡ್ಡೀ ಲೀಗ್ ಟೂರ್ನಿಯಲ್ಲಿ ಪ್ರತಿ ಪಂದ್ಯ ರೋಚಕತೆ ಹೆಚ್ಚಿಸುತ್ತಿದೆ. ಇಂದಿನ ಪಾಟ್ನಾ ಪೈರೇಟ್ಸ್ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ಪಂದ್ಯ ಜಿದ್ದಾ ಜಿದ್ದಿನಿಂದ ಕೂಡಿತ್ತು. ಈ ಹೋರಾಟದಲ್ಲಿ ಪಿಂಕ್ ಪ್ಯಾಂಥರ್ಸ್ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.
ಬೆಂಗಳೂರು(ಅ.09): ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಸೂಪರ್ ಸಂಡೆ ಅಷ್ಟೇ ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಪಾಟ್ನಾ ಪೈರೇಟ್ಸ್ ವಿರುದ್ಧ ಲೀಗ್ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ 35- 30 ಅಂಕಗಳ ಅಂತರದಲ್ಲಿ ಗೆಲುವು ದಾಖಲಿಸಿದೆ. ಅಂತಿಮ ಹಂತದಲ್ಲಿ ರೋಚಕ ಹೋರಾಟ ಎರ್ಪಟ್ಟಿತು. ಆದರೆ ಜೈಪುರ್ ಪಿಂಕ್ ಪ್ಯಾಂಥರ್ಸ್ ಮುನ್ನಡೆ ಕಾಯ್ದುಕೊಂಡು ಗೆಲುವು ಸಾಧಿಸಿತು. ಇದರೊಂದಿಗೆ ಜೈಪುರ್ ಪಿಂಕ್ ಪ್ಯಾಂಥರ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಜೈಪುರ್ ಪಿಂಕ್ ಪ್ಯಾಂಥರ್ಸ್ ರೈಡರ್ ಅರ್ಜನ್ ದೇಶ್ವಾಲ್ ಆಟಕ್ಕೆ ಪಾಟ್ನಾ ಬಳಿ ಉತ್ತರವೇ ಇರಲಿಲ್ಲ. ಕಾರಣ ಅದ್ಭುತ ರೈಡ್ ಮೂಲಕ ಅರ್ಜುನ್ 17 ಅಂಕ ಸಂಪಾದಿಸಿದ್ದಾರೆ. ಪಾಟ್ನಾ ಪರ ಸಚಿನ್ ರೈಡಿಂಗ್ ಮೂಲಕ 13 ಅಂಕ ಸಂಪಾದಿಸಿದರು. ಆದರೆ ಇತರ ರೈಡರ್‌ಗಳಿಂದ ಪಾಟ್ನಾಗೆ ನಿರೀಕ್ಷಿತ ಅಂಕ ಹರಿದು ಬರಲಿಲ್ಲ. ಜೈಪುರ್ ಪಿಂಕ್ ಪ್ಯಾಂಥರ್ಸ್ ಕ್ಯಾಪ್ಟನ್ ಸುನಿಲ್ ಕುಮಾರ್ 3, ರೈಡರ್ ವಿ ಅಜಿತ್ 5 ಅಂಕ ಸಂಪಾದಿಸಿದರು.
ಗುಜರಾತ್ ಜೈಂಟ್ಸ್ ಹಾಗೂ ತಮಿಳ್ ತಲೈವಾಸ್ ಪಂದ್ಯವೂ ಟೈನಲ್ಲಿ ಅಂತ್ಯ!
ಮೊದಲಾರ್ಧದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಮುನ್ನಡೆ ಕಾಯ್ದುಕೊಂಡಿತ್ತು. ಜೈಪುರ್ 18 ಅಂಕ ಸಂಪಾದಿಸಿದ್ದರೆ, ಪಾಟ್ನಾ 14 ಅಂಕ ಗಳಿಸಿತು. ಈ ಮೂಲಕ ಪಾಟ್ನ ಫಸ್ಟ್ ಹಾಫ್‌ನಲ್ಲಿ 4 ಅಂಕಗಳ ಹಿನ್ನಡೆ ಕಂಡಿತು. ಆದರೆ ರೈಡ್ ಪಾಯಿಂಟ್ಸ್‌ನಲ್ಲಿ ಜೈಪುರ್ 12 ಅಂಕಗಳಿಸಿದ್ದರೆ. ಪಾಟ್ನಾ 11 ಅಂಕಗಳಿಸಿತ್ತು. ಪಾಟ್ನಾ ತಂಡವನ್ನು ಆಲೌಟ್ ಮಾಡಿದ ಕಾರಣ ಜೈಪುರ್ 2 ಅಂಕ ಸಂಪಾದಿಸಿತ್ತು.
