Pro Kabaddi League ಗುಜರಾತ್ ಜೈಂಟ್ಸ್ ಹಾಗೂ ತಮಿಳ್ ತಲೈವಾಸ್ ಪಂದ್ಯವೂ ಟೈನಲ್ಲಿ ಅಂತ್ಯ!
ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್ ಟೂರ್ನಿಯ ಎರಡನೇ ದಿನ ರೋಚಕ ಟೈ ಪಂದ್ಯ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಇಂದಿನ ದ್ವಿತೀಯ ಪಂದ್ಯವೂ ಟೈನಲ್ಲಿ ಅಂತ್ಯಗೊಂಡಿದೆ.
ಬೆಂಗಳೂರು(ಅ.08) : ಪ್ರೋ ಕಬಡ್ಡಿ ಲೀಗ್ 9ನೇ ಆವೃತ್ತಿ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಇದೀಗ ಎರಡನೇ ದಿನ ಟೂರ್ನಿ ರೋಚಕತೆ ಮತ್ತಷ್ಟು ಹೆಚ್ಚಾಗಿದೆ. ದ್ವಿತೀಯ ದಿನದ ಮೊದಲ ಪಂದ್ಯ ಟೈನಲ್ಲಿ ಅಂತ್ಯಗೊಂಡರೆ, ಗುಜರಾತ್ ಜೈಂಟ್ಸ್ ಹಾಗೂ ತಮಿಳ್ ತಲೈವಾಸ್ ನಡುವಿನ ರೋಚಕ ಪಂದ್ಯ ಕೂಡ ಟೈನಲ್ಲಿ ಅಂತ್ಯಗೊಂಡಿದೆ. 31-31 ಅಂಕಗಳ ಅಂತರದಲ್ಲಿ ಈ ಪಂದ್ಯ ಸಮಬಲಗೊಂಡಿತು. ದಿನದ ಮೊದಲ ಪಂದ್ಯದಲ್ಲೂ ಪಾಟ್ನಾ ಪೈರೇಟ್ಸ್ ಹಾಗೂ ಪುಣೇರಿ ಪಲ್ಟನ್ ತಂಡಗಳು ಸಮಬಲ ಸಾಧಿಸಿದ್ದವು. ತಮಿಳು ತಲೈವಾಸ್ ತಂಡ ನಾಯಕ ಪವನ್ ಶೆರಾವತ್ ಅವರ ಅನುಪಸ್ಥಿತಿಯಲ್ಲೂ ಉತ್ತಮ ಪ್ರದರ್ಶನ ತೋರಿತು. ಯುವ ಆಟಗಾರರು ಕೊನೆಯ ಕ್ಷಣದವರೆಗೂ ಸೋಲನ್ನು ಒಪ್ಪಿಕೊಳ್ಳದೆ ಸಮಬಲ ಸಾಧಿಸಿದರು.
ಗುಜರಾತ್ ಜಯಂಟ್ಸ್ ಪರ ರಾಕೇಶ್ ರೈಡಿಂಗ್‌ನಲ್ಲಿ 13 ಅಂಕಗಳನ್ನು ಗಳಿಸಿ ತಂಡದ ಯಶಸ್ಸಿಗೆ ನೆರವಾದರು, ನಾಯಕ ಚಂದ್ರನ್ ರಂಜಿತ್ ಜವಾಬ್ದಾರಿಯುತ ಆಟ ಗುಜರಾತ್ ಜಯಂಟ್ಸ್ ತಂಡವನ್ನು ಸೋಲಿನಿಂದ ಪಾರು ಮಾಡಿತು. ತಮಿಳು ತಲೈವಾಸ್‌ನ ನರೇಂದರ್ 10 ಅಂಕಗಳನ್ನು ಗಳಿಸಿ ಸಮಬಲದ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ತಲೈವಾಸ್ ತಂಡ ಒಂದು ಹಂತದಲ್ಲಿ ಮುನ್ನಡೆ ಕಂಡುಕೊಂಡಿತ್ತು. ಆದರೆ ಎದುರಾಳಿಯ ರೈಡಿಂಗ್‌ನಲ್ಲಿ ನಿರಂತರ ಅಂಕಗಳನ್ನು ನೀಡಿ ಜಯದ ಅವಕಾಶವನ್ನು ಕಳೆದುಕೊಂಡಿತು. ಚೊಚ್ಚಲ ಪ್ರೊ ಕಬಡ್ಡಿ ಲೀಗ್ ಆಡುತ್ತಿರುವ ನರೇಂದರ್ ರೈಡಿಂಗ್‌ನಲ್ಲಿ ಸೂಪರ್ 10 ಸಾಧನೆ ಮಾಡಿ ತಂಡಕ್ಕೆ ನೆರವಾದರು, ಗುಜರಾತ್ ಜಯಂಟ್ಸ್ ತಂಡದ ರಾಕೇಶ್ ಕೂಡ ಸೂಪರ್ 10 ಸಾಧನೆ ಮಾಡಿದರು.