ದ್ವಿತಿಯಾರ್ಧದಲ್ಲಿ ಪಾಟ್ನಾ ಪೈರೈಟ್ಸ್ ಆಕ್ರಮಣ ಆಟ ಹೆಚ್ಚಿಸಿತು. ರೈಡಿಂಗ್‌ನಲ್ಲಿ ಜೈಪುರು ಹಾಗೂ ಪಾಟ್ನಾ 11 ಅಂಕ ಸಂಪಾದಿಸಿತ್ತು. ಇನ್ನು ಟ್ಯಾಕಲ್‌ನಲ್ಲಿ ತಲಾ 4 ಅಂಕ ಗಳಿಸಿತ್ತು. ಆಲೌಟ್ ಪಾಯಿಂಟ್ಸ್‌ನಲ್ಲಿ ಜೈಪುರ್ 2 ಅಂಕ ಸಂಪಾದಿಸಿತ್ತು. ಇದರೊಂದಿಗೆ ಸೆಕೆಂಡ್ ಹಾಫ್‌ನಲ್ಲಿ ಜೈಪುರ್ 17 ಹಾಗೂ ಪಾಟ್ನಾ 16 ಅಂಕ ಗಳಿಸಿತು.
ರೋಚಕ ಹೋರಾಟಕ್ಕೆ ಸಾಕ್ಷಿಯಾದ ಬೆಂಗಳೂರು, ಜೈಪುರ ಮಣಿಸಿದ ಯುಪಿ ಯೋಧಾಸ್!
ಒಂದೇ ದಿನ ಡಬಲ್ ಟೈ!
ಶನಿವಾರ ಪ್ರೊ ಕಬಡ್ಡಿ 9ನೇ ಆವೃತ್ತಿಯ ರೋಚಕ ಪಂದ್ಯಗಳಿಗೆ ಸಾಕ್ಷಿಯಾಯಿತು. ದಿನದ ಮೊದಲೆರಡು ಪಂದ್ಯಗಳು ಟೈನಲ್ಲಿ ಕೊನೆಗೊಂಡವು. ಪಾಟ್ನಾ ಪೈರೇಟ್ಸ್ ಹಾಗೂ ಪುಣೇರಿ ಪಲ್ಟನ್ 34-34ರಲ್ಲಿ ಡ್ರಾಗೆ ತೃಪ್ತಿಪಟ್ಟರೆ, ಪವನ್‌ರನ್ನು ಕಳೆದುಕೊಂಡು ಆಘಾತಕ್ಕೊಳಗಾದ ತಲೈವಾಸ್ 31-31ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಟೈಗೆ ಸಮಾಧಾನಪಟ್ಟುಕೊಂಡಿತು.
ಪುಣೆ ಹಾಗೂ ಪಾಟ್ನಾ ಸಮಬಲದ ಹೋರಾಟ ಪ್ರದರ್ಶಿಸಿದವು. ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿದರೂ 20 ನಿಮಿಷಗಳ ಮುಕ್ತಾಯಕ್ಕೆ ಪುಣೆ 23-16ರ ಮುನ್ನಡೆ ಪಡೆಯಿತು. ಆದರೆ ದ್ವಿತೀಯಾರ್ಧದಲ್ಲಿ 5 ನಿಮಿಷಗಳಲ್ಲಿ 8 ಅಂಕ ಗಳಿಸಿದ ಪಾಟ್ನಾ ಮೇಲುಗೈ ಸಾಧಿಸಿತು. ಆದರೆ ಕೊನೆಯಲ್ಲಿ ಎರಡೂ ತಂಡಗಳಿಗೆ ಗೆಲುವು ಸಿಗಲಿಲ್ಲ.
ಇನ್ನು ಗುಜರಾತ್-ತಲೈವಾಸ್ ಪಂದ್ಯವೂ ರೋಚಕವಾಗಿತ್ತು. ಎರಡೂ ಅವಧಿಗಳಲ್ಲಿ ಸಮಬಲದ ಹೋರಾಟ ಕಂಡುಬಂತು. ಗುಜರಾತ್‌ನ ರಾಕೇಶ್ 13 ರೈಡ್ ಅಂಕ ಪಡೆದರೆ, ತಲೈವಾಸ್ ನರೇಂದರ್ 10 ರೈಡ್ ಅಂಕ ಗಳಿಸಿದರು.