PRO KABADDI LEAGUE ಪಾಟ್ನಾ ಪೈರೇಟ್ಸ್ ಹಾಗೂ ಪುಣೇರಿ ಪಲ್ಟನ್ ಪಂದ್ಯ ರೋಚಕ ಟೈನಲ್ಲಿ ಅಂತ್ಯ!
ಶೆರಾವತ್ ಉತ್ತಮ ಆಟಗಾರ ಆದರೆ ಕಬಡ್ಡಿ ಸಂಘಟಿತ ಆಟ. ನಾಯಕನ ಅನುಪಸ್ಥಿತಿಯಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದ ತಲೈವಾಸ್ ಸಂಘಟಿತ ಹೋರಾಟ ನೀಡಿ ದ್ವಿತಿಯಾರ್ಧದ ಆರಂಭದಲ್ಲೇ ಗುಜರಾತ್ ಜಯಂಟ್ಸ್ ತಂಡವನ್ನು ಆಲೌಟ್ ಮಾಡಿ ಮುನ್ನಡೆ ಕಂಡಿತು. ಶೆರಾವತ್ ಔಟ್, ತಲೈವಾಸ್‌ಗೆ ಆರಂಭಿಕ ಹಿನ್ನಡೆ: ಪ್ರಸಕ್ತ ವಿವೋ ಪ್ರೋ ಕಬಡ್ಡಿ ಲೀಗ್‌ನಲ್ಲಿ ಅತ್ಯಂತ ದುಬಾರಿ ಆಟಗಾರರೆನಿಸಿರುವ ತಮಿಳು ತಲೈವಾಸ್ ತಂಡದ ನಾಯಕ ಪವನ್ ಶೆರಾವತ್ ಗಾಯಗೊಂಡು ಅಂಗಣದಿಂದ ಹೊರನಡೆದ ಕಾರಣ ಗುಜರಾತ್ ಜಯಂಟ್ಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ತಮಿಳು ತಲೈವಾಸ್ 16-18 ಅಂತರದಲ್ಲಿ ಹಿನ್ನಡೆ ಕಂಡಿತು. ನಾಯಕನ ಅನುಪಸ್ಥಿತಿಯಲ್ಲೂ ತಮಿಳು ತಂಡ ಉತ್ತಮ ಹೋರಾಟ ನೀಡಿತು.
ಇಂಜುರಿ ಕಾರಣ ಪವನ್ ಶೆರಾವತ್ ಮೊದಲ ಪಂದ್ಯದಿಂದ ವಂಚಿತರಾದರು. ಶೆರಾವತ್ ಅನುಪಸ್ಥಿತಿಯಲ್ಲಿ ಗುಜರಾತ್ ತಂಡದ ನಾಯಕ ಚಂದ್ರನ್ ರಂಜಿತ್ (5) ಹಾಗೂ ರಾಕೇಶ್ (8) ಉತ್ತಮ ರೀತಿಯಲ್ಲಿ ಅಂಕಗಳನ್ನು ಗಳಿಸಿ ತಂಡದ ಮುನ್ನಡೆಗೆ ನೆರವಾದರು. ನಾಯಕನ ಅನುಪಸ್ಥಿತಿಯಲ್ಲಿ ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳದ ತಮಿಳು ತಲೈವಾಸ್, ನರೇಂದರ್ ರೈಡಿಂಗ್‌ನಲ್ಲಿ 6 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಸಾಹಿಲ್ ಗುಲಿಯಾ ಟ್ಯಾಕಲ್‌ನಲ್ಲಿ 3 ಅಂಕಗಳನ್ನು ಗಳಿಸಿ ತಂಡದಲ್ಲಿ ಆತ್ಮವಿಶ್ವಾಸ ತುಂಬಿದರು,